ಮೈಲಸಂದ್ರ ಲಕ್ಷ್ಮೀ ಆಸ್ಪತ್ರೆಯ ತ್ಯಾಜ್ಯ, ಪಿಪಿಇ ಕಿಟ್‌ಗಳು ಸಾರ್ವಜನಿಕ ಸ್ಥಳಗಳಲ್ಲಿ!

|

Updated on: Jul 17, 2020 | 2:23 PM

ಆನೇಕಲ್: ಮೈಲಸಂದ್ರದಲ್ಲಿ ಬಳಕೆಯಾಗಿರುವ ಪಿಪಿಇ ಕಿಟ್‌ಗಳನ್ನು ಎಲ್ಲೆಂದರಲ್ಲಿ ಸುರಿದುಹೋಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳಲ್ಲಿ ಕೊರೊನಾ ಸೋಂಕಿನ ಆತಂಕ ಹೆಚ್ಚಾಗಿದೆ. ದೊಡ್ಡತೋಗೂರು ಪಂಚಾಯಿತಿಯ ಮೈಲಸಂದ್ರದ ಬಳಿ‌ ಇರುವ ನಿರ್ಜನ ಪ್ರದೇಶಗಳಲ್ಲಿ ರಾಶಿ ರಾಶಿ ಆಸ್ಪತ್ರೆ ತ್ಯಾಜ್ಯ ಪತ್ತೆಯಾಗಿದೆ. ಕಸದ ರಾಶಿಯಲ್ಲಿ ಪಿಪಿಯಿ‌‌ ಕಿಟ್ ಸೇರಿದಂತೆ ಇಂಜೆಕ್ಷನ್ ಡ್ರಿಪ್ಸ್ ಇನ್ನು ಅನೇಕ ಆಸ್ಪತ್ರೆ ತ್ಯಾಜ್ಯ ಹಾಗೂ ಶ್ರೀ ಲಕ್ಷ್ಮಿ ಮಲ್ಟಿ ಸ್ಪಷಾಲಿಟಿ ಆಸ್ಪತ್ರೆಯ ಬಿಲ್​ಗಳು ಪತ್ತೆಯಾಗಿವೆ. ಸದ್ಯ ಕೊರೊನಾ ಆತಂಕದಲ್ಲಿರುವ ಸ್ಥಳೀಯರು ಆಸ್ಪತ್ರೆ ತ್ಯಾಜ್ಯ ಕಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಲಸಂದ್ರ […]

ಮೈಲಸಂದ್ರ ಲಕ್ಷ್ಮೀ ಆಸ್ಪತ್ರೆಯ ತ್ಯಾಜ್ಯ, ಪಿಪಿಇ ಕಿಟ್‌ಗಳು ಸಾರ್ವಜನಿಕ ಸ್ಥಳಗಳಲ್ಲಿ!
Follow us on

ಆನೇಕಲ್: ಮೈಲಸಂದ್ರದಲ್ಲಿ ಬಳಕೆಯಾಗಿರುವ ಪಿಪಿಇ ಕಿಟ್‌ಗಳನ್ನು ಎಲ್ಲೆಂದರಲ್ಲಿ ಸುರಿದುಹೋಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳಲ್ಲಿ ಕೊರೊನಾ ಸೋಂಕಿನ ಆತಂಕ ಹೆಚ್ಚಾಗಿದೆ.

ದೊಡ್ಡತೋಗೂರು ಪಂಚಾಯಿತಿಯ ಮೈಲಸಂದ್ರದ ಬಳಿ‌ ಇರುವ ನಿರ್ಜನ ಪ್ರದೇಶಗಳಲ್ಲಿ ರಾಶಿ ರಾಶಿ ಆಸ್ಪತ್ರೆ ತ್ಯಾಜ್ಯ ಪತ್ತೆಯಾಗಿದೆ. ಕಸದ ರಾಶಿಯಲ್ಲಿ ಪಿಪಿಯಿ‌‌ ಕಿಟ್ ಸೇರಿದಂತೆ ಇಂಜೆಕ್ಷನ್ ಡ್ರಿಪ್ಸ್ ಇನ್ನು ಅನೇಕ ಆಸ್ಪತ್ರೆ ತ್ಯಾಜ್ಯ ಹಾಗೂ ಶ್ರೀ ಲಕ್ಷ್ಮಿ ಮಲ್ಟಿ ಸ್ಪಷಾಲಿಟಿ ಆಸ್ಪತ್ರೆಯ ಬಿಲ್​ಗಳು ಪತ್ತೆಯಾಗಿವೆ. ಸದ್ಯ ಕೊರೊನಾ ಆತಂಕದಲ್ಲಿರುವ ಸ್ಥಳೀಯರು ಆಸ್ಪತ್ರೆ ತ್ಯಾಜ್ಯ ಕಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಲಸಂದ್ರ ಈಗ ಗ್ರೀನ್ ಜೋನ್​ನಲ್ಲಿದ್ದು ಜನಸಾಮಾನ್ಯರಲ್ಲಿ ಆತಂಕ ಹೆಚ್ಚಾಗಿದೆ. ಕೇವಲ ಒಂದೆಡೆ ಅಲ್ಲದೇ ಗ್ರಾಮದ ಸುತ್ತ ಮುತ್ತ ಮೂರು ಕಡೆ ವೇಸ್ಟೇಜ್ ಸುರಿಯಲಾಗಿದೆ. ಇದರಿಂದ ಗ್ರೀನ್ ಜೋನ್​ನಲ್ಲಿರುವ ಮೈಲಸಂದ್ರ ರೆಡ್ ಜೋನ್​ ಆದ್ರೆ ಯಾರು ಹೊಣೆ, ಮುಂದೆ ಯಾರು ಗತಿ ಎಂದು ಆತಂಕ ಹೊರ ಹಾಕಿದ್ದಾರೆ.