ಬೆಳಗಾವಿ: ಜಿಲ್ಲೆಯ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಖಾನಾಪುರ ಕ್ಷೇತ್ರದಿಂದ ಅರವಿಂದ್ ಪಾಟೀಲ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಮಾಜಿ ಶಾಸಕ ಅರವಿಂದ್ ಪಾಟೀಲ್‌ಗೆ 27 ಮತಗಳು ಸಿಕ್ಕಿದ್ದು ಅವರ ಪ್ರತಿಸ್ಪರ್ಧಿಯಾದ ಶಾಸಕಿ ಅಂಜಲಿ ನಿಂಬಾಳ್ಕರ್‌ಗೆ 25 ಮತಗಳು ಲಭ್ಯವಾಗಿದೆ. ಅರವಿಂದ್ ಪಾಟೀಲ್ ಬಿಜೆಪಿ ಬೆಂಬಲಿತ ಅಭ್ಯರ್ಥಿ.
ಮತಗಟ್ಟೆ ಕೇಂದ್ರದಿಂದ ಹೊರ ಹೋಗುತ್ತಿದ್ದ ಶಾಸಕಿ ಅಂಜಲಿ ನಿಂಬಾಳ್ಕರ್ ಕಾರು ಸುತ್ತುವರೆದ ಅರವಿಂದ್ ಪಾಟೀಲ್ ಬೆಂಬಲಿಗರು ರಸ್ತೆ ಮಧ್ಯದಲ್ಲಿ ಜೈಕಾರ ಕೂಗುತ್ತಾ ಶಾಸಕಿ ಕಾರನ್ನು ಅಡ್ಡಗಟ್ಟಿದರು. ಆದರೆ, ಕೂಡಲೇ ಕಾರ್ಯಕರ್ತರು ಮತ್ತು ಬೆಂಬಲಿಗರನ್ನ ತಳ್ಳಿ ನಿಂಬಾಳ್ಕರ್ ವಾಹನವನ್ನು ಪೊಲೀಸರು ಕಳುಹಿಸಿದರು. ಈ ನಡುವೆ ಕಾರಿನಿಂದ ಕೆಳಗಿಳಿದು ಕಾರು ಅಡ್ಡಗಟ್ಟಿದ ಅರವಿಂದ್ ಪಾಟೀಲ್ ಬೆಂಬಲಿಗರಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಅಭಿನಂದನೆ ಸಲ್ಲಿಸಿದರು
ಡಿಸಿಸಿ ಬ್ಯಾಂಕ್ ನ ಮೂರು ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎರಡು ಬಿಜೆಪಿ ಪಾಲಾಗಿದ್ದು ಒಂದು ಕಾಂಗ್ರೆಸ್ ಪಾಲಾಗಿದೆ. ಸದ್ಯ, ಹದಿನಾರು ನಿರ್ದೇಶಕ ಸ್ಥಾನಗಳ ಪೈಕಿ 15 ಬಿಜೆಪಿಯವರು ಮತ್ತು 1 ಕಾಂಗ್ರೆಸ್ನವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.