Bengaluru Tech Summit 2020: ಟೆಕ್ ಸಮ್ಮೇಳನದಲ್ಲಿ ಗಣ್ಯರ ಮಾತು

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ನಡೆದ ಬೆಂಗಳೂರು ಟೆಕ್​ ಸಮಿಟ್​ 2020 ಇಂದು ಯಶಸ್ವಿಯಾಗಿ ಸಂಪನ್ನಗೊಂಡಿತು. ಮೂರು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ಮಾತನಾಡಿದ ಗಣ್ಯರ ಭಾಷಣದ ಹೈಲೈಟ್ಸ್​ ಇಲ್ಲಿದೆ ನೋಡಿ. ಪ್ರಧಾನಿ ಮೋದಿ: ಭವಿಷ್ಯದಲ್ಲಿ ಮತ್ತಷ್ಟು ಸುಧಾರಿತ ತಂತ್ರಜ್ಞಾನದ ಮೂಲಕ ವರ್ಕ್ ಫ್ರಾಮ್ ಎನಿವೇರ್ ಜಾರಿಗೊಳಿಸುವ ಕುರಿತು ಸರ್ಕಾರ ಹೆಜ್ಜೆಯಿಡಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದರು. ಸಿಎಂ ಯಡಿಯೂರಪ್ಪ: ಹೊಸ ಐಟಿ ಕಾಯ್ದೆಯು ಮುಂದಿನ 5 ವರ್ಷಗಳಲ್ಲಿ ರಾಜ್ಯದಲ್ಲಿ 50 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಸಿಎಂ […]

Bengaluru Tech Summit 2020: ಟೆಕ್ ಸಮ್ಮೇಳನದಲ್ಲಿ ಗಣ್ಯರ ಮಾತು

Updated on: Nov 21, 2020 | 8:17 PM

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ನಡೆದ ಬೆಂಗಳೂರು ಟೆಕ್​ ಸಮಿಟ್​ 2020 ಇಂದು ಯಶಸ್ವಿಯಾಗಿ ಸಂಪನ್ನಗೊಂಡಿತು. ಮೂರು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ಮಾತನಾಡಿದ ಗಣ್ಯರ ಭಾಷಣದ ಹೈಲೈಟ್ಸ್​ ಇಲ್ಲಿದೆ ನೋಡಿ.

ಪ್ರಧಾನಿ ಮೋದಿ: ಭವಿಷ್ಯದಲ್ಲಿ ಮತ್ತಷ್ಟು ಸುಧಾರಿತ ತಂತ್ರಜ್ಞಾನದ ಮೂಲಕ ವರ್ಕ್ ಫ್ರಾಮ್ ಎನಿವೇರ್ ಜಾರಿಗೊಳಿಸುವ ಕುರಿತು ಸರ್ಕಾರ ಹೆಜ್ಜೆಯಿಡಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದರು.

ಸಿಎಂ ಯಡಿಯೂರಪ್ಪ: ಹೊಸ ಐಟಿ ಕಾಯ್ದೆಯು ಮುಂದಿನ 5 ವರ್ಷಗಳಲ್ಲಿ ರಾಜ್ಯದಲ್ಲಿ 50 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಸಿಎಂ ಯಡಿಯೂರಪ್ಪ ಶೃಂಗಸಭೆಯ ಮೊದಲನೇ ದಿನದಂದು ವಿದ್ಯುಕ್ತ ಚಾಲನೆ ನೀಡಿ ಘೋಷಣೆ ಮಾಡಿದ್ದರು. ಕಾರ್ಮಿಕ ಕಾಯ್ದೆ ಮತ್ತು ಭೂಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ತ್ವರಿತವಾಗಿ ನವೋದ್ಯಮ ಪ್ರಾರಂಭಿಸಲು ಸರ್ಕಾರ ನೆರವಾಗಿದೆ. ಪ್ರಧಾನಿ ಮೋದಿಯ ಎಲ್ಲ ಕನಸುಗಳಿಗೆ ಕರ್ನಾಟಕ ಬೆನ್ನೆಲುಬಾಗಿ ನಿಲ್ಲಲಿದೆ ಎಂದೂ ಸಿಎಂ ತಿಳಿಸಿದ್ದರು.

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್: ಸದ್ಯದಲ್ಲೇ ದತ್ತಾಂಶ ಸುರಕ್ಷತೆಗೆ ಸಂಬಂಧಿಸಿದ ಕಾನೂನು ಜಾರಿಗೆ ತರಲಾಗುವುದು ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದರು. ಫೇಸ್​ಬುಕ್​, ಗೂಗಲ್, ಆ್ಯಪಲ್​ನಂಥ ದಿಗ್ಗಜ ಕಂಪನಿಗಳು ಭಾರತದ ಮೇಲೆ ಇರಿಸಿರುವ ವಿಶ್ವಾಸ ವೃದ್ಧಿಸುತ್ತಿದೆ. ಆದರೆ, ಈ ಕಂಪನಿಗಳನ್ನು ಮೀರಿಸುವತ್ತ ಭಾರತದ ಟೆಕ್ ಕಂಪನಿಗಳು ಗಮನಹರಿಸಬೇಕು ಎಂದು ಸಚಿವರು ಕರೆಕೊಟ್ಟರು.

ಡಿಸಿಎಂ ಹಾಗೂ ಐಟಿ ಸಚಿವ ಡಾ. ಅಶ್ವತ್ಥ್​ ನಾರಾಯಣ: 3 ದಿನಗಳ ಶೃಂಗಸಭೆಯ ಒಟ್ಟಾರೆ ಜವಾಬ್ದಾರಿಯನ್ನು ಡಾ. ಅಶ್ವತ್ಥ್​ ನಾರಾಯಣ ವಹಿಸಿದ್ದರು. ಕೊವಿಡ್ ಕಾಲದಲ್ಲಿ ವರ್ಚುವಲ್ ಸಮಿಟ್ ನಡೆಸಿ, ವಿಶ್ವದಾದ್ಯಂತ ತಲುಪಿಸಿದ ಕಾರಣ ಅವರು ಸಂತಸ ವ್ಯಕ್ತಪಡಿಸಿದರು.