ಕೇರಳದ ಕೋಯಿಕೋಡ್‌ನಲ್ಲಿ ಏರ್ ಇಂಡಿಯಾ ವಿಮಾನಾಪಘಾತ ಪೈಲಟ್ ಸ್ಥಳದಲ್ಲೇ ಸಾವು
ಕೇರಳ: ಕೇರಳದ ಕೊಯಿಕೋಡ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತ ಸಂಭವಿಸಿದೆ. ಕೋಯಿಕೊಡ್‌ನ ಕರಿಪುರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಈ ಅವಘಡ ಸಂಭವಿಸಿದೆ. ಸತತವಾಗಿ ಮಳೆ ಸುರಿಯುತ್ತಿರೋದ್ರಿಂದ ವಿಮಾನದ ರನ್‌ವೇ ಜಾರು ಮುಖವಾಗಿದ್ದು, ದುಬೈನಿಂದ ಬಂದ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಸಮತೋಲನ ಕಳೆದುಕೊಂಡು ರನ್‌ವೇಗೆ ಅಪ್ಪಳಿಸಿದೆ. ಪರಿಣಾಮ ವಿಮಾನ ಎರಡು ತುಂಡುಗಳಾಗಿದ್ದು, ವಿಮಾನದ ಪೈಲಟ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ದುರಾದೃಷ್ಟ ವಿಮಾನದಲ್ಲಿ 180 ಪ್ರಯಾಣಿಕರು ಇದ್ದರೆಂದು ತಿಳಿದು ಬಂದಿದ್ದು, ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. 18 ಜನರನ್ನು ಆಸ್ಪತ್ರೆಗೆ […]
ಕೇರಳ: ಕೇರಳದ ಕೊಯಿಕೋಡ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತ ಸಂಭವಿಸಿದೆ. ಕೋಯಿಕೊಡ್‌ನ ಕರಿಪುರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಈ ಅವಘಡ ಸಂಭವಿಸಿದೆ.
ಸತತವಾಗಿ ಮಳೆ ಸುರಿಯುತ್ತಿರೋದ್ರಿಂದ ವಿಮಾನದ ರನ್‌ವೇ ಜಾರು ಮುಖವಾಗಿದ್ದು, ದುಬೈನಿಂದ ಬಂದ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಸಮತೋಲನ ಕಳೆದುಕೊಂಡು ರನ್‌ವೇಗೆ ಅಪ್ಪಳಿಸಿದೆ. ಪರಿಣಾಮ ವಿಮಾನ ಎರಡು ತುಂಡುಗಳಾಗಿದ್ದು, ವಿಮಾನದ ಪೈಲಟ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಈ ದುರಾದೃಷ್ಟ ವಿಮಾನದಲ್ಲಿ 180 ಪ್ರಯಾಣಿಕರು ಇದ್ದರೆಂದು ತಿಳಿದು ಬಂದಿದ್ದು, ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. 18 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 134 ಜನರು ಇನ್ನು ವಿಮಾನದಲ್ಲಿಯೇ ಇದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ. ವಂದೇ ಭಾರತ್ ಮಿಷನ್ ಅಡಿ ಈ ಪ್ರಯಾಣಿಕರನ್ನು ದುಬೈನಿಂದ ಭಾರತಕ್ಕೆ ಈ ವಿಮಾನದಲ್ಲಿ ಕರೆತರಲಾಗಿತ್ತು.
Published On - 9:10 pm, Fri, 7 August 20