ಮಹದೇಶ್ವರ ಬೆಟ್ಟದ ಮಠಕ್ಕೆ ನೂತನ ಸ್ವಾಮೀಜಿ, ಬ್ರಾಹ್ಮಿ ಮುಹೂರ್ತದಲ್ಲಿ ಪಟ್ಟಾಭಿಷೇಕ

ಚಾಮರಾಜನಗರ: ಸಾಲೂರು ಮಠದ ನೂತನ ಮಠಾಧೀಶರಾಗಿ ಎಂ ನಾಗೇಂದ್ರ ಆಯ್ಕೆಯಾಗಿದ್ದಾರೆ. ಈ ಸಂಬಂಧ ಮೈಸೂರಿನ ಸತ್ತೂರು ಮಠದ ಪ್ರತಿನಿಧಿ ನೀಲಕಂಠ ಮಠಾಧೀಶ ಸಿದ್ದಲಿಂಗ ಸ್ವಾಮಿಜಿ ಎಂ ನಾಗೇಂದ್ರ ಅವರ ಆಯ್ಕೆಯನ್ನು ಘೋಷಣೆ ಮಾಡಿದ್ದಾರೆ. ಕಳೆದೆರಡು ವರ್ಷಗಳಿಂದ ವಿವಾದದಲ್ಲಿ ಸಿಲುಕಿದ್ದ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಠಕ್ಕೆ ಸ್ವಾಮೀಜಿಯವರು ಇರಲಿಲ್ಲ. ಹಿರಿಯ ಸ್ವಾಮಿಜಿ ಗುರುಸ್ವಾಮಿಜಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ‌. ಮತ್ತೊಬ್ಬ ಸ್ವಾಮಿಜಿ ಇಮ್ಮಡಿ ಮಹದೇವ ಸ್ವಾಮಿಗಳು ಸುಳ್ವಾಡಿ ದೇವಾಲಯದ ಪ್ರಸಾದದಲ್ಲಿ ವಿಷ ಬೆರಸಿ 18 ಮಂದಿ […]

ಮಹದೇಶ್ವರ ಬೆಟ್ಟದ ಮಠಕ್ಕೆ ನೂತನ ಸ್ವಾಮೀಜಿ, ಬ್ರಾಹ್ಮಿ ಮುಹೂರ್ತದಲ್ಲಿ ಪಟ್ಟಾಭಿಷೇಕ
Edited By:

Updated on: Aug 07, 2020 | 2:39 PM

ಚಾಮರಾಜನಗರ: ಸಾಲೂರು ಮಠದ ನೂತನ ಮಠಾಧೀಶರಾಗಿ ಎಂ ನಾಗೇಂದ್ರ ಆಯ್ಕೆಯಾಗಿದ್ದಾರೆ. ಈ ಸಂಬಂಧ ಮೈಸೂರಿನ ಸತ್ತೂರು ಮಠದ ಪ್ರತಿನಿಧಿ ನೀಲಕಂಠ ಮಠಾಧೀಶ ಸಿದ್ದಲಿಂಗ ಸ್ವಾಮಿಜಿ ಎಂ ನಾಗೇಂದ್ರ ಅವರ ಆಯ್ಕೆಯನ್ನು ಘೋಷಣೆ ಮಾಡಿದ್ದಾರೆ.

ಕಳೆದೆರಡು ವರ್ಷಗಳಿಂದ ವಿವಾದದಲ್ಲಿ ಸಿಲುಕಿದ್ದ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಠಕ್ಕೆ ಸ್ವಾಮೀಜಿಯವರು ಇರಲಿಲ್ಲ. ಹಿರಿಯ ಸ್ವಾಮಿಜಿ ಗುರುಸ್ವಾಮಿಜಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ‌.

ಮತ್ತೊಬ್ಬ ಸ್ವಾಮಿಜಿ ಇಮ್ಮಡಿ ಮಹದೇವ ಸ್ವಾಮಿಗಳು ಸುಳ್ವಾಡಿ ದೇವಾಲಯದ ಪ್ರಸಾದದಲ್ಲಿ ವಿಷ ಬೆರಸಿ 18 ಮಂದಿ ಭಕ್ತರನ್ನು ಬಲಿ ಪಡೆದ ಆರೋಪದಲ್ಲಿ ಜೈಲಿನಲ್ಲಿ ಇದ್ದಾರೆ.

ಹೀಗಾಗಿ ನೂತನ ಮಠಾದೀಶರ ನೇಮಕಾತಿ ಸಂಬಂಧ ಸಮಿತಿ ರಚಿಸಲಾಗಿತ್ತು. ಈಗ ಸಮಿತಿ ತೀರ್ಮಾನದಂತೆ ಎಂ ನಾಗೇಂದ್ರ ಅವರನ್ನು ನೂತನ ಮಠಾಧೀಶರನ್ನಾಗಿ ನೇಮಕ ಮಾಡಲಾಗಿದೆ. ಶನಿವಾರ ಬ್ರಾಹ್ಮಿ ಮುಹೂರ್ತದಲ್ಲಿ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದಲ್ಲಿ ನೂತನ ಮಠಾಧಿಶರಿಗೆ ಪಟ್ಟಾಭಿಷೇಕ ನಡೆಯಲಿದೆ.