ಸತತ ಮಳೆಗೆ ಮತ್ತೆ ಚಾರ್ಮಾಡಿ ಘಾಟ್‌ನಲ್ಲಿ ಬೆಟ್ಟ ಕುಸಿದು ಸಂಚಾರ ಸ್ಥಗಿತ
ಮಂಗಳೂರು: ಸತತವಾಗಿ ಸುರಿಯುತ್ತಿರುವ ಮಳೆಗೆ ಚಾರ್ಮಾಡಿ ಘಾಟ್‌ನಲ್ಲಿ ಮತ್ತೆ ಬೆಟ್ಟ ಕುಸಿತವಾಗಿರೋದ್ರಿಂದ ವಾಹನ ಸಂಚಾರ ಮತ್ತೆ ಸ್ಥಗಿತವಾಗಿದೆ. ಹೌದು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿರುವ ಚಾರ್ಮುಡಿಘಾಟ್‌ನಲ್ಲಿ ಮಳೆಯಿಂದಾಗಿ ಮತ್ತೆ ಬೆಟ್ಟ ಕುಸಿತವಾಗಿದೆ. ಅಷ್ಟೇ ಅಲ್ಲ ಘಾಟ್ ನ ಅಲೇಖಾನ್ ಪ್ರದೇಶದ ರಸ್ತೆಯಲ್ಲಿ ಭಾರಿ ಬಿರುಕು ಕೂಡಾ ಕಂಡು ಬಂದಿದೆ. ಸುಮಾರು 15 ಅಡಿ ಗ್ಯಾಪ್‌ನಲ್ಲಿ ಎರಡು ಕಡೆಯಲ್ಲಿ ರಸ್ತೆಯಲ್ಲಿ ಬಿರುಕು ಬಿಟ್ಟಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಮುನ್ನಚ್ಚೆರಿಕಾ ಕ್ರಮವಾಗಿ ಘಾಟ್ ನಲ್ಲಿ ಮತ್ತೇ ವಾಹನಗಳ […]
ಮಂಗಳೂರು: ಸತತವಾಗಿ ಸುರಿಯುತ್ತಿರುವ ಮಳೆಗೆ ಚಾರ್ಮಾಡಿ ಘಾಟ್‌ನಲ್ಲಿ ಮತ್ತೆ ಬೆಟ್ಟ ಕುಸಿತವಾಗಿರೋದ್ರಿಂದ ವಾಹನ ಸಂಚಾರ ಮತ್ತೆ ಸ್ಥಗಿತವಾಗಿದೆ. ಹೌದು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿರುವ ಚಾರ್ಮುಡಿಘಾಟ್‌ನಲ್ಲಿ ಮಳೆಯಿಂದಾಗಿ ಮತ್ತೆ ಬೆಟ್ಟ ಕುಸಿತವಾಗಿದೆ. ಅಷ್ಟೇ ಅಲ್ಲ ಘಾಟ್ ನ ಅಲೇಖಾನ್ ಪ್ರದೇಶದ ರಸ್ತೆಯಲ್ಲಿ ಭಾರಿ ಬಿರುಕು ಕೂಡಾ ಕಂಡು ಬಂದಿದೆ. ಸುಮಾರು 15 ಅಡಿ ಗ್ಯಾಪ್‌ನಲ್ಲಿ ಎರಡು ಕಡೆಯಲ್ಲಿ ರಸ್ತೆಯಲ್ಲಿ ಬಿರುಕು ಬಿಟ್ಟಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಮುನ್ನಚ್ಚೆರಿಕಾ ಕ್ರಮವಾಗಿ ಘಾಟ್ ನಲ್ಲಿ ಮತ್ತೇ ವಾಹನಗಳ ರಸ್ತೆ ಸಂಚಾರವನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ. ಇದರ ಜೊತೆಗೆ ಚಾರ್ಮಾಡಿ ಚೆಕ್ ಪೋಸ್ಟ್, ಕೊಟ್ಟಿಗೆಹಾರ ಚೆಕ್ ಪೋಸ್ಟ್‌ಗಳನ್ನು ಕೂಡಾ ಬಂದ್ ಮಾಡಲಾಗಿದೆ. ಪರಿಣಾಮ ನೂರಾರು ವಾಹನಗಳ ರಸ್ತೆಯಲ್ಲಿಯೇ ನಿಂತಿದ್ದು ವಾಹನ ಸವಾರರು ಆತಂಕಕ್ಕೊಳಗಾಗಿದ್ದಾರೆ.