ಚಿಕ್ಕಮಗಳೂರು: ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಹೆಗ್ಡೆ ಪತ್ನಿಯ ವಿರುದ್ಧದ ಚೆಕ್ ಬೌನ್ಸ್ ಪ್ರಕರಣದಲ್ಲಿ ಮಾಳವಿಕಾ ಸಿದ್ದಾರ್ಥ್ ಹೆಗ್ಡೆಗೆ ಬಿಗ್ ರಿಲೀಫ್ ಸಿಕ್ಕಿದೆ. ಮಾಳವಿಕಾ ಕೋರ್ಟ್ಗೆ ಹಾಜರಾಗಿ ಬೇಲ್ ಪಡೆದುಕೊಂಡಿದ್ದಾರೆ.
ಮಾಳವಿಕಾ ಸೇರಿದಂತೆ ಐವರಿಗೆ ಜಾಮೀನು ಮಂಜೂರು
ಮಾಳವಿಕಾ ಸೇರಿದಂತೆ ಐವರಿಗೆ ಮೂಡಿಗೆರೆ JMFC ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಕಾಫಿ ಬೆಳೆಗಾರರ ಕೋಟ್ಯಾಂತರ ರೂಪಾಯಿ ಸಾಲ ಉಳಿಸಿಕೊಂಡಿದ್ದ ಸಿದ್ದಾರ್ಥ್ರ ಎಬಿಸಿ ಸಂಸ್ಥೆಯ ವಿರುದ್ಧ ಬೆಳೆಗಾರರು ಕೋರ್ಟ್ ಮೆಟ್ಟಿಲೇರಿದ್ದರು. ಮಾಳವಿಕಾ ಸೇರಿದಂತೆ 8 ಮಂದಿಗೆ ಕೋರ್ಟ್ ನೋಟಿಸ್ ನೀಡಿತ್ತು. ಆದರೆ, ಕೋರ್ಟ್ಗೆ ಹಾಜರಾಗದ ಹಿನ್ನೆಲೆಯಲ್ಲಿ.. ಜಡ್ಜ್ ಬಂಧನ ವಾರಂಟ್ ಹೊರಡಿಸಿದ್ದರು.
Published On - 12:38 pm, Sat, 7 November 20