
ದೇವನಹಳ್ಳಿ: ಇಟ್ಟರೆ ಸಗಣಿಯಾದೆ.. ತಟ್ಟಿದರೆ ಕುರುಳಾದೆ.. ಸುಟ್ಟರೇ ನೊಸಲಿಗೆ ವಿಭೂತಿಯಾದೆ.. ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ.. ಅನ್ನೂ ಪದ್ಯಕ್ಕೆ ಇದೀಗ ದೀಪಾವಳಿಗೆ ದೀಪವಾದೆ ಅನ್ನೂ ಸಾಲು ಸೇರ್ಪಡೆಯಾಗಿದೆ. ಇದಕ್ಕೆ ಕಾರಣ ಈ ಬಾರಿಯ ದೀಪಾವಳಿಗೆ ಸಗಣಿಯಿಂದ ತಯಾರಾದ ದೀಪಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿರೋದು.
ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದು ಈ ಬಾರಿಯ ದೀಪಾವಳಿಗೆ ಸಗಣಿ ದೀಪಗಳನ್ನ ಗೋಶಾಲೆಯ ಸಿಬ್ಬಂದಿ ನಿರ್ಮಾಣ ಮಾಡ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಬಳಿಯ ರಾಷ್ಟ್ರೋತ್ಥಾನ ಗೋಶಾಲೆಯ ವತಿಯಿಂದ ಈ ಬಾರಿಯ ದೀಪಾವಳಿಗೆ ಸಗಣಿ ದೀಪಗಳನ್ನ ಸಿದ್ದಮಾಡಲಾಗಿದೆ.
ಈಗಾಗಲೇ ಗೋಶಾಲೆಯ ಸಿಬ್ಬಂದಿಯಿಂದ 10 ಸಾವಿರ ದೀಪಗಳನ್ನ ತಯಾರಿಸಲಾಗಿದ್ದು ವಿವಿಧ ಜಿಲ್ಲೆಗಳಿಗೆ ದೀಪಗಳನ್ನ ರವಾನೆ ಮಾಡಲಾಗಿದೆ. ಇನ್ನೂ ಈ ವರ್ಷ ದೀಪಾವಳಿಯಲ್ಲಿ ಸಗಣಿಯಿಂದ ನಿರ್ಮಾಣವಾದ ದೀಪಗಳನ್ನ ಹಚ್ಚಿದ್ರೆ ದೀಪದಲ್ಲಿನ ಎಣ್ಣೆ ಜೊತೆಗೆ ಸಂಪೂರ್ಣ ದೀಪ ಸುಟ್ಟು ಅಗ್ನಿಹೋತ್ರವಾಗಿ ಬೆಳಗಲಿದ್ದು ಮನೆಯಲ್ಲಿನ ಗಾಳಿಯನ್ನ ಶುದ್ಧ ಮಾಡುತ್ತಂತೆ.
ಸಗಣಿಯಿಂದ ದೀಪಗಳ ನಿರ್ಮಾಣ ಹೇಗೆ:
ವರದಿ: ನವೀನ್, ದೇವನಹಳ್ಳಿ
ಮಾರುಕಟ್ಟೆಯಲ್ಲಿ ಸಗಣಿ ದೀಪಕ್ಕೆ ಹೆಚ್ಚಿದ ಬೇಡಿಕೆ:
ಶುದ್ಧ ನಾಟಿ ಹಸುವಿನ ಸಗಣಿಯಿಂದ ತಯಾರಿಸಿದ ದೀಪಗಳಿಗೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಬೇಡಿಕೆ ಬರ್ತಿದ್ದು, ಈಗಾಗಲೆ 10 ಸಾವಿರ ದೀಪಗಳನ್ನ ತಯಾರಿಸಿರೂ ಸಿಬ್ಬಂದಿ ಇನ್ನೂ 20 ಸಾವಿರ ದೀಪಗಳನ್ನ ತಯಾರಿಸಲಿದ್ದಾರೆ.
ನಾಟಿ ಹಸುವಿನ ಸಗಣಿಯಲ್ಲಿದೆ ಔಷಧೀಯ ಗುಣ:
ನಾಟಿ ಹಸುವಿನ ಸಗಣಿಯಲ್ಲಿ ರೋಗ ನಿರೋಧಕ ಶಕ್ತಿ ಸೇರಿದಂತೆ ಔಷಧೀಯ ಗುಣಗಳಿವೆಯಂತೆ. ಹೀಗಾಗಿ ಹಬ್ಬದ ದಿನ ಸಗಣಿ ದೀಪ ಹಚ್ಚಿ ಅದನ್ನ ಸುಟ್ಟರೆ ಅದು ಅಗ್ನಿಹೋತ್ರವಾಗಿ ಸಗಣಿಯಲ್ಲಿನ ಔಷಧೀಯ ಗುಣಗಳು ಗಾಳಿಯ ಮುಖಾಂತರ ಜನರಲ್ಲಿ ರೋಗ ನಿರೋದಕ ಶಕ್ತಿ ಹೆಚ್ಚಿಸಲಿದೆಯಂತೆ.