ಕೋಲಾರ: ನವೆಂಬರ್ ತಿಂಗಳು ಬಂದರೆ ಸಾಕು ಎಲ್ಲರಲ್ಲೂ ಕನ್ನಡ ಮೇಲಿನ ಪ್ರೀತಿ ಜಾಗೃತವಾಗುತ್ತೆ. ಕೆಲವರು ಅದನ್ನೇ ತೋರಿಕೆಗಾಗಿ ಬಂಡವಾಳ ಮಾಡಿಕೊಂಡರೆ ಮತ್ತೆ ಕೆಲವರು ನಿಷ್ಟೆಯಿಂದ ಕನ್ನಡಾಂಬೆಯ ಪೂಜೆ ಮಾಡುವವರೂ ಇದ್ದಾರೆ. ಇನ್ನು ಕೆಲವರು ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಕನ್ನಡಕ್ಕಾಗಿ ಎಲ್ಲವೂ ಅರ್ಪಣೆ ಎಂದು ತಮ್ಮ ಕೊನೆ ಉಸಿರಿರುವ ವರೆಗೂ ಸೇವೆ ಮಾಡಿ ಕನ್ನಡಾಂಬೆಯ ಮಡಿಲು ಸೇರ್ತಾರೆ. ಇಂಥ ಮನಸ್ಥಿತಿಗಳ ನಡುವೆ ಕೋಲಾರದಲ್ಲಿ ಪೊಲೀಸರಲ್ಲೊಂದು ವಿಭಿನ್ನ ಕನ್ನಡಾಭಿಮಾನ ಹೊರ ಬಂದಿದೆ.
ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ್ದ ಹಳೆಯ ಹಂಚಿನ ಮನೆಗಳನ್ನು ಕೆಡವಿದ ಪೊಲೀಸ್ ಇಲಾಖೆಯು ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಪೊಲೀಸ್ ಪೇದೆಗಳಿಗೆ ಅತ್ಯಾಧುನಿಕ ರೀತಿಯಲ್ಲಿ ವಸತಿ ಗೃಹಗಳನ್ನು ನಿರ್ಮಿಸಿದೆ. ಈ ವಸತಿ ಸಮುಚ್ಚಯದಲ್ಲಿ ಕನ್ನಡದ ಆದಿಕವಿಗಳು, ರಾಷ್ಟ್ರಕವಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಬರೆಸಲಾಗಿದೆ.
Published On - 8:17 am, Fri, 6 November 20