ಕೊಡಗು: ಮಾಸ್ಕ್ ಹಾಕುವಂತೆ ಹೇಳಿದಕ್ಕೆ ರೋಚಿಗೆದ್ದ ಯುವಕರ ಗುಂಪು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ ಅವರ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ತಡ ರಾತ್ರಿ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ನಡೆದಿದೆ.
ಈ ನೀಚರು ಹುಡುಗಿಯರನ್ನು ಚುಡಾಯಿಸುತ್ತಿದ್ದರು..
ಅಷ್ಟೇ ಅಲ್ಲದೆ ಈ ನೀಚರು ಹುಡುಗಿಯರನ್ನು ಚುಡಾಯಿಸುತ್ತಿದ್ದರು ಎಂಬ ಆರೋಪವು ಸಹ ಕೇಳಿಬಂದಿದೆ. ಇದರ ಬಗ್ಗೆ ಕ್ಷೇತ್ರದ ಸೆಕ್ಯೂರಿಟಿ ಸಿಬ್ಬಂದಿ ಎಚ್ಚರಿಕೆ ನೀಡಿದರು ಸಹ ಪುಂಡರು ತಲೆ ಕೆಡಿಸಿಕೊಂಡಿಲ್ಲ. ಕ್ಷೇತ್ರಕ್ಕೆ ಬಂದಿದ್ದ ದಕ್ಷಿಣ ಕೊಡಗಿನ ಹಲವು ಭಕ್ತರಿಂದಲೂ ಯುವಕರಿಗೆ ಎಚ್ಚರಿಕೆ ನೀಡಿದರು ಕ್ಯಾರೆ ಎಂದಿಲ್ಲ.
ಬುದ್ದಿವಾದ ಹೇಳಲು ಬಂದ ಸ್ಥಳೀಯರ ಮೇಲೆ ಈ ಪುಂಡರ ಹಿಂಡು ಹಲ್ಲೆಗೆ ಮುಂದಾಗಿದೆ. ಇವರ ಈ ವರ್ತನೆ ಕಂಡ ಸ್ಥಳೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಯಂತ್ರಣ ಮಾಡಿ. ದಾಂದಲೆ ನಿರತ ಯುವಕರನ್ನು ವಶಕ್ಕೆ ಪಡೆದ ಪೊಲೀಸರು, ತಡರಾತ್ರಿ ಹತ್ತು ಮಂದಿ ಪುಂಡರ ವಿರುದ್ದ ಕೇಸ್ ದಾಖಲಿಸಿದ್ದಾರೆ.