‘ಅಕ್ಷಯ’ವಾಗದ ಲಕ್ಷ್ಮೀ ಸಿನಿಮಾ, ನಿರಾಸೆಗೊಂಡ ಸಿನಿಪ್ರಿಯರು.. ಕಾರಣ ಏನು?
ಎಲ್ಲಾ ಸರಿಯಾಗಿದ್ದಿದ್ರೆ ಅಕ್ಷಯ್ ಕುಮಾರ್ ಸಿನಿಮಾ ‘ಲಕ್ಷ್ಮೀ’ ಥಿಯೇಟರ್ನಲ್ಲಿ ಅಬ್ಬರಿಸಬೇಕಿತ್ತು. ಆದ್ರೆ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದ್ದರಿಂದ ಆ ಅಬ್ಬರವಿಲ್ಲ. ಹಾಗಿದ್ರೆ ಅಕ್ಷಯ್ ಕುಮಾರ್ ಲಕ್ಷ್ಮೀ ಅವತಾರವೆತ್ತಿರೋ ಸಿನಿಮಾ ಹೇಗಿದೆ? ಸಲಿಂಗಿಯ ಅವತಾರದಲ್ಲಿ ಅಕ್ಷಯ್ ಗೆದ್ರಾ? ಸೋತ್ರಾ? ರಾಘವಾ ಲಾರೆನ್ಸ್ ನಿರ್ದೇಶನಕ್ಕೆ ಎಷ್ಟು ಮಾರ್ಕ್ಸ್? ಅನ್ನೋದರ ಡೀಟೇಲ್ಸ್ ಇಲ್ಲಿದೆ. ತಮಿಳಿನಲ್ಲಿ ಕಾಂಚನಾ.. ಕನ್ನಡದಲ್ಲಿ ಕಲ್ಪನಾ.. ಹಿಂದಿಯಲ್ಲಿ ಲಕ್ಷ್ಮೀ.. ಈ ಮೂವರು ಸಿನಿಮಾಗಳಲ್ಲಿ ಯಾವುದು ಉತ್ತಮ ಅಂತ ಕೇಳಿದ್ರೆ ಅದಕ್ಕೆ ಉತ್ತರ ತಮಿಳಿನ ಕಾಂಚನಾ. ಯಾವುದು ಖರಾಬು ಅಂತ […]
ಎಲ್ಲಾ ಸರಿಯಾಗಿದ್ದಿದ್ರೆ ಅಕ್ಷಯ್ ಕುಮಾರ್ ಸಿನಿಮಾ ‘ಲಕ್ಷ್ಮೀ’ ಥಿಯೇಟರ್ನಲ್ಲಿ ಅಬ್ಬರಿಸಬೇಕಿತ್ತು. ಆದ್ರೆ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದ್ದರಿಂದ ಆ ಅಬ್ಬರವಿಲ್ಲ. ಹಾಗಿದ್ರೆ ಅಕ್ಷಯ್ ಕುಮಾರ್ ಲಕ್ಷ್ಮೀ ಅವತಾರವೆತ್ತಿರೋ ಸಿನಿಮಾ ಹೇಗಿದೆ? ಸಲಿಂಗಿಯ ಅವತಾರದಲ್ಲಿ ಅಕ್ಷಯ್ ಗೆದ್ರಾ? ಸೋತ್ರಾ? ರಾಘವಾ ಲಾರೆನ್ಸ್ ನಿರ್ದೇಶನಕ್ಕೆ ಎಷ್ಟು ಮಾರ್ಕ್ಸ್? ಅನ್ನೋದರ ಡೀಟೇಲ್ಸ್ ಇಲ್ಲಿದೆ.
ತಮಿಳಿನಲ್ಲಿ ಕಾಂಚನಾ.. ಕನ್ನಡದಲ್ಲಿ ಕಲ್ಪನಾ.. ಹಿಂದಿಯಲ್ಲಿ ಲಕ್ಷ್ಮೀ.. ಈ ಮೂವರು ಸಿನಿಮಾಗಳಲ್ಲಿ ಯಾವುದು ಉತ್ತಮ ಅಂತ ಕೇಳಿದ್ರೆ ಅದಕ್ಕೆ ಉತ್ತರ ತಮಿಳಿನ ಕಾಂಚನಾ. ಯಾವುದು ಖರಾಬು ಅಂತ ಕೇಳಿದ್ರೆ ಅದಕ್ಕೆ ಉತ್ತರ ಲಕ್ಷ್ಮೀ ಅನ್ತಿದ್ದಾರಂತೆ ಸಿನಿಪ್ರಿಯರು.
ಲಕ್ಷ್ಮಿ ಸಿನಿಮಾ ಅಬ್ಬರಿಸೋಕೆ ಸ್ಕ್ರಿಪ್ಟ್ ಕೈ ಕೊಡ್ತಾ? ಹೌದು.. ಲಕ್ಷ್ಮೀ ಬಿಡುಗಡೆಗೂ ಮುನ್ನ ಕೆರಳಿಸಿದ್ದ ಕುತೂಹಲವನ್ನ ಉಳಿಸಿಕೊಳ್ಳುವಲ್ಲಿ ಪರದಾಡುತ್ತಿದೆ ಎಂಬ ರಿವ್ಯೂ ಬಾಲಿವುಡ್ನಿಂದ ಕೇಳಿ ಬರುತ್ತಿದೆ. ಒಂದ್ಕಡೆ ಅಕ್ಷಯ್ ಕುಮಾರ್.. ಇನ್ನೊಂದ್ಕಡೆ ರಾಘವ ಲಾರೆನ್ಸ್. ಇಬ್ಬರೂ ಸೇರಿದ್ರೆ ಸಿನಿಮಾ ಯಾವುದೋ ಲೆವೆಲ್ನಲ್ಲಿರುತ್ತೆ ಅಂದ್ಕೊಂಡಿದ್ದವರಿಗೆ ಸ್ವಲ್ಪ ನಿರಾಸೆಯಾಗಿದೆಯಂತೆ.
ಲಕ್ಷ್ಮೀ ಯಾಕೆ ಇಷ್ಟ ಆಗೋಲ್ಲ ಅನ್ನೋಕೆ ಕಾರಣ ಬಹಳಷ್ಟಿದೆ. ಲಕ್ಷ್ಮೀ ಇಂದಿನ ಬಾಲಿವುಡ್ ಜಮಾನಕ್ಕೆ ಹೇಳಿ ಮಾಡಿಸಿದ ಸಿನಿಮಾ ಖಂಡಿತಾ ಅಲ್ಲ. ಯಾಕಂದ್ರೆ 9 ವರ್ಷಗಳ ಹಿಂದೆ ತೆರೆಕಂಡ ಕಾಂಚನಾ ಸಿನಿಮಾದ್ದೇ ಸ್ಕ್ರಿಪ್ಟ್ಗೆ ತೇಪೆ ಹಚ್ಚಿ ಸಿನಿಮಾ ಮಾಡಿದ್ದಾರೆ ಅನ್ನೋದು ಸಿನಿಮಾದ ಆರಂಭದಲ್ಲೇ ಗೊತ್ತಾಗುತ್ತೆ. ಹೀಗಾಗಿ ಸ್ಕ್ರಿಪ್ಟ್ ಕೈ ಕೊಟ್ಮೇಲೆ ಯಾರ್ ಎಷ್ಟೇ ಅದ್ಭುತವಾಗಿ ನಟಿಸಿದ್ರೂ ಅದು ವೇಸ್ಟೇ.
ಅಕ್ಷಯ್ ಕುಮಾರ್ ಆಸೀಫ್ ಹಾಗೂ ಲಕ್ಷ್ಮೀ ಎರಡು ಪಾತ್ರದಲ್ಲಿ ನಟಿಸಿದ್ದಾರೆ. ಆದ್ರೆ ಆಸೀಫ್ ಪಾತ್ರ ಮಾತ್ರ ನೋಡುಗರ ಗಮನ ಸೆಳೆಯುತ್ತೆ. ಅದೇ ಲಕ್ಷ್ಮೀ ಅವತಾರ ಕೆಲವು ಕಡೆ ಹಿಂಸೆ ಅಂತ ಅನಿಸುತ್ತದೆಯಂತೆ. ಮತ್ತೊಂದ್ಕಡೆ ಒರಿಜಿನಲ್ ಲಕ್ಷ್ಮೀಯ ಪಾತ್ರ ಕೆಲವು ಕ್ಷಣವಾದ್ರೂ ಗಮನ ಸೆಳೆಯುತ್ತೆ. ಶರದ್ ಕೇಲ್ಕರ್ ಈ ಪಾತ್ರವನ್ನ ನಿಭಾಯಿಸಿದ್ದು, ಕೆಲವು ದೃಶ್ಯಗಳಲ್ಲಿ ನಿಮ್ಗೆ ಸ್ವಲ್ಪ ರಿಲೀಫ್ ಕೊಡ್ತಾರೆ. ಇಷ್ಟು ಬಿಟ್ರೆ, ಕಿಯಾರಾ ಅಡ್ವಾಣಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಕಿಯಾರಾ ಸುಂದರವಾಗಿ ಕಾಣುವ ಒಂದೇ ಒಂದು ಹಾಡು ಬುರ್ಜ್ ಖಲೀಫಾದಲ್ಲಿ ಶೂಟ್ ಮಾಡಲಾಗಿದೆ.
ಒಟ್ನಲ್ಲಿ ಲಕ್ಷ್ಮಿ ಸ್ಕ್ರಿಪ್ಟ್ ಹಂತದಿಂದ್ಲೇ ಫೆಲ್ಯೂರ್ ಆಗಿದೆ ಎಂಬ ರಿವ್ಯೂ ಬರುತ್ತಿದೆ. ಆದ್ರೂ ಅಕ್ಷಯ್ ಕುಮಾರ್ ಸಿನಿಮಾ ಎಂಬ ಕಾರಣಕ್ಕೆ ಜನ ಕುತೂಹಲದಿಂದ ನೋಡ್ತಿದ್ದಾರೆ. ಜೊತೆಗೆ ಅಕ್ಷಯ್ ಅಭಿನಯ ಕೂಡ ಚೆನ್ನಾಗಿದೆ ಅನ್ತಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಸಿನಿಮಾಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
Published On - 10:05 am, Thu, 12 November 20