AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ವೇಳೆ ಭೂಮಿಯನ್ನು ಅಗೆಯಬಾರದು ಅನ್ನುತ್ತದೆ ಧರ್ಮಶಾಸ್ತ್ರ! ಯಾಕೆ ಗೊತ್ತಾ?

ಹಿಂದೂ ಸಂಪ್ರದಾಯದ ಪ್ರಕಾರ, ದೇವರ ಧ್ಯಾನ, ಪೂಜೆ, ಪುನಸ್ಕಾರಗಳ ಜೊತೆಗೆ ಕೆಲ ನಿಯಮಗಳನ್ನು ಅನುಸರಿಸಿದ್ರೆ ಇಷ್ಟಾರ್ಥ ಸಿದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗುತ್ತೆ. ಕೆಲ ನಿರ್ದಿಷ್ಟ ನಿಯಮಗಳನ್ನು ಜೀವನದಲ್ಲಿ ಪಾಲಿಸ್ತಾ ಬಂದ್ರೆ ಯಶಸ್ಸು ಕಟ್ಟಿಟ್ಟಬುಟ್ಟಿ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಆ ನಿಯಮಗಳ ಅನುಸರಣೆಯಿಂದ ನೆಮ್ಮದಿಯ ಜೀವನವನ್ನು ನಮ್ಮದಾಗಿಸಿಕೊಳ್ಳಬಹುದು ಅಂತಲೂ ಹೇಳಲಾಗುತ್ತೆ. ಹಾಗಿದ್ರೆ ಯಾವುದಾ ನಿಯಮಗಳು ಅನ್ನೂದನ್ನ ಇಲ್ಲಿ ತಿಳಿಯಿರಿ? ಧರ್ಮಶಾಸ್ತ್ರದ ಕೆಲ ನಿಯಮಗಳು: -ಗರ್ಭೀಣಿ ಸ್ತ್ರೀಯರು ಅಮಾವಾಸ್ಯೆ, ಗ್ರಹಣದ ಸಮಯದಲ್ಲಿ ಹೊರಗೆ ಹೋಗಬಾರದು. -ರಾತ್ರಿ ವೇಳೆ ಭೂಮಿಯನ್ನು ಅಗೆಯಬಾರದು. […]

ರಾತ್ರಿ ವೇಳೆ ಭೂಮಿಯನ್ನು ಅಗೆಯಬಾರದು ಅನ್ನುತ್ತದೆ ಧರ್ಮಶಾಸ್ತ್ರ! ಯಾಕೆ ಗೊತ್ತಾ?
ಸಾಧು ಶ್ರೀನಾಥ್​
|

Updated on:Feb 27, 2020 | 4:09 PM

Share

ಹಿಂದೂ ಸಂಪ್ರದಾಯದ ಪ್ರಕಾರ, ದೇವರ ಧ್ಯಾನ, ಪೂಜೆ, ಪುನಸ್ಕಾರಗಳ ಜೊತೆಗೆ ಕೆಲ ನಿಯಮಗಳನ್ನು ಅನುಸರಿಸಿದ್ರೆ ಇಷ್ಟಾರ್ಥ ಸಿದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗುತ್ತೆ. ಕೆಲ ನಿರ್ದಿಷ್ಟ ನಿಯಮಗಳನ್ನು ಜೀವನದಲ್ಲಿ ಪಾಲಿಸ್ತಾ ಬಂದ್ರೆ ಯಶಸ್ಸು ಕಟ್ಟಿಟ್ಟಬುಟ್ಟಿ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಆ ನಿಯಮಗಳ ಅನುಸರಣೆಯಿಂದ ನೆಮ್ಮದಿಯ ಜೀವನವನ್ನು ನಮ್ಮದಾಗಿಸಿಕೊಳ್ಳಬಹುದು ಅಂತಲೂ ಹೇಳಲಾಗುತ್ತೆ. ಹಾಗಿದ್ರೆ ಯಾವುದಾ ನಿಯಮಗಳು ಅನ್ನೂದನ್ನ ಇಲ್ಲಿ ತಿಳಿಯಿರಿ?

ಧರ್ಮಶಾಸ್ತ್ರದ ಕೆಲ ನಿಯಮಗಳು: -ಗರ್ಭೀಣಿ ಸ್ತ್ರೀಯರು ಅಮಾವಾಸ್ಯೆ, ಗ್ರಹಣದ ಸಮಯದಲ್ಲಿ ಹೊರಗೆ ಹೋಗಬಾರದು. -ರಾತ್ರಿ ವೇಳೆ ಭೂಮಿಯನ್ನು ಅಗೆಯಬಾರದು. -ಭೋಜನವಾದ ತಕ್ಷಣ ಸ್ನಾನ ಮಾಡಬಾರದು. -ಬೇರೆಯವರ ಕಷ್ಟವನ್ನು ಕಂಡು ಸಂತೋಷ ಪಡಬಾರದು. -ಸದಾ ತಿನ್ನುತ್ತಲೇ ಇರುವ ಅಭ್ಯಾಸವಿದ್ರೆ ಮೊದಲು ಅದನ್ನು ದೂರಗೊಳಿಸಬೇಕು. -ತಲೆಗೆ ಎಣ್ಣೆ ಹಚ್ಚಿಕೊಳ್ಳಲು ಎಡಗೈಯನ್ನು ಬಳಸಬಾರದು. -ನೀರನ್ನು ಮಿತವಾಗಿ ಖರ್ಚು ಮಾಡಬೇಕು. -ವಿವಾಹಿತೆ ಸ್ತ್ರೀಯ ಕೈಗಳಲ್ಲಿ ಬಳೆ ಇಲ್ಲದೆ ಊಟ ಬಡಿಸಬಾರದು. -ಊಟವನ್ನು ಎಡಗೈಯಿಂದ ಬಡಿಸಬಾರದು. -ಅಂದಿನ ಕೆಲಸ ಅಂದೇ ಮಾಡಬೇಕು. ಇಲ್ಲದಿದ್ದರೆ ಅಪಜಯ ಲಭಿಸುತ್ತೆ. -ಘಂಟೆಯ ಮಧ್ಯಾಭಾಗದ ನಾಲಿಗೆ, ಶಂಖದ ಹೊರಭಾಗ, ಆಧ್ಯಾತ್ಮಿಕ ಗ್ರಂಥವನ್ನು ನೆಲಕ್ಕೆ ತಾಗಿಸಬಾರದು. -ಯಾರಾದರೂ ಮುಖ್ಯವಾದ ಕೆಲಸಕ್ಕಾಗಿ ಹೊರ ಹೋಗುತ್ತಿರುವಾಗ ಹಿಂದೆ ಹೋಗಿ ಕರೆಯಬಾರದು. -ಹತ್ತಿರದ ಬಂಧುಗಳ ಮರಣ ಸಮಯದಲ್ಲಿ, ಮನೆಯಲ್ಲಿ ಶಿಶುವಿನ ಜನನವಾದಾಗ ಮತ್ತು ಸ್ತ್ರೀಯರಿಗೆ ಅನಾನುಕೂಲವಾದ ದಿನಗಳಲ್ಲಿ ದೇವಾಲಯಗಳಿಗೆ ಹೋಗಬಾರದು. -ಅಹಂಕಾರ, ಸಣ್ಣತನಗಳನ್ನು ಯಾವತ್ತೂ ಪ್ರದರ್ಶಿಸಬಾರದು. -ಪಿತೃದೇವತೆಗಳ ಪೂಜಾಕಾರ್ಯಗಳನ್ನು ಮಾಡುವಾಗ ತಲೆಗೆ ಎಣ್ಣೆ ಹಾಕಿಕೊಳ್ಳಬಾರದು. -ಶವಯಾತ್ರೆಯ ಸಮಯದಲ್ಲಿ ಶವಕ್ಕೂ ಮುನ್ನ ಸಾಗಬಾರದು. -ಅಂತಿಮ ಕ್ರಿಯೆಯಲ್ಲಿ ಪಾಲ್ಗೊಂಡು ಬಂದಮೇಲೆ ಸ್ನಾನ ಮಾಡಿಯೇ ಮನೆಯೊಳಗೆ ಹೋಗಬೇಕು.

ಹೀಗೆ ಈ ಎಲ್ಲಾ ನಿಯಮಗಳನ್ನು ಜೀವನದಲ್ಲಿ ಅಳವಡಿಸಿಕೊಂಡ್ರೆ ನೆಮ್ಮದಿ, ಸಂತೋಷ, ಆರೋಗ್ಯ, ಆಯಸ್ಸು, ಸಮಾಧಾನ, ಸಂತೃಪ್ತಿ ಹಾಗೂ ತಾಳ್ಮೆ ಸಿಗಲಿದೆ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

Published On - 3:09 pm, Thu, 27 February 20