ಆ್ಯಂಬುಲೆನ್ಸ್​ಗಾಗಿ ಕಾದು ಕಾದು ಸುಸ್ತಾದ ಯುವತಿ, ಸ್ಥಳೀಯರೇ ಆಟೋ ಹತ್ತಿಸಿ‌ ಕಳಿಸಿದ್ರು

| Updated By:

Updated on: Jul 06, 2020 | 1:56 PM

ಬೆಂಗಳೂರು: ರಾಜಧಾನಿಯಲ್ಲಿ ಆ್ಯಂಬುಲೆನ್ಸ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಗೊತ್ತಿದ್ದರು, ಅವರು ಯಾವುದೇ ಕ್ರಮ ತೆಗೆದುಕೊಂಡಿರುವುದು ತಿಳಿದು ಬಂದಿಲ್ಲ. ನಗರದಲ್ಲಿ ಆ್ಯಂಬುಲೆನ್ಸ್ ಸೇವೆ ಇಲ್ಲದೆ ಕೊರೊನಾ ಸೋಂಕಿತರು ನಡು ರಸ್ತೆಯಲ್ಲೇ ಸಾಯುವಂತ ವರದಿಗಳು ಬಂದಿವೆ. ಅದೆಷ್ಟೂ ಮಂದಿ ಆ್ಯಂಬುಲೆನ್ಸ್​ಗಾಗಿ ಗಂಟೆ ಗಂಟಲೆ ಕಾಯುತ್ತಿರುವಂತಹ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ. ಅದೇ ರೀತಿ ಅನಾರೋಗ್ಯಪೀಡಿತ ಯುವತಿಯೊಬ್ಬರು ಆ್ಯಂಬುಲೆನ್ಸ್​ಗಾಗಿ ಕಾದು ಕಾದು ಸುಸ್ತಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಯುವತಿ ಆ್ಯಂಬುಲೆನ್ಸ್​ಗೆ ಕಾಲ್ ಮಾಡಿದ್ದರು. […]

ಆ್ಯಂಬುಲೆನ್ಸ್​ಗಾಗಿ ಕಾದು ಕಾದು ಸುಸ್ತಾದ ಯುವತಿ, ಸ್ಥಳೀಯರೇ ಆಟೋ ಹತ್ತಿಸಿ‌ ಕಳಿಸಿದ್ರು
Follow us on

ಬೆಂಗಳೂರು: ರಾಜಧಾನಿಯಲ್ಲಿ ಆ್ಯಂಬುಲೆನ್ಸ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಗೊತ್ತಿದ್ದರು, ಅವರು ಯಾವುದೇ ಕ್ರಮ ತೆಗೆದುಕೊಂಡಿರುವುದು ತಿಳಿದು ಬಂದಿಲ್ಲ. ನಗರದಲ್ಲಿ ಆ್ಯಂಬುಲೆನ್ಸ್ ಸೇವೆ ಇಲ್ಲದೆ ಕೊರೊನಾ ಸೋಂಕಿತರು ನಡು ರಸ್ತೆಯಲ್ಲೇ ಸಾಯುವಂತ ವರದಿಗಳು ಬಂದಿವೆ.

ಅದೆಷ್ಟೂ ಮಂದಿ ಆ್ಯಂಬುಲೆನ್ಸ್​ಗಾಗಿ ಗಂಟೆ ಗಂಟಲೆ ಕಾಯುತ್ತಿರುವಂತಹ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ. ಅದೇ ರೀತಿ ಅನಾರೋಗ್ಯಪೀಡಿತ ಯುವತಿಯೊಬ್ಬರು ಆ್ಯಂಬುಲೆನ್ಸ್​ಗಾಗಿ ಕಾದು ಕಾದು ಸುಸ್ತಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಯುವತಿ ಆ್ಯಂಬುಲೆನ್ಸ್​ಗೆ ಕಾಲ್ ಮಾಡಿದ್ದರು. ಹೀಗಾಗಿ ಸಂಜೆ ವೈಟ್ ಫೀಲ್ಡ್ ನಾ ವಿಶಾಲ್ ಮಾರ್ಟ್ ಬಳಿ ಗಂಟೆಗಟ್ಟಲೆ ಆ್ಯಂಬುಲೆನ್ಸ್​ಗಾಗಿ ಕಾದಿದ್ದಾರೆ. ಆದರೆ ಅದರ ಸುಳಿವು ಮಾತ್ರ ಅವರಿಗೆ ಸಿಕ್ಕಿಲ್ಲ. ನಿಂತಲ್ಲಿಯೇ ಕೆಮ್ಮು, ಜ್ವರ ಹೆಚ್ಚಾಗಿದೆ. ಹಲವು ಗಂಟೆಗಳು ರಸ್ತೆ ಬದಿಯೇ ಕಾದಿದ್ದಾರೆ. ಇವರ ಪರಿಸ್ಥಿತಿ ಕಂಡು ಅಲ್ಲಿನ ಸ್ಥಳೀಯರು ಆಟೋ ಹತ್ತಿಸಿ‌ ಯುವತಿಯನ್ನು ಆಸ್ಪತ್ರೆಗೆ ಕಳುಹಿಸಿರುವ ಘಟನೆ ನಡೆದಿದೆ.

Published On - 1:01 pm, Mon, 6 July 20