ಕೊಟ್ಟಿಗೆಗೆ ಬೆಂಕಿ ತಗಲಿ ದನ-ಕರುಗಳು ಸಜೀವ ದಹನ, ಎಲ್ಲಿ?

ಬೆಳಗಾವಿ: ಕೊಟ್ಟಿಗೆಗೆ ಬೆಂಕಿ ಬಿದ್ದು ದನ-ಕರುಗಳು ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ತೇಗೂರು ಗ್ರಾಮದಲ್ಲಿ ಸಂಭವಿಸಿದೆ. ಅಗ್ನಿ ಅವಘಡದಲ್ಲಿ 2 ಎತ್ತು, 2 ಆಕಳು, 2 ಕರುಗಳು ಸೇರಿ 1 ಕುರಿ ಸಜೀವ ದಹನವಾಗಿದೆ. ಶಿವರಾಯ ಚಂದ್ರಪ್ಪ ಪಾಗದ ಜಾನುವಾರುಗಳ ಮಾಲೀಕ ಎಂದು ತಿಳಿದುಬಂದಿದೆ. ಹೊಲದಲ್ಲಿ ಗುಡಿಸಲು ನಿರ್ಮಿಸಿ ಅಲ್ಲಿಯೇ ದನ ಕರುಗಳನ್ನು ಶಿವರಾಯ ಕಟ್ಟಿದ್ದರು. ರಾತ್ರಿ ಮನೆಗೆ ಊಟಕ್ಕೆ ಬಂದ ವೇಳೆ ಅವಘಡ ಸಂಭವಿಸಿದೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು […]

ಕೊಟ್ಟಿಗೆಗೆ ಬೆಂಕಿ ತಗಲಿ ದನ-ಕರುಗಳು ಸಜೀವ ದಹನ, ಎಲ್ಲಿ?

Updated on: Aug 16, 2020 | 1:41 PM

ಬೆಳಗಾವಿ: ಕೊಟ್ಟಿಗೆಗೆ ಬೆಂಕಿ ಬಿದ್ದು ದನ-ಕರುಗಳು ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ತೇಗೂರು ಗ್ರಾಮದಲ್ಲಿ ಸಂಭವಿಸಿದೆ.

ಅಗ್ನಿ ಅವಘಡದಲ್ಲಿ 2 ಎತ್ತು, 2 ಆಕಳು, 2 ಕರುಗಳು ಸೇರಿ 1 ಕುರಿ ಸಜೀವ ದಹನವಾಗಿದೆ. ಶಿವರಾಯ ಚಂದ್ರಪ್ಪ ಪಾಗದ ಜಾನುವಾರುಗಳ ಮಾಲೀಕ ಎಂದು ತಿಳಿದುಬಂದಿದೆ. ಹೊಲದಲ್ಲಿ ಗುಡಿಸಲು ನಿರ್ಮಿಸಿ ಅಲ್ಲಿಯೇ ದನ ಕರುಗಳನ್ನು ಶಿವರಾಯ ಕಟ್ಟಿದ್ದರು. ರಾತ್ರಿ ಮನೆಗೆ ಊಟಕ್ಕೆ ಬಂದ ವೇಳೆ ಅವಘಡ ಸಂಭವಿಸಿದೆ.

ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಕೊಟ್ಟಿಗೆಗೆ ಬೆಂಕಿ ಬಿದ್ದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.