ವಿನಯ್ ಕುಲಕರ್ಣಿಗೆ NO ರಿಲೀಫ್: 3 ದಿನ CBI ಕಸ್ಟಡಿಗೆ ನೀಡಿದ ಕೋರ್ಟ್
ಧಾರವಾಡ: ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಇಂದು ಬೆಳಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮೂರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಜಡ್ಜ್ ನ್ಯಾ. ಪಂಚಾಕ್ಷರಿ ಎದುರು ಹಾಜರುಪಡಿಸಲಾಯಿತು. ವಿನಯ್ರನ್ನು 3 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಸಿಬಿಐ ಪರ ವಕೀಲರು ಕೋರಿದ್ದರು. ಆದರೆ, ಸಿಬಿಐ ಕೋರಿಕೆ ಮನ್ನಿಸದೇ ಒಂದು ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಈ ಹಿಂದೆ ಆದೇಶಿಸಿತ್ತು. ಹಾಗಾಗಿ, ಇಂದು ವಿನಯ್ ಕುಲಕರ್ಣಿಯನ್ನು ಮತ್ತೆ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ವಿಚಾರಣೆ […]

ಧಾರವಾಡ: ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಇಂದು ಬೆಳಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮೂರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಜಡ್ಜ್ ನ್ಯಾ. ಪಂಚಾಕ್ಷರಿ ಎದುರು ಹಾಜರುಪಡಿಸಲಾಯಿತು. ವಿನಯ್ರನ್ನು 3 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಸಿಬಿಐ ಪರ ವಕೀಲರು ಕೋರಿದ್ದರು. ಆದರೆ, ಸಿಬಿಐ ಕೋರಿಕೆ ಮನ್ನಿಸದೇ ಒಂದು ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಈ ಹಿಂದೆ ಆದೇಶಿಸಿತ್ತು. ಹಾಗಾಗಿ, ಇಂದು ವಿನಯ್ ಕುಲಕರ್ಣಿಯನ್ನು ಮತ್ತೆ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು.
ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಜಡ್ಜ್ ನ್ಯಾ. ಪಂಚಾಕ್ಷರಿ ವಿನಯ್ ಕುಲಕರ್ಣಿಯನ್ನು 3 ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿ ಆದೇಶ ಹೊರಡಿಸಿದರು. ನ. 9ರಂದು ಕೋರ್ಟ್ಗೆ ಬೆಳಗ್ಗೆ 11 ಗಂಟೆಗೆ ಹಾಜರುಪಡಿಸುವಂತೆ ಸಿಬಿಐ ಅಧಿಕಾರಿಗಳಿಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. ಕೆಲ ಷರತ್ತು ವಿಧಿಸಿ ಸಿಬಿಐ ಕಸ್ಡಡಿಗೆ ನೀಡಿದ ಕೋಟ್೯ ಪ್ರತಿ ದಿನ 10 ನಿಮಿಷಗಳ ಕಾಲ ಕುಟುಂಬಸ್ಥರಿಗೆ ಭೇಟಿ ಮಾಡುವ ಅವಕಾಶ ನೀಡಿದೆ. ಸಿಬಿಐ ಅಧಿಕಾರಿಗಳ ಸಮ್ಮುಖದಲ್ಲಿ ವಿನಯ್ ಕುಲಕರ್ಣಿಗೆ ಕುಟುಂಬಸ್ಥರನ್ನು ಭೇಟಿ ಮಾಡಿಸಬೇಕು ಎಂದು ಸೂಚಿಸಿದೆ.
Published On - 6:05 pm, Fri, 6 November 20



