ವಲಸಿಗ ನಾಯಕರು ನೀತಿಗೆಟ್ಟವರಲ್ಲ, ಅವರಿಂದಾಗೇ ಕಾಂಗ್ರೆಸ್ ಪಕ್ಷದ ವರ್ಚಸ್ಸು ಹೆಚ್ಚಾಗಿದ್ದು: ಕೆಎಂ ಶಿವಲಿಂಗೇಗೌಡ, ಶಾಸಕ

ವಲಸಿಗ ನಾಯಕರು ನೀತಿಗೆಟ್ಟವರಲ್ಲ, ಅವರಿಂದಾಗೇ ಕಾಂಗ್ರೆಸ್ ಪಕ್ಷದ ವರ್ಚಸ್ಸು ಹೆಚ್ಚಾಗಿದ್ದು: ಕೆಎಂ ಶಿವಲಿಂಗೇಗೌಡ, ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 20, 2024 | 4:46 PM

ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ನೀವೇ ಸ್ಪರ್ಧಿಸಬೇಕು, ನೀವೇ ಅತ್ಯಂತ ಸೂಕ್ತ ಮತ್ತು ಪ್ರಬಲ ಕ್ಯಾಂಡಿಡೇಟ್ ಅಂತ ತನ್ನ ಮುಂದೆ ಹೇಳಿ ಬೇರೆಯವರೊಂದಿಗೆ ಮಾತಾಡುವಾಗ ಕಾಂಗ್ರೆಸ್ ಪಕ್ಷಕ್ಕೆ ವಲಸೆ ಬಂದವರು ನೀತಿಗೆಟ್ಟವರು ಅಂತ ಹೇಳುತ್ತಾರೆ. ಇವರ ಭಂಡತನ ಮತ್ತು ನಯವಂಚಕತೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದು ಯಾಕೆ ಸ್ವಾಮಿ ನಮಗೆ ಆತ್ಮಗೌರವ ಇಲ್ಲವೇ ಅಂತ ಪ್ರಶ್ನಿಸಿದ್ದೇನೆ ಅಂತ ಶಿವಲಿಂಗೇಗೌಡ ಹೇಳಿದರು.

ಹಾಸನ: ನಗರದಲ್ಲಿಂದು ಪತ್ರಿಕಾ ಗೋಷ್ಟ ನಡೆಸಿ ಮಾತಾಡಿದ ಅರಸೀಕೆರೆ ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ (KM Shivalinge Gowda) ಕ್ಷೇತ್ರದಲ್ಲಿ ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿರುವರೆಂದು ಅರೋಪಿಸಿ ಮಾಜಿ ಶಾಸಕ ಬಿ ಶಿವರಾಮ (B Shivaram) ಮತ್ತು ಕಾಂಗ್ರೆಸ್ ಮುಖಂಡ ಶಶಿಧರ್ (Shashidhar) ವಿರುದ್ಧ ವಾಗ್ದಾಳಿ ನಡೆಸಿದರು. ತನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆ ತಂದಿದ್ದು ಇವರ್ಯಾರೂ ಅಲ್ಲ, ಪಕ್ಷ ಸೇರುವಾಗ ಮಾತುಕತೆ ನಡೆದಿದ್ದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತ್ತು ಕರ್ನಾಟಕದ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಅವರೊಂದಿಗೆ ಎಂದು ಗೌಡರು ಹೇಳಿದರು. ತನ್ನ ಬಗ್ಗೆ ಅಪಪ್ರಚಾರ ಮಾಡುತ್ತಿರುವವರು ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ನೀವೇ ಸ್ಪರ್ಧಿಸಬೇಕು, ನೀವೇ ಅತ್ಯಂತ ಸೂಕ್ತ ಮತ್ತು ಪ್ರಬಲ ಕ್ಯಾಂಡಿಡೇಟ್ ಅಂತ ತನ್ನ ಮುಂದೆ ಹೇಳಿ ಬೇರೆಯವರೊಂದಿಗೆ ಮಾತಾಡುವಾಗ ಕಾಂಗ್ರೆಸ್ ಪಕ್ಷಕ್ಕೆ ವಲಸೆ ಬಂದವರು ನೀತಿಗೆಟ್ಟವರು ಅಂತ ಹೇಳುತ್ತಾರೆ. ಇವರ ಭಂಡತನ ಮತ್ತು ನಯವಂಚಕತೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದು ಯಾಕೆ ಸ್ವಾಮಿ ನಮಗೆ ಆತ್ಮಗೌರವ ಇಲ್ಲವೇ ಅಂತ ಪ್ರಶ್ನಿಸಿದ್ದೇನೆ ಅಂತ ಶಿವಲಿಂಗೇಗೌಡ ಹೇಳಿದರು.

ಇವರ ದೃಷ್ಟಿಯಲ್ಲಿ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಗೋಪಾಲಕೃಷ್ಟ ಮತ್ತು ತಾನು ನೀತಿಗೆಟ್ಟವರೇ? ಹಾಗೆ ನೋಡಿದರೆ ತಾವೆಲ್ಲ ಸೇರ್ಪಡೆಯಾದ ಬಳಿಕವೇ ಪಕ್ಷದ ಇಮೇಜ್ ಹೆಚ್ಚಾಗಿದೆ ಎಂದು ಶಿವಲಿಂಗೇಗೌಡ ಖಾರವಾಗಿ ಆದರೆ ಜಂಭದಿಂದ ಹೇಳಕೊಂಡರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ