ಕೊರೊನಾ ನಿಯಮ ಗಾಳಿಗೆ ತೂರಿ, ಪ್ರವಾಸಿ ಮಂದಿರ ಉದ್ಘಾಟಿಸಿದ ಇಬ್ಬರು DCM
ಬೆಳಗಾವಿ: ನಿಯಮಗಳನ್ನು ಪಾಲಿಸಿ ಜನರಿಗೆ ಮಾದರಿಯಾಗಬೇಕಿರುವ ನಮ್ಮ ನಾಯಕರು ನಿಯಮಗಳನ್ನು ಮುರಿಯುತ್ತಿದ್ದಾರೆ. ಇಂಥದ್ದೇ ಒಂದು ಘಟನೆ ಜಿಲ್ಲೆಯ ನಿಪ್ಪಾಣಿಯಲ್ಲಿ ನಡೆದಿದೆ. ನಿಪ್ಪಾಣಿಯಲ್ಲಿರುವ ನೂತನ ಪ್ರವಾಸಿ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಇಂದು DCMಗಳಾದ ಲಕ್ಷ್ಮಣ ಸವದಿ ಹಾಗೂ ಗೋವಿಂದ ಕಾರಜೋಳ ಪಾಲ್ಗೊಂಡಿದ್ದರು. ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಸಹ ಉಪಸ್ಥಿತರಿದ್ದರು. ಇದೇ ವೇಳೆ ಸಮಾರಂಭದಲ್ಲಿ ಅಧಿಕಾರಿಗಳು ಸೇರಿದಂತೆ 100ಕ್ಕೂ ಹೆಚ್ಚು ಜನರು ಸಹ ಭಾಗಿಯಾಗಿದ್ದರು. ಜೊತೆಗೆ, ಸಾಮಾಜಿಕ ಅಂತರವನ್ನೂ ಸಹ ಪಾಲಿಸಲಿಲ್ಲ. ಹಾಗಾಗಿ, ಜನರಿಗೆ […]
ಬೆಳಗಾವಿ: ನಿಯಮಗಳನ್ನು ಪಾಲಿಸಿ ಜನರಿಗೆ ಮಾದರಿಯಾಗಬೇಕಿರುವ ನಮ್ಮ ನಾಯಕರು ನಿಯಮಗಳನ್ನು ಮುರಿಯುತ್ತಿದ್ದಾರೆ. ಇಂಥದ್ದೇ ಒಂದು ಘಟನೆ ಜಿಲ್ಲೆಯ ನಿಪ್ಪಾಣಿಯಲ್ಲಿ ನಡೆದಿದೆ.
ನಿಪ್ಪಾಣಿಯಲ್ಲಿರುವ ನೂತನ ಪ್ರವಾಸಿ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಇಂದು DCMಗಳಾದ ಲಕ್ಷ್ಮಣ ಸವದಿ ಹಾಗೂ ಗೋವಿಂದ ಕಾರಜೋಳ ಪಾಲ್ಗೊಂಡಿದ್ದರು. ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಸಹ ಉಪಸ್ಥಿತರಿದ್ದರು.
ಇದೇ ವೇಳೆ ಸಮಾರಂಭದಲ್ಲಿ ಅಧಿಕಾರಿಗಳು ಸೇರಿದಂತೆ 100ಕ್ಕೂ ಹೆಚ್ಚು ಜನರು ಸಹ ಭಾಗಿಯಾಗಿದ್ದರು. ಜೊತೆಗೆ, ಸಾಮಾಜಿಕ ಅಂತರವನ್ನೂ ಸಹ ಪಾಲಿಸಲಿಲ್ಲ. ಹಾಗಾಗಿ, ಜನರಿಗೆ ನಿಯಮಗಳನ್ನು ಪಾಲಿಸಲು ಕಿವಿಮಾತು ಹೇಳುವ ನಾಯಕರೇ ನಿಯಮಗಳನ್ನು ಮುರಿಯುವುದು ಎಷ್ಟು ಸರಿ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
Published On - 1:48 pm, Sat, 11 July 20