ಖಾಸಗಿ ಆಸ್ಪತ್ರೆಯ ಕಳ್ಳಾಟಕ್ಕೆ ಬಿಬಿಎಂಪಿ ಅಧಿಕಾರಿಗಳಿಂದ ಬಿತ್ತು ಬ್ರೇಕ್, OPD ಸೀಲ್​​

ಬೆಂಗಳೂರು: ಸರ್ಕಾರದ ಕಡೆಯಿಂದ ಶಿಫಾರಸು ಮಾಡಲಾದ ಸೋಂಕಿತರಿಂದ ಮುಂಗಡ ಹಣ ಪಾವತಿಸಿಕೊಂಡು, ನಂತರ ಅವರನ್ನ ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ನೆಪ ಹೇಳುತ್ತಿದ್ದ  ಖಾಸಗಿ ಆಸ್ಪತ್ರೆಯ OPD ಯನ್ನು ಅಧಿಕಾರಿಗಳು ಸೀಲ್​ ಮಾಡಿದ್ದಾರೆ. ವಸಂತನಗರದ ಮಹಾವೀರ್​ ಜೈನ್ ಆಸ್ಪತ್ರೆಯ ಹೊರರೋಗಿಗಳ ವಿಭಾಗವನ್ನು ಸೀಲ್​ ಮಾಡಲಾಗಿದೆ. ಜೈನ್ ಆಸ್ಪತ್ರೆಯ ಆಡಳಿತ ಮಂಡಳಿ ಸರ್ಕಾರದ ಕಡೆಯಿಂದ ದಾಖಲಾಗುವ ಸೋಂಕಿತರಿಂದ ಮುಂಗಡ ಹಣ ಪಡೆದು, ನಂತರ ರೋಗಿಗಳನ್ನು ದಾಖಲಿಸಿಕೊಳ್ಳದೆ ನೆಪ  ಹೇಳುತ್ತಿತ್ತು ಎಂದು ತಿಳಿದುಬಂದಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಬಿಬಿಎಂಪಿ ಪೂರ್ವ ವಲಯದ […]

ಖಾಸಗಿ ಆಸ್ಪತ್ರೆಯ ಕಳ್ಳಾಟಕ್ಕೆ ಬಿಬಿಎಂಪಿ ಅಧಿಕಾರಿಗಳಿಂದ ಬಿತ್ತು ಬ್ರೇಕ್, OPD ಸೀಲ್​​

Updated on: Aug 04, 2020 | 6:50 PM

ಬೆಂಗಳೂರು: ಸರ್ಕಾರದ ಕಡೆಯಿಂದ ಶಿಫಾರಸು ಮಾಡಲಾದ ಸೋಂಕಿತರಿಂದ ಮುಂಗಡ ಹಣ ಪಾವತಿಸಿಕೊಂಡು, ನಂತರ ಅವರನ್ನ ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ನೆಪ ಹೇಳುತ್ತಿದ್ದ  ಖಾಸಗಿ ಆಸ್ಪತ್ರೆಯ OPD ಯನ್ನು ಅಧಿಕಾರಿಗಳು ಸೀಲ್​ ಮಾಡಿದ್ದಾರೆ.


ವಸಂತನಗರದ ಮಹಾವೀರ್​ ಜೈನ್ ಆಸ್ಪತ್ರೆಯ ಹೊರರೋಗಿಗಳ ವಿಭಾಗವನ್ನು ಸೀಲ್​ ಮಾಡಲಾಗಿದೆ. ಜೈನ್ ಆಸ್ಪತ್ರೆಯ ಆಡಳಿತ ಮಂಡಳಿ ಸರ್ಕಾರದ ಕಡೆಯಿಂದ ದಾಖಲಾಗುವ ಸೋಂಕಿತರಿಂದ ಮುಂಗಡ ಹಣ ಪಡೆದು, ನಂತರ ರೋಗಿಗಳನ್ನು ದಾಖಲಿಸಿಕೊಳ್ಳದೆ ನೆಪ  ಹೇಳುತ್ತಿತ್ತು ಎಂದು ತಿಳಿದುಬಂದಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಬಿಬಿಎಂಪಿ ಪೂರ್ವ ವಲಯದ ಜಂಟಿ ಆಯುಕ್ತ ಪಲ್ಲವಿಯವರ ನೇತೃತ್ವದಲ್ಲಿ ಇಂದು ಆಸ್ಪತ್ರೆಗೆ ಭೇಟಿನೀಡಿದ ಅಧಿಕಾರಿಗಳು ಆಸ್ಪತ್ರೆಯ OPD ಯನ್ನು ಸೀಲ್​ ಮಾಡಿ ನೋಟಿಸ್ ಜಾರಿ ಮಾಡಿದ್ದಾರೆ.

Published On - 6:43 pm, Tue, 4 August 20