ಬೆಂಗಳೂರು: ವಲಸೆ ಕಾರ್ಮಿಕರ ಜೊತೆ ಅಸಭ್ಯ ವರ್ತನೆ ತೋರಿ ದರ್ಪ ಮೆರೆದಿದ್ದ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯ ASI ರಾಜಾಸಾಬ್ ಅಮಾನತಾಗಿದ್ದಾರೆ. ರಾಜಾಸಾಬ್ರನ್ನು ಸಸ್ಪೆಂಡ್ ಮಾಡಿ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಆದೇಶಿಸಿದ್ದಾರೆ.
ಲಾಕ್ಡೌನ್ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ವಲಸೆ ಕಾರ್ಮಿಕರನ್ನು ಹೊರ ರಾಜ್ಯಕ್ಕೆ ಮತ್ತು ಹೊರ ಜಿಲ್ಲೆಗಳಿಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿತ್ತು. ತಮ್ಮ ರಾಜ್ಯಕ್ಕೆ ತೆರಳು ವಲಸೆ ಕಾರ್ಮಿಕರು ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗೆ ಬಂದಿದ್ದರು. ಇಲ್ಲಿ ನೋಂದಣಿ ಮಾಡುವುದಿಲ್ಲ ಹೋಗಿ ಎಂದು ವಲಸೆ ಕಾರ್ಮಿಕರ ಜತೆ ಅಸಭ್ಯವಾಗಿ ವರ್ತಿಸಿ, ಥಳಿಸಿದ್ದರು.
ಅಲ್ಲದೆ ಕಾರ್ಮಿಕನ ಮೇಲೆ ಕೈಮಾಡಿ, ಬೂಟುಗಾಲಿನಿಂದ ಎಎಸ್ಐ ರಾಜಾಸಾಬ್ ಒದ್ದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹಾಗಾಗಿ ರಾಜಾಸಾಬ್ರನ್ನು ಡಿಸಿಪಿ ಶರಣಪ್ಪ ಅಮಾನತು ಮಾಡಿದ್ದಾರೆ.
Published On - 7:51 pm, Mon, 11 May 20