ಕೋಲಾರ: ಲಾಕ್‌ಡೌನ್ ನಡುವೆಯೂ ಕೋಲಾರದಲ್ಲಿ ರಂಜಾನ್ ಮಾಸದ ರಂಗು ಕಳೆಗಟ್ಟಿದೆ. ಉಪವಾಸ, ಪ್ರಾರ್ಥನೆ, ದುಡಿಮೆಯಲ್ಲಿ ಅಲ್ಲಾಹುನನ್ನು ಕಾಣುತ್ತಿರುವ ಮುಸ್ಲಿಮರು ರಾತ್ರಿ ಮೂಡುವ ಚಂದ್ರನಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ನಗರದಲ್ಲಿ 50ಕ್ಕೂ ಹೆಚ್ಚು ಮಸೀದಿಗಳಿವೆ.
ರಂಜಾನ್ ಮಾಸದಲ್ಲಿ ದಿನಕ್ಕೆ 5 ಬಾರಿ ಪ್ರಾರ್ಥನೆ (ನಮಾಜ್) ಮಾಡುವುದು ಕಡ್ಡಾಯ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಜಿಲ್ಲಾಡಳಿತವು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿರ್ಬಂಧಿಸಿದೆ. ಹೀಗಾಗಿ ವ್ರತನಿಷ್ಠ ಮುಸ್ಲಿಂ ಸಮುದಾಯದವರು ತಮ್ಮ ಮನೆಗಳಲ್ಲೇ ಪ್ರಾರ್ಥನೆ ಮಾಡುತ್ತಿದ್ದಾರೆ.
ಮುಸ್ಲಿಮರ ಮನ ಮತ್ತು ಮನೆಗಳು ಪ್ರಾರ್ಥನೆಯ ಮೌನದಲ್ಲಿ ಅಲ್ಲಾಹುನನ್ನು ನೆನೆಯುತ್ತಿವೆ. ದೊಡ್ಡವರಿಗೆ ಪ್ರಾರ್ಥನೆಯು ನಿಷ್ಠೆಯ ವಿಷಯ. ದೊಡ್ಡವರ ಮೌನ ಪ್ರಾರ್ಥನೆ ನಡುವೆ ಮಕ್ಕಳ ಬೆರಗು ಕಂಗಳ ಚಂಚಲ ನೋಟದ ಬೆಳಕು ಮನೆಯಂಗಳದಲ್ಲಿ ಹಾಸಿಕೊಂಡಿದೆ.
ಭಾವೈಕ್ಯದ ಪ್ರಭಾವಳಿ:
ಪ್ರೀತಿ ಸಹೋದರತ್ವದ ಪ್ರತೀಕವಾದ ರಂಜಾನ್ ಹಬ್ಬವನ್ನು ಕುತುಬ್-ಎ ರಂಜಾನ್, ಈದ್ ಉಲ್ ಫಿತರ್ ಹೀಗೆ ಮೊದಲಾದ ಹೆಸರುಗಳಿಂದ ಕರೆಯಲಾಗುತ್ತದೆ. ರಂಜಾನ್‌ಗೆ ಭಾವೈಕ್ಯದ ಪ್ರಭಾವಳಿ ಉಂಟು. ಸಮಬಾಳು ಸಮಪಾಲಿನ ಅರ್ಥ ತಿಳಿಸುವ ಅಪೂರ್ವ ಹಬ್ಬವಾಗಿದೆ. ವೈಷಮ್ಯ, ವೈರತ್ವ ತೊಡೆದು ಹಾಕಿ ಸ್ನೇಹ ಮತ್ತು ಪ್ರೀತಿಯಿಂದ ಒಂದಾಗುವುದು ರಂಜಾನ್ ಮಾಸಾಚರಣೆಯ ಮುಖ್ಯ ಉದ್ದೇಶ. ಸಾಮೂಹಿಕ ನಮಾಜ್, ಉಪವಾಸದಷ್ಟೇ ನಿಷ್ಠೆಯಿಂದ ಸ್ನೇಹಿತರನ್ನು ಮತ್ತು ಬಂಧುಗಳನ್ನು ಸತ್ಕರಿಸಬೇಕು ಎಂಬುದು ಕೂಡಾ ಆ ಆಚರಣೆಯ ಮುಖ್ಯ ನಿಯಮ.
ರಂಜಾನ್ ಸಮೋಸಕ್ಕೆ ಹೆಚ್ಚಿನ ಮಹತ್ವ:
Published On - 10:31 am, Sun, 24 May 20