ಉಗ್ರರ ಫೈರಿಂಗ್‌: ಕೋಲಾರದ ಯುವಯೋಧ ಪ್ರಶಾಂತ್ ಹುತಾತ್ಮ

|

Updated on: Feb 27, 2020 | 12:00 PM

ಕೋಲಾರ: ಉಗ್ರರ ಜೊತೆಗಿನ ಫೈರಿಂಗ್‌ನಲ್ಲಿ ರಾಜ್ಯದ ಯೋಧ ಹುತಾತ್ಮರಾಗಿದ್ದಾರೆ. ಬಂಗಾರಪೇಟೆ ತಾಲ್ಲೂಕಿನ ಕಣಿಂಬೆಲೆ ಗ್ರಾಮದ ಪ್ರಶಾಂತ್(25) ನಿನ್ನೆ ಸಂಜೆ ಜಮ್ಮು- ಕಾಶ್ಮೀರದಲ್ಲಿ ಉಗ್ರವಾದಿಗಳ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿದ್ದಾರೆ. ಹುತಾತ್ಮ ಯೋಧ ಪ್ರಶಾಂತ್ ಸೆವೆಂಟೀನ್ ಮದ್ರಾಸ್ ರೆಜಿಮೆಂಟ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಿನ್ನೆ ಸಂಜೆ ಜಮ್ಮು- ಕಾಶ್ಮೀರದಲ್ಲಿ ಉಗ್ರರ ಜೊತೆ ಗುಂಡಿನ ಕಾಳಗ ನಡೆದಿದೆ. ಈ ವೇಳೆ ಉಗ್ರರ ಗುಂಡಿಗೆ ಯೋಧ ಪ್ರಶಾಂತ್ ಹುತಾತ್ಮರಾಗಿದ್ದಾರೆ. ಇಗಾಗಲೇ ತಂದೆಯನ್ನು ಕಳೆದುಕೊಂಡಿರುವ ಯೋಧ ಪ್ರಾಶಂತ್ ಮನೆಯವರನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ. ನಾಳೆ ಬಂಗಾರಪೇಟೆಯ […]

ಉಗ್ರರ ಫೈರಿಂಗ್‌: ಕೋಲಾರದ ಯುವಯೋಧ ಪ್ರಶಾಂತ್ ಹುತಾತ್ಮ
Follow us on

ಕೋಲಾರ: ಉಗ್ರರ ಜೊತೆಗಿನ ಫೈರಿಂಗ್‌ನಲ್ಲಿ ರಾಜ್ಯದ ಯೋಧ ಹುತಾತ್ಮರಾಗಿದ್ದಾರೆ. ಬಂಗಾರಪೇಟೆ ತಾಲ್ಲೂಕಿನ ಕಣಿಂಬೆಲೆ ಗ್ರಾಮದ ಪ್ರಶಾಂತ್(25) ನಿನ್ನೆ ಸಂಜೆ ಜಮ್ಮು- ಕಾಶ್ಮೀರದಲ್ಲಿ ಉಗ್ರವಾದಿಗಳ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿದ್ದಾರೆ.

ಹುತಾತ್ಮ ಯೋಧ ಪ್ರಶಾಂತ್ ಸೆವೆಂಟೀನ್ ಮದ್ರಾಸ್ ರೆಜಿಮೆಂಟ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಿನ್ನೆ ಸಂಜೆ ಜಮ್ಮು- ಕಾಶ್ಮೀರದಲ್ಲಿ ಉಗ್ರರ ಜೊತೆ ಗುಂಡಿನ ಕಾಳಗ ನಡೆದಿದೆ. ಈ ವೇಳೆ ಉಗ್ರರ ಗುಂಡಿಗೆ ಯೋಧ ಪ್ರಶಾಂತ್ ಹುತಾತ್ಮರಾಗಿದ್ದಾರೆ. ಇಗಾಗಲೇ ತಂದೆಯನ್ನು ಕಳೆದುಕೊಂಡಿರುವ ಯೋಧ ಪ್ರಾಶಂತ್ ಮನೆಯವರನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.

ನಾಳೆ ಬಂಗಾರಪೇಟೆಯ ಸ್ವಗ್ರಾಮ ಕಣಿಂಬೆಲೆಗೆ ಹುತಾತ್ಮ ಯೋಧನ ಪಾರ್ಥಿವ ಶರೀರವನ್ನು ಸರ್ಕಾರಿ ಗೌರವಗಳ ಮೂಲಕ ಕಳಿಸುವಂತೆ ಸೇನೆಯಿಂದ ಸಂದೇಶ ರವಾನೆಯಾಗಿದೆ.

Published On - 11:55 am, Thu, 27 February 20