ತಿನ್ನೋ ಅನ್ನಕ್ಕೂ ಗತಿ ಇಲ್ಲದವ, ರಾತ್ರೋರಾತ್ರಿ ಲಕ್ಷಾಧಿಪತಿಯಾದ, ಎಲ್ಲಿ?
ಮಧ್ಯಪ್ರದೇಶ: ಅದೃಷ್ಟ ಅಂದ್ರೆ ಹಾಗೇನೆ. ಅದು ಯಾವಾಗ ಮತ್ತು ಹೇಗೆ ಬರುತ್ತೆ ಅಂತಾ ಹೇಳೋಕಾಗಲ್ಲ. ಇದಕ್ಕೆ ಲೆಟೆಸ್ಟ್ ಉಹಾಹರಣೆ ಮಧ್ಯಪ್ರದೇಶದ ಸುಬಲ್ ಎಂಬ ಕಾರ್ಮಿಕ. ಒಪ್ಪತ್ತಿನ ಕೂಳಿಗಾಗಿ ದುಡಿಯುತ್ತಿದ್ದ ಕಾರ್ಮಿಕನಿಗೆ ಪನ್ನಾ ಜಿಲ್ಲೆಯ ವಜ್ರದ ಗಣಿಯೊಂದರಲ್ಲಿ 30 ರಿಂದ 35 ಲಕ್ಷ ಮೌಲ್ಯದ ಮೂರು ವಜ್ರಗಳು ಸಿಕ್ಕಿವೆ. ಅಷ್ಟೇ ಈಗ ಆತ ರಾತ್ರೋರಾತ್ರಿ ಲಕ್ಷಾಧಿಪತಿಯಾಗಿದ್ದಾನೆ. ಸುಬಲ್ ಎಂಬ ಈ ಕಾರ್ಮಿಕ ಜೀವನ ನಡೆಸಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದ. ಹೀಗೆ ಒಮ್ಮೆ ಗಣಿ ಅಗೆಯುವಾಗ 7.5 ಕ್ಯಾರೆಟ್ ನ […]
ಮಧ್ಯಪ್ರದೇಶ: ಅದೃಷ್ಟ ಅಂದ್ರೆ ಹಾಗೇನೆ. ಅದು ಯಾವಾಗ ಮತ್ತು ಹೇಗೆ ಬರುತ್ತೆ ಅಂತಾ ಹೇಳೋಕಾಗಲ್ಲ. ಇದಕ್ಕೆ ಲೆಟೆಸ್ಟ್ ಉಹಾಹರಣೆ ಮಧ್ಯಪ್ರದೇಶದ ಸುಬಲ್ ಎಂಬ ಕಾರ್ಮಿಕ. ಒಪ್ಪತ್ತಿನ ಕೂಳಿಗಾಗಿ ದುಡಿಯುತ್ತಿದ್ದ ಕಾರ್ಮಿಕನಿಗೆ ಪನ್ನಾ ಜಿಲ್ಲೆಯ ವಜ್ರದ ಗಣಿಯೊಂದರಲ್ಲಿ 30 ರಿಂದ 35 ಲಕ್ಷ ಮೌಲ್ಯದ ಮೂರು ವಜ್ರಗಳು ಸಿಕ್ಕಿವೆ. ಅಷ್ಟೇ ಈಗ ಆತ ರಾತ್ರೋರಾತ್ರಿ ಲಕ್ಷಾಧಿಪತಿಯಾಗಿದ್ದಾನೆ.
ಸುಬಲ್ ಎಂಬ ಈ ಕಾರ್ಮಿಕ ಜೀವನ ನಡೆಸಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದ. ಹೀಗೆ ಒಮ್ಮೆ ಗಣಿ ಅಗೆಯುವಾಗ 7.5 ಕ್ಯಾರೆಟ್ ನ ಮೂರು ವಜ್ರಗಳು ದೊರೆಕಿವೆ. ಈಗ ಈ ಅಮೂಲ್ಯವಾದ ಈ ಕಲ್ಲುಗಳನ್ನು ಜಿಲ್ಲಾ ವಜ್ರ ಕಚೇರಿಯಲ್ಲಿ ಠೇವಣಿ ಇಟ್ಟಿದ್ದು, ಸರ್ಕಾರದ ನಿಯಮಗಳ ಪ್ರಕಾರ ಅವುಗಳನ್ನು ಹರಾಜು ಹಾಕಲಾಗುವುದು. ಹೀಗೆ ಹರಾಜಿನಿಂದ ಬಂದ ಹಣದಲ್ಲಿ ಸರ್ಕಾದ ತೆರಿಗೆ ಕಡಿತ ಮಾಡಿ ಬಾಕಿ ಹಣವನ್ನು ಕಾರ್ಮಿಕ ಪಡೆಯುತ್ತಾನೆ.
ಅದರಂತೆ ಶೇ.12 ರಷ್ಟು ತೆರಿಗೆಯನ್ನು ಕಡಿತಗೊಳಿಸಿದ ನಂತರ, ಉಳಿದ ಶೇ.88 ಮಾರಾಟದ ಆದಾಯ ಕಾರ್ಮಿಕ ಸುಬಲ್ ಪಾಲಾಗಲಿದೆ. ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ಬುಂದೇಲ್‌ಖಂಡ್ ಪ್ರದೇಶದ ಪನ್ನಾದ ಮತ್ತೊಂದು ಗಣಿಯಿಂದ ಮತ್ತೊಬ್ಬ ಕಾರ್ಮಿಕ 10.69 ಕ್ಯಾರೆಟ್ ವಜ್ರವನ್ನು ಪತ್ತೆ ಹಚ್ಚಿ ಇದೇ ರೀತಿ ಕೋಟ್ಯಾಧಿಪತಿಯಾಗಿದ್ದ.