ದೆಹಲಿ ವಾಯು ಮಾಲಿನ್ಯದಿಂದ ಹದಗೆಟ್ಟಿತು ಸೋನಿಯಾ ಆರೋಗ್ಯ

ದೆಹಲಿ ವಾಯು ಮಾಲಿನ್ಯದಿಂದ ಹದಗೆಟ್ಟಿತು ಸೋನಿಯಾ ಆರೋಗ್ಯ

ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರುತ್ತ್ತಿದ್ದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ ಮೇಲೆ ಅದರ ದುಷ್ಪರಿಣಾಮ ಜಾಸ್ತಿಯಾಗಿರುವಂತಿದೆ . ಮೊದಲೇ ಅಸ್ತಮಾ, ಎದೆಯ ಸೋಂಕಿನಿಂದ ಬಳಲುತ್ತಿರುವ ಸೋನಿಯಾಗೆ ವೈದ್ಯರು ದೆಹಲಿ ತೊರೆಯಲು ಸೂಚಿಸಿದ್ದಾರೆ. ಸಲಹೆಯನ್ನು ಗಂಭೀರವಾಗಿಯೇ ಪರಿಗಣಿಸಿರುವ 73 ವರ್ಷದ ಕಾಂಗ್ರೆಸ್ ಅಧ್ಯಕ್ಷೆ ದಕ್ಷಿಣ ಗೋವಾದ ಖಾಸಗಿ ರೆಸಾರ್ಟ್ ಒಂದಕ್ಕೆ ಶಿಫ್ಟ್ ಆಗಿದ್ದಾರೆ. ರಾಹುಲ್ ಗಾಂಧಿ ಸಹ ತಾಯಿಯೊಂದಿಗೆ ಗೋವಾಗೆ ಬಂದಿಳಿದಿದ್ದಾರೆ. ದೇಶದ ಅತ್ಯಂತ ಪ್ರಭಾವಿ ರಾಜಕಾರಣಿ, ಸೋನಿಯಾ ಅವರಂಥವರಿಗೆ ದೆಹಲಿಯಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲವಾದರೆ ಜನಸಾಮಾನ್ಯರ ಗತಿಯೇನು ಎಂಬ […]

Arun Belly

|

Nov 21, 2020 | 10:06 PM

ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರುತ್ತ್ತಿದ್ದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ ಮೇಲೆ ಅದರ ದುಷ್ಪರಿಣಾಮ ಜಾಸ್ತಿಯಾಗಿರುವಂತಿದೆ . ಮೊದಲೇ ಅಸ್ತಮಾ, ಎದೆಯ ಸೋಂಕಿನಿಂದ ಬಳಲುತ್ತಿರುವ ಸೋನಿಯಾಗೆ ವೈದ್ಯರು ದೆಹಲಿ ತೊರೆಯಲು ಸೂಚಿಸಿದ್ದಾರೆ. ಸಲಹೆಯನ್ನು ಗಂಭೀರವಾಗಿಯೇ ಪರಿಗಣಿಸಿರುವ 73 ವರ್ಷದ ಕಾಂಗ್ರೆಸ್ ಅಧ್ಯಕ್ಷೆ ದಕ್ಷಿಣ ಗೋವಾದ ಖಾಸಗಿ ರೆಸಾರ್ಟ್ ಒಂದಕ್ಕೆ ಶಿಫ್ಟ್ ಆಗಿದ್ದಾರೆ. ರಾಹುಲ್ ಗಾಂಧಿ ಸಹ ತಾಯಿಯೊಂದಿಗೆ ಗೋವಾಗೆ ಬಂದಿಳಿದಿದ್ದಾರೆ.

ದೇಶದ ಅತ್ಯಂತ ಪ್ರಭಾವಿ ರಾಜಕಾರಣಿ, ಸೋನಿಯಾ ಅವರಂಥವರಿಗೆ ದೆಹಲಿಯಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲವಾದರೆ ಜನಸಾಮಾನ್ಯರ ಗತಿಯೇನು ಎಂಬ ಪ್ರಶ್ನೆ ಉದ್ಭವಿಸಿದೆ. ಅಸ್ತಮಾ, ಉಸಿರಾಟದ ತೊಂದರೆ ಮತ್ತು ಇತರ ಅನಾರೋಗ್ಯಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರು ಅನುಭವಿಸುತ್ತಿರಬಹುದಾದ ಪಾಡನ್ನು ದೆಹಲಿ ಮತ್ತು ಕೇಂದ್ರ ಸರ್ಕಾರಗಳು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿವೆಯೇ?

ಮುಂದಿದೆ ಎಲೆಕ್ಷನ್ ಜಾತ್ರೆ!

2021ರಲ್ಲಿ ಒಟ್ಟು 5 ರಾಜ್ಯಗಳಿಗೆ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಯಿದೆ. ಬಿಜೆಪಿ ಈಗಿಂದಲೇ ಪ್ರಚಾರ ತಂತ್ರ ಹೆಣೆಯುತ್ತಿದೆ. ಆದರೆ, ಸೋನಿಯಾ ಅನಾರೋಗ್ಯ, ಕಾಂಗ್ರೆಸ್ ಸ್ಥಿತಿಯನ್ನು ಇನ್ನಷ್ಟು ಕರುಣಾಜನಕವಾಗಿಸಲಿರುವುದು ಸುಳ್ಳಲ್ಲ.

ದೆಹಲಿಯ ವಾಯುಮಾಲಿನ್ಯವನ್ನು ಗಮನಿಸಿದ ಹೈಕೋರ್ಟ್ ವಾಹನ ದಟ್ಟಣೆ ಕಡಿಮೆ ಮಾಡಲು ಮತ್ತು ಪಾರ್ಕಿಂಗ್ ನೀತಿ ಜಾರಿಗೆ ತರಲು ಸೂಚಿಸಿತ್ತು. ಸಾರ್ವಜನಿಕ ಸಾರಿಗೆಗಳ ಸಂಖ್ಯೆಯನ್ನು ಹೆಚ್ಚಿಸಲು ಸಹ ಸೂಚಿಸಿತ್ತು. ಹಿಂದೆ, ದೆಹಲಿ ಸರ್ಕಾರ ಸಮ-ಬೆಸ ಸಂಖ್ಯೆಯಲ್ಲಿ ವಾಹನಗಳನ್ನು ರೋಡಿಗಿಳಿಸುವ  ನಿಯಮವನ್ನೂ ಜಾರಿಗೆ ತಂದಿತ್ತು. ಆದರೆ ವಾಹನಗಳ ಸಂಖ್ಯೆ ಪ್ರತಿದಿನ ಹೆಚ್ಚುತ್ತಿರುವ ದೆಹಲಿಯಲ್ಲಿ ವಾಯು ಮಾಲಿನ್ಯ ಕಡಿಮೆಯಾಗುವ ಲಕ್ಷಣಗಳು ಸದ್ಯಕ್ಕಂತೂ ಇಲ್ಲ.

ದೆಹಲಿ ಆಸುಪಾಸಿನ ಪಂಜಾಬ್, ಹರಿಯಾಣದ ರೈತರು ಭತ್ತದ ತ್ಯಾಜ್ಯವನ್ನು ಸುಡುತ್ತಿರುವುದು ಸಹ ದೆಹಲಿಯಲ್ಲಿ ಅಪಾರ ಪ್ರಮಾಣದ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಅಲ್ಲದೆ, ದೆಹಲಿಯ ಸುತ್ತಲಿನ ಕಾರ್ಖಾನೆ ಮತ್ತು ವಿದ್ಯುತ್ ಸ್ಥಾವರಗಳು ಉಗುಳುವ ಹೊಗೆಯೂ ಮಾಲಿನ್ಯವನ್ನು ಹೆಚ್ಚಿಸುತ್ತಿವೆ.  ಕೃಷಿ ತ್ಯಾಜ್ಯಕ್ಕೆ ಬೆಂಕಿಯಿಟ್ಟ 121  ರೈತರಿಂದ ರೂ. 3 ಲಕ್ಷ ದಂಡ ಹಾಗೂ 59 ರೈತರ ವಿರುದ್ಧ ಎಫ್ಐಆರ್​ಗಳನ್ನು ಪೋಲೀಸರು ದಾಖಲಿಸಿದ್ದರೂ  ಕೃಷಿ ತ್ಯಾಜ್ಯ ಸುಡುವ ಪದ್ಧತಿಯನ್ನು ರೈತರು ಕೈಬಿಡುತ್ತಿಲ್ಲ.

Follow us on

Most Read Stories

Click on your DTH Provider to Add TV9 Kannada