ತಿರುಪತಿ: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಭಾರತವನ್ನು ಲಾಕ್ಡೌನ್ ಮಾಡಲಾಗಿದೆ. ತಿರುಮಲ ತಿರುಪತಿ ದೇವಸ್ಥಾನಕ್ಕೂ ಬೀಗ ಹಾಕಲಾಗಿದೆ. ಇದರಿಂದ ಆರ್ಥಿಕ ಬಿಕ್ಕಟ್ಟಿನಲ್ಲಿ ವಿಶ್ವದ ಶ್ರೀಮಂತ ದೇವಾಲಯ ಸಿಲುಕಿದೆ. ಹೀಗಾಗಿ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಆಡಳಿತ ಮಂಡಳಿ ತಮಿಳುನಾಡಿನಲ್ಲಿ ಕೆಲವು ಆಸ್ತಿಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ.
ಈ ಹಿಂದೆ ಟಿಟಿಡಿ ಮಂಡಳಿಯು ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಶ್ರೀವಾರಿ ಭೂಮಿಯನ್ನು ಮಾರಾಟ ಮಾಡಲು ನಿರ್ಧರಿಸಿತ್ತು. ಟಿಟಿಡಿ ಮಂಡಳಿ 23 ಪ್ರದೇಶಗಳಲ್ಲಿ ಆಸ್ತಿ ಮತ್ತು ಜಮೀನುಗಳನ್ನು ಮಾರಾಟ ಮಾಡಲು ಆದೇಶ ಹೊರಡಿಸಿದೆ. ಹೀಗಾಗಿ ತಮಿಳುನಾಡಿನಲ್ಲಿ ಅನಧಿಕೃತ ಮತ್ತು ನಿರ್ವಹಿಸಲಾಗದ ಆಸ್ತಿಗಳನ್ನು ಸಾರ್ವಜನಿಕ ಹರಾಜಿನ ಮೂಲಕ ಮಾರಾಟ ಮಾಡಲು 8ಅಧಿಕಾರಿಗಳನ್ನು ಹೊಂದಿರುವ ಎರಡು ಸಮಿತಿಗಳನ್ನು ನೇಮಿಸಲಾಗಿದೆ.
ಈ ಸಮಿತಿ ಹರಾಜಿನ ಮೂಲಕ ತಮ್ಮ ಆಸ್ತಿಗಳನ್ನು ಮಾರಾಟ ಮಾಡಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ. ಈ ಜಮೀನುಗಳು ತಿರುವಣ್ಣಾಮಲೈ, ತಿರುಚಿರಾಪಳ್ಳಿ, ತಿರುಚಿ, ತಿರುವಳ್ಳೂರು, ಧರ್ಮಪುರಿ, ವಿಲ್ಲುಪುರಂ, ಕಾಂಚಿ, ಕೊಯಮತ್ತೂರು, ವೆಲ್ಲೂರು, ಮತ್ತು ನಾಗಪಟ್ಟಣಂ ಜಿಲ್ಲೆಗಳ ವಿವಿಧ ಭಾಗಗಳಲ್ಲಿವೆ.
Published On - 9:43 am, Sun, 24 May 20