ಬೆಂಗಳೂರು: ಮಾಸಿಕ ಕಂತುಗಳ ಮೂಲಕ (EMI) ಸರಿಯಾಗಿ ಹಣ ಕಟ್ಟುವುದಾಗಿ ಹೇಳಿ ಕಾರು ಖರೀದಿಸುತ್ತಾ.. ವಂಚಿಸುತ್ತಿದ್ದ ಅಂತರಾಜ್ಯ ಗ್ಯಾಂಗ್ ಈಗ ಪೊಲೀಸರ ಬಲೆಗೆ ಬಿದ್ದಿದೆ. ಪ್ರಕರಣ ಸಂಬಂಧ ಕೆ.ಜಿ ಹಳ್ಳಿ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದಾರೆ. ಬರೋಬ್ಬರಿ 4 ಕೋಟಿ ರೂ ಮೌಲ್ಯದ ವಿವಿಧ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ರಿಯಾಜ್, ಶೇಕ್ ಮುಕ್ತಿಯಾರ್, ವಿನೋದ್, ರಮೇಶ್, ನರಸಿಂಹ , ಪ್ರಭಾಕರ್ ಹಾಗೂ ಚಾಕ್ಲಿ ನರೇಶ್ ಬಂಧಿತ ಆರೋಪಿಗಳು. ಲಾಕ್ ಡೌನ್ನ ಸಂದರ್ಭವನ್ನ ಬಳಸಿಕೊಂಡು EMI ಕಟ್ಟದ ಕಾರುಗಳನ್ನ ಗುರುತಿಸಿ ಖರೀದಿಗೆ ಮುಂದಾಗುತ್ತಿದ್ದರು. EMI ತಾವು ಕಟ್ಟುವುದಾಗಿ ಸ್ವಲ್ಪ ಹಣ ನೀಡಿ ಕಾರುಗಳ ದಾಖಲಾತಿ ಪಡೆಯುತ್ತಿದ್ದರು.
ಆದರೆ EMI ಕಟ್ಟದೆ ಕಾರನ್ನು ಆಂಧ್ರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ವಾಹನಕ್ಕೆ ಬೇರೆ ಸಂಖ್ಯೆ ನೋಂದಣಿ ಮಾಡಿಸಿ ಮಾರಾಟ ಮಾಡುತ್ತಿದ್ದರು. ಅನಂತಪುರದ RTO ಅಧಿಕಾರಿಗಳು ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇಲ್ಲಿಯವರೆಗೆ ಒಟ್ಟು 48 ಕಾರುಗಳನ್ನ ವಶಪಡಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
KIADBಯಿಂದ ರೈತರಿಗೆ ವಂಚನೆ ಆರೋಪ: ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ವಕೀಲ