ಈ ಬಾರಿಯೂ ಕೇರಳದಲ್ಲಿ ಮಳೆ ಆರ್ಭಟ.. Red Alert ಭೂಕುಸಿತಕ್ಕೆ 13 ಮಂದಿ ಸಾವು

ಕೇರಳ: ನೆರೆಯ ದೇವರನಾಡು ಕೇರಳದಲ್ಲಿ ಈ ಬಾರಿಯೂ ಮಳೆರಾಯ ತನ್ನ ರುದ್ರರೂಪ ತೋರುತ್ತಿದ್ದಾನೆ. ಈ ಬಾರಿಯ ಮುಂಗಾರು ಋತುವಿನಲ್ಲಿ ನಿರಂತರವಾಗಿ ಜೋರು ಮಳೆಯಾಗುತ್ತಿದ್ದು, ಇಡುಕ್ಕಿಯಲ್ಲಿ ಭೂ ಕುಸಿತಗಳು ಹೆಚ್ಚಾಗಿವೆ. ಕೇಂದ್ರ ಸರ್ಕಾರಕ್ಕೆ SOS ಸಂದೇಶ: ಇಡುಕ್ಕಿಯ ರಾಜಮಾಲಾದಲ್ಲಿ ಭೂ ಕುಸಿತಗಳಿಗೆ 13 ಮಂದಿ ಅಸುನೀಗಿದ್ದು, ಸದ್ಯಕ್ಕೆ 20 ಮಂದಿಯನ್ನು ರಕ್ಷಿಸಲಾಗಿದೆ. ಕಳೆದ ವರ್ಷದಂತೆ ತಕ್ಷಣ ಭಾರತೀಯ ವಾಯುಪಡೆಯನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ಸರ್ಕಾರಕ್ಕೆ SOS ಸಂದೇಶ ಕಳಿಸಿದ್ದಾರೆ. Monsoon […]

ಈ ಬಾರಿಯೂ ಕೇರಳದಲ್ಲಿ ಮಳೆ ಆರ್ಭಟ.. Red Alert ಭೂಕುಸಿತಕ್ಕೆ 13 ಮಂದಿ ಸಾವು
Follow us
ಸಾಧು ಶ್ರೀನಾಥ್​
|

Updated on:Aug 07, 2020 | 2:58 PM

ಕೇರಳ: ನೆರೆಯ ದೇವರನಾಡು ಕೇರಳದಲ್ಲಿ ಈ ಬಾರಿಯೂ ಮಳೆರಾಯ ತನ್ನ ರುದ್ರರೂಪ ತೋರುತ್ತಿದ್ದಾನೆ. ಈ ಬಾರಿಯ ಮುಂಗಾರು ಋತುವಿನಲ್ಲಿ ನಿರಂತರವಾಗಿ ಜೋರು ಮಳೆಯಾಗುತ್ತಿದ್ದು, ಇಡುಕ್ಕಿಯಲ್ಲಿ ಭೂ ಕುಸಿತಗಳು ಹೆಚ್ಚಾಗಿವೆ.

ಕೇಂದ್ರ ಸರ್ಕಾರಕ್ಕೆ SOS ಸಂದೇಶ: ಇಡುಕ್ಕಿಯ ರಾಜಮಾಲಾದಲ್ಲಿ ಭೂ ಕುಸಿತಗಳಿಗೆ 13 ಮಂದಿ ಅಸುನೀಗಿದ್ದು, ಸದ್ಯಕ್ಕೆ 20 ಮಂದಿಯನ್ನು ರಕ್ಷಿಸಲಾಗಿದೆ. ಕಳೆದ ವರ್ಷದಂತೆ ತಕ್ಷಣ ಭಾರತೀಯ ವಾಯುಪಡೆಯನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ಸರ್ಕಾರಕ್ಕೆ SOS ಸಂದೇಶ ಕಳಿಸಿದ್ದಾರೆ.

Monsoon 2020 ಕೇರಳದ ಮೂರು ಜಿಲ್ಲೆಗಳಿಗೆ Red Alert ಕೇರಳದ ಮೂರು ಜಿಲ್ಲೆಗಳಿಗೆ ರೆಡ್ ಆಲರ್ಟ್ ಘೋಷಣೆ ಮಾಡಲಾಗಿದೆ. ಹವಾಮಾನ ಇಲಾಖೆಯು ಇಡುಕ್ಕಿ, ವಯನಾಡ್, ಮಲಪ್ಪುರಂ ಜಿಲ್ಲೆಗಳಿಗೆ ಆಗಸ್ಟ್ 11 ರವರೆಗೆ ಭಾರಿ ಮಳೆಯ ರೆಡ್ ಆಲರ್ಟ್ ನೀಡಿದೆ.

Published On - 1:30 pm, Fri, 7 August 20