ತುಳಸಿಗೆ ಒಳ್ಳೆಯದಾಗುತ್ತೆ -ಸುಪ್ರೀಂ ರಿಲೀಫ್ ಬಳಿಕ ಮುನಿರತ್ನ ಫಸ್ಟ್ ರಿಯಾಕ್ಷನ್
ಬೆಂಗಳೂರು: ತುಳಸಿ ಮುನಿರಾಜುಗೌಡ ಅರ್ಜಿ ವಜಾಗೊಳಿಸಿ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಬಳಿಕ ಟಿವಿ 9ಗೆ RR ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮುನಿರತ್ನ ಪ್ರತಿಕ್ರಿಯಿಸಿದ್ದಾರೆ. ಆದೇಶ ಬಂದ ನಂತರ ದೊಡ್ಡಬಳ್ಳಾಪುರ ಬಳಿಯಿರುವ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳುವ ಮುನ್ನ ಮುನಿರತ್ನ ಮಾತನಾಡಿದ್ದಾರೆ. ನ್ಯಾಯಾಲಯದ ತೀರ್ಪಿಗೆ ನಾವು ತಲೆಬಾಗುತ್ತೇವೆ. ನಕಲಿ ವೋಟರ್ ಐಡಿ ಬಗ್ಗೆ ನನ್ನ ವಿರುದ್ಧ ಆರೋಪ ಕೇಳಬಂದಿತ್ತು. ಆ ಆರೋಪದ ನೋವು ಏನೆಂದು ನನಗೆ ಗೊತ್ತು. 25 ಸಾವಿರ ವೋಟ್ ನಕಲಿ ಎಂದು […]

ಬೆಂಗಳೂರು: ತುಳಸಿ ಮುನಿರಾಜುಗೌಡ ಅರ್ಜಿ ವಜಾಗೊಳಿಸಿ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಬಳಿಕ ಟಿವಿ 9ಗೆ RR ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮುನಿರತ್ನ ಪ್ರತಿಕ್ರಿಯಿಸಿದ್ದಾರೆ. ಆದೇಶ ಬಂದ ನಂತರ ದೊಡ್ಡಬಳ್ಳಾಪುರ ಬಳಿಯಿರುವ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳುವ ಮುನ್ನ ಮುನಿರತ್ನ ಮಾತನಾಡಿದ್ದಾರೆ.
ನ್ಯಾಯಾಲಯದ ತೀರ್ಪಿಗೆ ನಾವು ತಲೆಬಾಗುತ್ತೇವೆ. ನಕಲಿ ವೋಟರ್ ಐಡಿ ಬಗ್ಗೆ ನನ್ನ ವಿರುದ್ಧ ಆರೋಪ ಕೇಳಬಂದಿತ್ತು. ಆ ಆರೋಪದ ನೋವು ಏನೆಂದು ನನಗೆ ಗೊತ್ತು. 25 ಸಾವಿರ ವೋಟ್ ನಕಲಿ ಎಂದು ಆರೋಪಿಸುತ್ತಿದ್ದರು. ಈಗ ಕೋರ್ಟ್ ತೀರ್ಪಿನಿಂದ ಇದು ಸ್ಪಷ್ಟವಾಗಿದೆ. 25 ಸಾವಿರ ವೋಟ್ ಮುನಿರತ್ನಗೆ ಬಂದಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಬಗ್ಗೆ ಏನೂ ಮಾತಾಡಲ್ಲ ತುಳಸಿ ಮುನಿರಾಜುಗೌಡಗೆ ಒಳ್ಳೆಯದಾಗುತ್ತೆ. ಪಕ್ಷದ ಸೂಚನೆ ಮೇರೆಗೆ ನಾವು ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಬಗ್ಗೆ ಏನೂ ಮಾತಾಡಲ್ಲ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಸ್ಪರ್ಧಿಸಬಹುದು. ಹಾಗಾಗಿ ಆ ಹೆಣ್ಣು ಮಗಳು ಸ್ಪರ್ಧೆ ಮಾಡಿದ್ದಾರೆ ಎಂದು ಟಿವಿ9ಗೆ RR ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮುನಿರತ್ನ ಪ್ರತಿಕ್ರಿಯಿಸಿದ್ದಾರೆ.



