AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹದಿಹರೆಯದ Facebook ಗೆ ಹೊಸ ಲುಕ್! ಇದನ್ನು ನೀವು ಇಷ್ಟಪಡುತ್ತೀರಿ..

ತನ್ನಲ್ಲಿ ವಿಶಿಷ್ಟವಾಗಿ ಅಡಗಿಸಿಕೊಂಡಿರುವ user-friendly ಅಂಶಗಳು-ಆಶಯಗಳೊಂದಿಗೆ ಜಗತ್ತಿನಾದ್ಯಂತ ನೆಟ್ಟಿಗರ ಫೇವರೇಟ್ ಆಗಿರುವ ಫೇಸ್​ಬುಕ್​ ಕಾಲಕಾಲಕ್ಕೆ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಇರುತ್ತದೆ. ಈ ಬಾರಿಯೂ ತಾನೊಂದು ಹೊಸ ಪ್ರಯೋಗ ಮಾಡಿದ್ದು, ಖಂಡಿತ ಅದು ನಿಮ್ಮ ಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತದೆ ಎಂದು 16ರ ಹರೆಯದ ಫೇಸ್​ಬುಕ್​ ಹೇಳಿಕೊಂಡಿದೆ. Desk Top, Lap Top, App Store, Play Store ಗಳಲ್ಲಿ Facebook ಈ ಹೊಸ ಫೀಚರ್ ಅಳವಡಿಸಿದೆ. ಏನೂ ಅಂದ್ರೆ..  ಹಗಲು ರಾತ್ರಿ ಅನ್ನದೆ ಫೇಸ್​ಬುಕ್​  ನಿರಂತರವಾಗಿ ಬಳಕೆಯಾಗುತ್ತಿದೆ. […]

ಹದಿಹರೆಯದ Facebook ಗೆ ಹೊಸ ಲುಕ್! ಇದನ್ನು ನೀವು ಇಷ್ಟಪಡುತ್ತೀರಿ..
Facebook
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:May 11, 2020 | 6:39 PM

Share

ತನ್ನಲ್ಲಿ ವಿಶಿಷ್ಟವಾಗಿ ಅಡಗಿಸಿಕೊಂಡಿರುವ user-friendly ಅಂಶಗಳು-ಆಶಯಗಳೊಂದಿಗೆ ಜಗತ್ತಿನಾದ್ಯಂತ ನೆಟ್ಟಿಗರ ಫೇವರೇಟ್ ಆಗಿರುವ ಫೇಸ್​ಬುಕ್​ ಕಾಲಕಾಲಕ್ಕೆ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಇರುತ್ತದೆ. ಈ ಬಾರಿಯೂ ತಾನೊಂದು ಹೊಸ ಪ್ರಯೋಗ ಮಾಡಿದ್ದು, ಖಂಡಿತ ಅದು ನಿಮ್ಮ ಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತದೆ ಎಂದು 16ರ ಹರೆಯದ ಫೇಸ್​ಬುಕ್​ ಹೇಳಿಕೊಂಡಿದೆ.

Desk Top, Lap Top, App Store, Play Store ಗಳಲ್ಲಿ Facebook ಈ ಹೊಸ ಫೀಚರ್ ಅಳವಡಿಸಿದೆ. ಏನೂ ಅಂದ್ರೆ..  ಹಗಲು ರಾತ್ರಿ ಅನ್ನದೆ ಫೇಸ್​ಬುಕ್​  ನಿರಂತರವಾಗಿ ಬಳಕೆಯಾಗುತ್ತಿದೆ. ಇದರಿಂದ ಕಣ್ಣಿಗೆ ಹೆಚ್ಚು ತೊಂದರೆ ಆಗಬಾರದು ಎಂದು Dark Mode ಆಪ್ಷನ್ ತಂದಿದೆ. ಇದರಿಂದ ಇಡೀ ಫೇಸ್​ಬುಕ್ ಪುಟ ಕತ್ತಲೆಯಲ್ಲಿರುವಂತೆ ಕಾಣಿಸುತ್ತದೆ. ಅಂದ್ರೆ ಒಂದು ರೀತಿ Black Reverseನಲ್ಲಿರುತ್ತದೆ. ಇದರಿಂದ ಬೆಳಕು ಹೆಚ್ಚಾಗಿ ನಿಮ್ಮ ಕಣ್ಣು ಕುಕ್ಕುವುದಿಲ್ಲ. ಜೊತೆಗೆ ಬ್ಯಾಟರಿಯೂ ಬೇಗನೇ ಕಡಿಮೆಯಾಗುವುದಿಲ್ಲ.

ಈ ಹೊಸ ಫೀಚರ್​ನಿಂದ ಫೇಸ್​ಬುಕ್​ ಪುಟಗಳಲ್ಲಿ ನೀವು ಲೀಲಾಜಾಲವಾಗಿ ವಿಹರಿಸಬಹುದು. ಮುಖ್ಯವಾಗಿ ಬ್ಯಾಟರಿ ದೀರ್ಘ ಕಾಲ ಬಾಳಿಕೆ ಬರುತ್ತದೆ. ಒಂದು ವೇಳೆ Facebook ಮೂಲಕವೇ Dark Mode ಅಳವಡಿಸಿಕೊಳ್ಳಲು ಸಾಧ್ಯವಾಗದಿದ್ದರೆ Chromeಅನ್ನೇ Dark Mode ಆಪ್ಷನ್ ಗೆ ಬದಲಾಯಿಸಿಕೊಂಡು ನೋಡಿ.

ಹೇಗೆ ಈ Dark Modeಗೆ ಶಿಫ್ಟ್​ ಆಗುವುದು? ಇಲ್ಲಿದೆ ಸಚಿತ್ರ ವಿವರಣೆ: 1. Facebook ಗೆ ಲಾಗಿನ್ ಆಗಿ. 2. ಬಲ ಭಾಗದ ಮೇಲುಗಡೆ ಇರುವ down arrow ಕ್ಲಿಕ್ ಮಾಡಿ. 3. ಅಲ್ಲಿ new Facebook ಆಯ್ಕೆ ಮಾಡಿಕೊಳ್ಳಿ. 4. ಅಲ್ಲಿ dark theme option ಆಯ್ಕೆ ಮಾಡಿಕೊಳ್ಳಿ.

Published On - 5:52 pm, Mon, 11 May 20

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು