ಸಕ್ಕರೆ ಕಾರ್ಖಾನೆಯಲ್ಲಿ ಆಯತಪ್ಪಿ ಬಿದ್ದು ಕಾರ್ಮಿಕ ಸಾವು

ವಿಜಯಪುರ: ಕೆಲಸ ಮಾಡುವ ವೇಳೆ ಆಯತಪ್ಪಿ ಕೆಳಗೆ ಬಿದ್ದು ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಆಲಮೇಲ ತಾಲೂಕಿನ ಕಡಣಿಯಲ್ಲಿರುವ KPR ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ. ಮೃತ ಕಾರ್ಮಿಕನನ್ನು ಆಲಮೇಲ ಪಟ್ಟಣದ ಸುರೇಶ ಪೂಜಾರಿ(19) ಎಂದು ಗುರುತಿಸಲಾಗಿದೆ. ಕಾರ್ಖಾನೆಯಲ್ಲಿ ಸೂಕ್ತ ಸುರಕ್ಷತಾ ಸಾಧನಗಳಿಲ್ಲದ ಕಾರಣ ಸುರೇಶ ಮೃತಪಟ್ಟಿದ್ದಾನೆಂದು ಮೃತನ ಸಂಬಂಧಿಕರ ಆರೋಪಿಸಿದ್ದಾರೆ. ಮೃತನ‌ ನಿವಾಸದ ಬಳಿ ಸಂಬಂಧಿಕರು ಹಾಗೂ ಸ್ಥಳಿಯರಿಂದ ಪ್ರತಿಭಟನೆ ನಡೆದಿದ್ದು ಸೂಕ್ತ ಪರಿಹಾರ ನೀಡಲು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಸಕ್ಕರೆ ಕಾರ್ಖಾನೆಯಲ್ಲಿ ಆಯತಪ್ಪಿ ಬಿದ್ದು ಕಾರ್ಮಿಕ ಸಾವು

Updated on: Oct 13, 2020 | 1:53 PM

ವಿಜಯಪುರ: ಕೆಲಸ ಮಾಡುವ ವೇಳೆ ಆಯತಪ್ಪಿ ಕೆಳಗೆ ಬಿದ್ದು ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಆಲಮೇಲ ತಾಲೂಕಿನ ಕಡಣಿಯಲ್ಲಿರುವ KPR ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ. ಮೃತ ಕಾರ್ಮಿಕನನ್ನು ಆಲಮೇಲ ಪಟ್ಟಣದ ಸುರೇಶ ಪೂಜಾರಿ(19) ಎಂದು ಗುರುತಿಸಲಾಗಿದೆ.
ಕಾರ್ಖಾನೆಯಲ್ಲಿ ಸೂಕ್ತ ಸುರಕ್ಷತಾ ಸಾಧನಗಳಿಲ್ಲದ ಕಾರಣ ಸುರೇಶ ಮೃತಪಟ್ಟಿದ್ದಾನೆಂದು ಮೃತನ ಸಂಬಂಧಿಕರ ಆರೋಪಿಸಿದ್ದಾರೆ. ಮೃತನ‌ ನಿವಾಸದ ಬಳಿ ಸಂಬಂಧಿಕರು ಹಾಗೂ ಸ್ಥಳಿಯರಿಂದ ಪ್ರತಿಭಟನೆ ನಡೆದಿದ್ದು ಸೂಕ್ತ ಪರಿಹಾರ ನೀಡಲು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

Published On - 1:48 pm, Tue, 13 October 20