ವೃದ್ಧೆ ತಂದ ಅವಾಂತರ.. ಇಬ್ಬರ ಸಾವು, ಕಾರವಾರ ಕ್ರಿಮ್ಸ್ ಜಿಲ್ಲಾಸ್ಪತ್ರೆ ಸೀಲ್ ಡೌನ್

| Updated By:

Updated on: Jul 11, 2020 | 4:14 PM

ಉತ್ತರ ಕನ್ನಡ: ಕಾರವಾರದಲ್ಲಿ ವೃದ್ಧೆಯೊಬ್ಬರು ಅನಾರೋಗ್ಯಕ್ಕೆ ತುತ್ತಾಗಿದ್ದು ಮೊದಲಿಗೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದಾರೆ. ತದನಂತರ ಕಾರವಾರಕ್ಕೆ ಬಂದ ವೃದ್ಧೆ ಮಂಗಳೂರಿನಲ್ಲಿ ಚಿಕಿತ್ಸೆ ಪಡೆದ ವಿಚಾರವನ್ನು ಮರೆಮಾಚಿ ಕಾರವಾರದ ಕ್ರಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದಾರೆ. ವೃದ್ಧೆಯ ಟ್ರಾವೆಲ್ ಹಿಸ್ಟರಿ ತಿಳಿಯದ ಆಸ್ಪತ್ರೆ ಸಿಬ್ಬಂದಿ ಮೊದಲಿಗೆ ಜಿಲ್ಲಾಸ್ಪತ್ರೆಯ ಜನರಲ್ ವಾರ್ಡ್ ನಲ್ಲಿ ವೃದ್ಧೆಗೆ ಚಿಕಿತ್ಸೆ ನೀಡಲಾರಂಬಿಸಿದ್ದಾರೆ. ನಂತರ ವೃದ್ಧೆಗೆ ಕೋವಿಡ್ ಟೆಸ್ಟ್ ನೆಡೆಸಲಾಗಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕು ದೃಢವಾದ ಮಾರನೇ ದಿನವೇ ವೃದ್ಧೆ ಸಾವನ್ನಪ್ಪಿದ್ದು ಈಗ ವೃದ್ಧೆಗೆ ಚಿಕಿತ್ಸೆ […]

ವೃದ್ಧೆ ತಂದ ಅವಾಂತರ.. ಇಬ್ಬರ ಸಾವು, ಕಾರವಾರ ಕ್ರಿಮ್ಸ್ ಜಿಲ್ಲಾಸ್ಪತ್ರೆ ಸೀಲ್ ಡೌನ್
Follow us on

ಉತ್ತರ ಕನ್ನಡ: ಕಾರವಾರದಲ್ಲಿ ವೃದ್ಧೆಯೊಬ್ಬರು ಅನಾರೋಗ್ಯಕ್ಕೆ ತುತ್ತಾಗಿದ್ದು ಮೊದಲಿಗೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದಾರೆ. ತದನಂತರ ಕಾರವಾರಕ್ಕೆ ಬಂದ ವೃದ್ಧೆ ಮಂಗಳೂರಿನಲ್ಲಿ ಚಿಕಿತ್ಸೆ ಪಡೆದ ವಿಚಾರವನ್ನು ಮರೆಮಾಚಿ ಕಾರವಾರದ ಕ್ರಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದಾರೆ.

ವೃದ್ಧೆಯ ಟ್ರಾವೆಲ್ ಹಿಸ್ಟರಿ ತಿಳಿಯದ ಆಸ್ಪತ್ರೆ ಸಿಬ್ಬಂದಿ ಮೊದಲಿಗೆ ಜಿಲ್ಲಾಸ್ಪತ್ರೆಯ ಜನರಲ್ ವಾರ್ಡ್ ನಲ್ಲಿ ವೃದ್ಧೆಗೆ ಚಿಕಿತ್ಸೆ ನೀಡಲಾರಂಬಿಸಿದ್ದಾರೆ. ನಂತರ ವೃದ್ಧೆಗೆ ಕೋವಿಡ್ ಟೆಸ್ಟ್ ನೆಡೆಸಲಾಗಿ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸೋಂಕು ದೃಢವಾದ ಮಾರನೇ ದಿನವೇ ವೃದ್ಧೆ ಸಾವನ್ನಪ್ಪಿದ್ದು ಈಗ ವೃದ್ಧೆಗೆ ಚಿಕಿತ್ಸೆ ನೀಡಿದ ವೈದ್ಯ, ನರ್ಸ್, ಟೆಕ್ನಿಕಲ್ ಸಿಬ್ಬಂದಿ ಸೇರಿ 6 ಜನ ಸಿಬ್ಬಂದಿ ವರ್ಗದವರಿಗೂ ಹಾಗೂ ಮೂವರು  ಪಕ್ಕದ ಬೆಡ್ ನಲ್ಲಿದ್ದವರಿಗೂ ಸೋಂಕು ತಗುಲಿರುವುದು ಖಚಿತವಾಗಿದೆ.

ವೃದ್ಧೆ ಚಿಕಿತ್ಸೆಗೊಳಗಾಗಿದ್ದ ಬೆಡ್ ನ ಪಕ್ಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 35 ವರ್ಷದ ವ್ಯಕ್ತಿಯೂ ಕಳೆದ ರಾತ್ರಿ ಸಾವನ್ನಪ್ಪಿದ್ದು ಈಗ ಕ್ರಿಮ್ಸ್ ಜಿಲ್ಲಾಸ್ಪತ್ರೆಯನ್ನು 48 ಗಂಟೆಗಳ ಕಾಲ ಸೀಲ್ ಡೌನ್ ಮಾಡಲಾಗಿದೆ. ತುರ್ತುಚಿಕಿತ್ಸೆ, ಹೆರಿಗೆ ವಿಭಾಗಗಳನ್ನು ಹೊರತುಪಡಿಸಿ, ಐಸಿಯು, ಎಂಐಸಿಯು ಸೇರಿದಂತೆ ಬೇರೆಲ್ಲಾ ವಿಭಾಗಗಳನ್ನು ಸೀಲ್ ಡೌನ್ ಮಾಡಲಾಗಿದೆಯೆಂದು ಕಾರವಾರ ಕ್ರಿಮ್ಸ್ ನಿರ್ದೇಶಕ ಗಜಾನನ ನಾಯಕ್ ಟಿವಿ9 ಗೆ ತಿಳಿಸಿದ್ದಾರೆ.

Published On - 3:01 pm, Sat, 11 July 20