ಕೈಗೆ ಸೀಲ್ ಹಾಕಿದ್ರೂ ಡೋಂಟ್ ಕೇರ್, ಇಬ್ಬರನ್ನ ಬಂಧಿಸಿ ಮತ್ತೆ ಕ್ವಾರಂಟೈನ್​ ಮಾಡಿದ ಪೊಲೀಸರು

|

Updated on: Jun 07, 2020 | 3:41 PM

ಉಡುಪಿ: ಕೈಗೆ ಕ್ವಾರಂಟೈನ್ ಸೀಲ್ ಇದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ಅಲೆದಾಡುತ್ತ ಆತಂಕ ಸೃಷ್ಟಿಸಿದ ಇಬ್ಬರು ಹಿರಿಯ ನಾಗರಿಕರನ್ನು ಪೊಲೀಸರು ಮತ್ತು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ವಶಕ್ಕೆ ಪಡೆದು, ಕ್ವಾರಂಟೈನ್ ಕೇಂದ್ರದಲ್ಲಿ ದಾಖಲಿಸಿದ್ದಾರೆ. ಇವರಲ್ಲಿ ಒಬ್ಬರು ಕೇರಳದ ಮಠದ ಸ್ವಾಮೀಜಿ ಎಂದು ತಿಳಿದು ಬಂದಿದೆ. ಇವರು ಕೇರಳ ಮಾರ್ಗವಾಗಿ ಮಂಗಳೂರು ಮೂಲಕ ಉಡುಪಿಗೆ ಬಸ್ಸಿನಲ್ಲಿ ಆಗಮಿಸಿದ್ದರು. ಇವರ ಕೈ ಮೇಲೆ ಕ್ವಾರಂಟೈನ್ ಮುದ್ರೆ ಹಾಕಿರುವುದು ಕಂಡು ಬಂದಿದೆ. ಹಾಗೆಯೇ ವಾರಣಾಸಿಯಿಂದ ರೈಲು ಮೂಲಕ ಮಂಗಳೂರಿಗೆ ಆಗಮಿಸಿದ […]

ಕೈಗೆ ಸೀಲ್ ಹಾಕಿದ್ರೂ ಡೋಂಟ್ ಕೇರ್, ಇಬ್ಬರನ್ನ ಬಂಧಿಸಿ ಮತ್ತೆ ಕ್ವಾರಂಟೈನ್​ ಮಾಡಿದ ಪೊಲೀಸರು
Follow us on

ಉಡುಪಿ: ಕೈಗೆ ಕ್ವಾರಂಟೈನ್ ಸೀಲ್ ಇದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ಅಲೆದಾಡುತ್ತ ಆತಂಕ ಸೃಷ್ಟಿಸಿದ ಇಬ್ಬರು ಹಿರಿಯ ನಾಗರಿಕರನ್ನು ಪೊಲೀಸರು ಮತ್ತು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ವಶಕ್ಕೆ ಪಡೆದು, ಕ್ವಾರಂಟೈನ್ ಕೇಂದ್ರದಲ್ಲಿ ದಾಖಲಿಸಿದ್ದಾರೆ. ಇವರಲ್ಲಿ ಒಬ್ಬರು ಕೇರಳದ ಮಠದ ಸ್ವಾಮೀಜಿ ಎಂದು ತಿಳಿದು ಬಂದಿದೆ. ಇವರು ಕೇರಳ ಮಾರ್ಗವಾಗಿ ಮಂಗಳೂರು ಮೂಲಕ ಉಡುಪಿಗೆ ಬಸ್ಸಿನಲ್ಲಿ ಆಗಮಿಸಿದ್ದರು.

ಇವರ ಕೈ ಮೇಲೆ ಕ್ವಾರಂಟೈನ್ ಮುದ್ರೆ ಹಾಕಿರುವುದು ಕಂಡು ಬಂದಿದೆ. ಹಾಗೆಯೇ ವಾರಣಾಸಿಯಿಂದ ರೈಲು ಮೂಲಕ ಮಂಗಳೂರಿಗೆ ಆಗಮಿಸಿದ ಶಿವಮೊಗ್ಗ ಮೂಲದ ಮಹಿಳೆಯೋರ್ವಳು, ಮಂಗಳೂರಿನಿಂದ ಊರಿಗೆ ತೆರಳಲೆಂದು ಉಡುಪಿಗೆ ಆಗಮಿಸಿದ್ದರು. ಇವರಿಗೂ ಕ್ವಾರಂಟೈನ್ ಮುದ್ರೆ ಹಾಕಲಾಗಿದೆ.

ಎರಡು ಪ್ರಯಾಣಿಕರು ಹೊರ ರಾಜ್ಯದಿಂದ ಜಿಲ್ಲೆಗೆ ಪ್ರವೇಶ ಪಡೆದವರಾಗಿದ್ದರು. ಉಡುಪಿ ಸರ್ವಿಸ್ ಬಸ್ ನಿಲ್ದಾಣದಲ್ಲಿ ಇವರಿಬ್ಬರು ಸಂಚರಿಸುತ್ತಿದ್ದಾಗ ಸಾರ್ವಜನಿಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾರ್ಯಾಚರಣೆಯಲ್ಲಿ ಸಮಾಜಸೇವಕ ನಿತ್ಯಾನಂದ ಒಳಕಾಡು ಇಲಾಖೆಗೆ ಸಹಕಾರ ನೀಡಿದರು.

Published On - 1:37 pm, Sun, 7 June 20