ಕಾಯಿಸಿದ ಎದೆ ಹಾಲು ಕೊರೊನಾ ವೈರಸ್‌ ತಡೆಯುತ್ತಾ? ಈ ಲೇಖನ ಓದಿ..

ಕೊರೊನಾ ಹೆಮ್ಮಾರಿ ಮಗುವಿಗೆ ಹರಡದಂತೆ ತಡೆಯಲು ಕಾಯಿಸಿದ ಎದೆ ಹಾಲು ಮದ್ದು ಅಂತಾ ಕೆನಡಾದ ವಿಜ್ಞಾನಿಗಳು ಹೇಳಿದ್ದಾರೆ. ಈ ಬಗ್ಗೆ ಸಮಗ್ರ ಸಂಶೋಧನೆ ನಡೆಸಿರುವ ಕೆನಡಾದ ಟೊರಂಟೋ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು, ಎದೆ ಹಾಲನ್ನು ಕಾಯಿಸಿ ಮಗುವಿಗೆ ನೀಡುವುದರಿಂದ ಕೊರೊನಾ ಸೋಂಕು ಹರಡುವುದಿಲ್ಲ ಎಂದಿದ್ದಾರೆ. ಅಂದ ಹಾಗೆ ಇದು ಕೇವಲ ಕೊರೊನಾ ಸೋಂಕಿತ ತಾಯಿಯ ಎದೆ ಹಾಲಿಗೆ ಮಾತ್ರ. ಸೋಂಕಿತ ತಾಯಿಂದಿರ ಎದೆ ಹಾಲನ್ನು 62.5 ಡಿಗ್ರಿ ಸೆಲ್ಸಿಯಸ್ನಲ್ಲಿ ಕಾಯಿಸಿದಾಗ ಅದರಲ್ಲಿನ ಸೋಂಕು ಸಾಯುತ್ತದೆ. ಆಗ ಆ […]

ಕಾಯಿಸಿದ ಎದೆ ಹಾಲು ಕೊರೊನಾ ವೈರಸ್‌ ತಡೆಯುತ್ತಾ? ಈ ಲೇಖನ ಓದಿ..
Follow us
Guru
| Updated By:

Updated on:Jul 11, 2020 | 4:27 PM

ಕೊರೊನಾ ಹೆಮ್ಮಾರಿ ಮಗುವಿಗೆ ಹರಡದಂತೆ ತಡೆಯಲು ಕಾಯಿಸಿದ ಎದೆ ಹಾಲು ಮದ್ದು ಅಂತಾ ಕೆನಡಾದ ವಿಜ್ಞಾನಿಗಳು ಹೇಳಿದ್ದಾರೆ. ಈ ಬಗ್ಗೆ ಸಮಗ್ರ ಸಂಶೋಧನೆ ನಡೆಸಿರುವ ಕೆನಡಾದ ಟೊರಂಟೋ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು, ಎದೆ ಹಾಲನ್ನು ಕಾಯಿಸಿ ಮಗುವಿಗೆ ನೀಡುವುದರಿಂದ ಕೊರೊನಾ ಸೋಂಕು ಹರಡುವುದಿಲ್ಲ ಎಂದಿದ್ದಾರೆ.

ಅಂದ ಹಾಗೆ ಇದು ಕೇವಲ ಕೊರೊನಾ ಸೋಂಕಿತ ತಾಯಿಯ ಎದೆ ಹಾಲಿಗೆ ಮಾತ್ರ. ಸೋಂಕಿತ ತಾಯಿಂದಿರ ಎದೆ ಹಾಲನ್ನು 62.5 ಡಿಗ್ರಿ ಸೆಲ್ಸಿಯಸ್ನಲ್ಲಿ ಕಾಯಿಸಿದಾಗ ಅದರಲ್ಲಿನ ಸೋಂಕು ಸಾಯುತ್ತದೆ. ಆಗ ಆ ಹಾಲನ್ನು ಮಗುವಿಗೆ ಅಥವಾ ಬೇರಾವುದೇ ಮಗುವಿಗೆ ಕುಡಿಸಿದಾಗ ಯಾವುದೇ ಕೊರೊನಾ ಸೋಂಕು ತಗುಲುವುದಿಲ್ಲ ಎಂದು ಟೊರಂಟೋ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಇದುವರೆಗೆ ಕೋರೊನಾ ಸೋಂಕಿತ ತಾಯಿಯಿಂದ ಮಗುವಿಗೆ ಹಾಲುಣಿಸಿದಾಗ ಯಾವುದೇ ಸೋಂಕು ಪ್ರಸಾರವಾದ ಪ್ರಕರಣಗಳು ವರದಿಯಾಗಿಲ್ಲ ಎಂದಿದೆ. ಆದ್ರೆ ಕೆನಡಾದ ಟೊರಂಟೋ ವಿಶ್ವವಿದ್ಯಾಲಯದ ಸಂಶೋಧಕರು ಮಾತ್ರ, ಕೊರೊನಾ ಸೋಂಕಿತ ತಾಯಿಯಿಂದ ಹಾಲಿನ ಮುಖಾಂತರ ಅಥವಾ ಹಾಲುಣಿಸುವಾಗ ಅಥವಾ ಹಾಲಿನಲ್ಲಿ ಉಸಿರಾಡಿದಾಗ ಬೀಳುವ ಕಣಗಳಿಂದ ಸೋಂಕು ಹರಡುತ್ತೆ.

ಆದ್ರೆ ಎದೆ ಹಾಲನ್ನು ಸುಮಾರು 30 ನಿಮಿಷಗಳ ಕಾಲ 62.5 ಡಿಗ್ರಿ ಸೆಲ್ಸಿಯಸ್ನಲ್ಲಿ ಕಾಯಿಸಿದಾಗ ಯಾವುದೇ ವೈರಸ್​ಗಳು ಬದುಕುವುದಿಲ್ಲ. ಆಗ ಆ ಹಾಲನ್ನು ಮಗುವಿಗೆ ಕುಡಿಸಬಹುದು, ಈ ಮೂಲಕ ಸೋಂಕು ಹರಡದಂತೆ ತಡೆಯಬಹುದು ಎಂದಿದ್ದಾರೆ. ಈ ಸಂಬಂಧ ಕೆನೆಡಿಯನ್ ಮೆಡಿಕಲ್ ಅಸೋಶಿಯೇಶನ್ ಜರ್ನಲ್ನಲ್ಲಿ ಲೇಖನ ಕೂಡಾ ಪ್ರಕಟವಾಗಿದೆ.

ತಾಯಿ ಮಗುವಿಗೆ ಉಣಿಸುವ ಎದೆ ಹಾಲು ಅಮೃತ, ಹೀಗಾಗಿಯೇ ಹುಟ್ಟುವ ಮಗುವಿಗೆ ಕನಿಷ್ಟ ಆರು ತಿಂಗಳು ಕಡ್ಡಾಯವಾಗಿ ಎದೆ ಹಾಲುಣಿಸಿ ಎಂದು ವೈದ್ಯರು ತಾಯಿಂದಿರಿಗೆ ಸಲಹೆ ನೀಡುತ್ತಾರೆ. ಆದ್ರೆ ಕೊರೊನಾ ಸಂಕಷ್ಟದ ಸಮಯದಲ್ಲಿ  ಸಾಕಷ್ಟು ಸೋಂಕಿತ ತಾಯಿಂದಿರು ಮಗುವಿಗೆ ಹಾಲುಣಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕೆನಡಾದ ವಿಜ್ಞಾನಿಗಳ ಆ ಸಂಶೋಧನೆ ತಾಯಿಂದಿನ ಆತಂಕವನ್ನ ದೂರ ಮಾಡಬಹುದು.

Published On - 3:33 pm, Sat, 11 July 20

ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ