ನಾಯಿಯನ್ನು ಹಿಡಿಯಲು ಬಂದು ಶೌಚಾಲಯದಲ್ಲಿ ಲಾಕ್ ಆಯ್ತು ಚಿರತೆ.. ಗ್ರಾಮಸ್ಥರಲ್ಲಿ ಆತಂಕ

|

Updated on: Feb 03, 2021 | 9:46 AM

ಮಂಗಳೂರು: ನಾಯಿ ಹಿಡಿಯಲು ಮನೆ ಬಳಿಯ ಟಾಯ್ಲೆಟ್​ಗೆ ಚಿರತೆಯೊಂದು ನುಗ್ಗಿದ್ದು ನಾಯಿ ಮತ್ತು ಚಿರತೆ ಹಾಗೂ ನಾಯಿಯನ್ನು ಸ್ಥಳೀಯರು ಶೌಚಾಲಯದಲ್ಲೇ ಕೂಡಿಹಾಕಿದ್ದಾರೆ.

ನಾಯಿಯನ್ನು ಹಿಡಿಯಲು ಬಂದು ಶೌಚಾಲಯದಲ್ಲಿ ಲಾಕ್ ಆಯ್ತು ಚಿರತೆ.. ಗ್ರಾಮಸ್ಥರಲ್ಲಿ ಆತಂಕ
ಶೌಚಾಲಯದಲ್ಲಿ ಲಾಕ್​ ಆಗಿರುವ ಚಿರತೆ ಮತ್ತು ನಾಯಿ
Follow us on

ಮಂಗಳೂರು: ನಾಯಿ ಹಿಡಿಯಲು ಮನೆ ಬಳಿಯ ಟಾಯ್ಲೆಟ್​ಗೆ ಚಿರತೆಯೊಂದು ನುಗ್ಗಿರುವ ಭಯ ಹುಟ್ಟಿಸುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕೈಕಂಬ ಗ್ರಾಮದಲ್ಲಿ ನಡೆದಿದೆ.

ನಾಯಿಯನ್ನು ಹಿಡಿಯಲು ರೇಗಪ್ಪ ಎಂಬುವವರ ಮನೆಯ ಶೌಚಾಲಯಕ್ಕೆ ಚಿರತೆಯೊಂದು ನುಗ್ಗಿದೆ. ಚಿರತೆಯನ್ನು ಕಂಡ ಮನೆ ಮಂದಿ ಗಾಬರಿಯಿಂದ ಮನೆಯಿಂದ ಓಡಿ ಹೊರ ಬಂದಿದ್ದಾರೆ. ಬಳಿಕ ಚಿರತೆಯನ್ನು ಹಾಗೂ ನಾಯಿಯನ್ನು ಶೌಚಾಲಯದಲ್ಲೇ ಕೂಡಿಹಾಕಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಟಾಯ್ಲೆಟ್​ನಲ್ಲಿ ಚಿರತೆ ಮತ್ತು ನಾಯಿ ಮಲಗಿರುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ನಂತರ ಕೈಕಂಬ ಗ್ರಾಮದ ಜನ ಭಯಭೀತರಾಗಿದ್ದಾರೆ.

ಕೊನೆಗೂ ಬೋನಿಗೆ ಬಿತ್ತು ಬೇಗೂರಿನ ಚಿರತೆ.. ನಿಟ್ಟುಸಿರು ಬಿಟ್ಟ ಸ್ಥಳೀಯರು