ನನಗೆ ನನ್ನ ಮಗನೇ ಶಕ್ತಿ, ಸ್ಫೂರ್ತಿ.. ಅವನಿಗೆ ಒಳ್ಳೇ ಹೆಸರು ಇಡ್ತೇವೆ -ಮೇಘನಾ ರಾಜ್
ಬೆಂಗಳೂರು: ತುಂಬಾ ದಿನದ ನಂತರ ಮಾಧ್ಯಮದ ಜೊತೆ ಮಾತಾಡ್ತಿದ್ದೇನೆ. ನಿಮ್ಮ ಸಪೋರ್ಟ್ ನನಗೆ ಸಿಕ್ಕಿದೆ. ಅದಕ್ಕೆ ತುಂಬಾ ಧನ್ಯವಾದಗಳು ಎಂದು ಪುತ್ರನ ತೊಟ್ಟಿಲು ಶಾಸ್ತ್ರದ ಬಳಿಕ ಮಾತನಾಡುತ್ತಾ ನಟಿ ಮೇಘನಾ ರಾಜ್ ಭಾವುಕರಾದರು. ಇಂದಿನ ತೊಟ್ಟಿಲು ಶಾಸ್ತ್ರ ಹೊಸ ರೀತಿಯ ಸಂತೋಷ ತಂದಿದೆ. ಮಗ ಮನೆಗೆ ಬಂದಿದ್ದಾನೆ. ತುಂಬಾ ಖುಷಿಯಾಗಿದೆ ನನಗೆ. ಈ ತೊಟ್ಟಿಲನ್ನು ನನ್ನ ತವರು ಮನೆ ಕಡೆಯವರು ಕೊಟ್ಟಿರೋದು ಎಂದು ಮೇಘನಾ ಹೇಳಿದರು. ನನ್ನನ್ನ ಹಾಗೂ ಚಿರುನಾ ಮತ್ತು ನಮ್ಮ ಇಡೀ ಕುಟುಂಬವನ್ನ ನಿಮ್ಮ […]
ಬೆಂಗಳೂರು: ತುಂಬಾ ದಿನದ ನಂತರ ಮಾಧ್ಯಮದ ಜೊತೆ ಮಾತಾಡ್ತಿದ್ದೇನೆ. ನಿಮ್ಮ ಸಪೋರ್ಟ್ ನನಗೆ ಸಿಕ್ಕಿದೆ. ಅದಕ್ಕೆ ತುಂಬಾ ಧನ್ಯವಾದಗಳು ಎಂದು ಪುತ್ರನ ತೊಟ್ಟಿಲು ಶಾಸ್ತ್ರದ ಬಳಿಕ ಮಾತನಾಡುತ್ತಾ ನಟಿ ಮೇಘನಾ ರಾಜ್ ಭಾವುಕರಾದರು.
ಇಂದಿನ ತೊಟ್ಟಿಲು ಶಾಸ್ತ್ರ ಹೊಸ ರೀತಿಯ ಸಂತೋಷ ತಂದಿದೆ. ಮಗ ಮನೆಗೆ ಬಂದಿದ್ದಾನೆ. ತುಂಬಾ ಖುಷಿಯಾಗಿದೆ ನನಗೆ. ಈ ತೊಟ್ಟಿಲನ್ನು ನನ್ನ ತವರು ಮನೆ ಕಡೆಯವರು ಕೊಟ್ಟಿರೋದು ಎಂದು ಮೇಘನಾ ಹೇಳಿದರು.
ನನ್ನನ್ನ ಹಾಗೂ ಚಿರುನಾ ಮತ್ತು ನಮ್ಮ ಇಡೀ ಕುಟುಂಬವನ್ನ ನಿಮ್ಮ ಮನೆಯವ್ರಂತೆ ನೋಡಿಕೊಂಡಿದ್ದೀರಾ ಎಂದು ಸಹ ಹೇಳಿದರು.
ನಾನು ಸ್ಟ್ರಾಂಗ್ ಇದ್ದೀನಾ, ಇಲ್ವೋ ಗೊತ್ತಿಲ್ಲ. ಆದರೆ ಎಲ್ಲಾರೂ ಹೇಳ್ತಾರೆ ನೀನು ಸ್ಟ್ರಾಂಗ್ ಅಂತಾ. ಬಟ್, ನನಗೆ ನನ್ನ ಮಗನೇ ಶಕ್ತಿ. ಇದನ್ನೆಲ್ಲಾ ಚಿರು ನನ್ನ ಕೈಯಲ್ಲಿ ಮಾಡಿಸ್ತಾ ಇದ್ದಾರೆ ಎಂದು ಮೇಘನಾ ಹೇಳಿದರು. ಜೊತೆಗೆ, ನೋಡೋರೆಲ್ಲಾ ಮಗು ಚಿರುನ ಜೆರಾಕ್ಸ್ ಕಾಪಿನೇ ಅಂತಾರೆ ಎಂದು ಖುಷಿಪಟ್ಟರು.
ಜೂನಿಯರ್ ಚಿರುನ ಅದ್ದೂರಿ ತೊಟ್ಟಿಲು ಶಾಸ್ತ್ರವನ್ನು ಇಂದು ನೆರವೇರಿಸಲಾಯಿತು. ಜೆ.ಪಿ. ನಗರದ ಮೇಘನಾ ರಾಜ್ರ ಮನೆಯಲ್ಲಿ ನಡೆದ ತೊಟ್ಟಿಲು ಶಾಸ್ತ್ರದಲ್ಲಿ ಕೇವಲ ಕುಟುಂಬಸ್ಥರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಸರಳವಾಗಿ ಆಯೋಜಿಸಲಾಯಿತು. ತೊಟ್ಟಿಲು ಶಾಸ್ತ್ರಕ್ಕೆ ಮೇಘನಾ ಮನೆಗೆ ಚಿರಂಜೀವಿ ಸರ್ಜಾರ ಅಜ್ಜಿ ಲಕ್ಷ್ಮೀ ದೇವಮ್ಮ ಹಾಗೂ ತಾಯಿ ಅಮ್ಮಾಜಿ ಸಹ ಬಂದಿದ್ದರು.
ಕೂಸು ಹುಟ್ಟುವ ಮೊದಲೇ.. ಅಣ್ಣನ ಮಗುವಿಗಾಗಿ ಬೆಳ್ಳಿ ತೊಟ್ಟಿಲು ಖರೀದಿಸಿದ ಧ್ರುವ
Published On - 1:08 pm, Thu, 12 November 20