AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಧಾ ಗೋಲ್ಡ್​ ಪ್ಯಾಲೆಸ್: ಪತಿರಾಯ ಸಿನಿ ನಿರ್ಮಾಪಕ! ACB ತನಿಖೆಯಿಂದ ಹೊರಬಂದ ಸತ್ಯವೇನು?

ಬೆಂಗಳೂರು: KAS ಅಧಿಕಾರಿ ಡಾ. ಸುಧಾ ನಿವಾಸದ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಬಗೆದಷ್ಟೂ ದಾಖಲೆಗಳು ಸಿಗುತ್ತಿವೆ. ಡಾ. ಸುಧಾ ಆಸ್ತಿಗಳ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ಅಧಿಕಾರಿಯ ಸ್ನೇಹಿತರ ಮನೆಗಳ ಮೇಲೂ ದಾಳಿ ಮಾಡಿರುವುದಲ್ಲದೆ ಸುಧಾ ಅವರ ಪತಿರಾಯ ಸ್ಟ್ರೊನಿ ಫಾಯಿಸ್​ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಹೆಂಡತಿಯ ಅಕ್ರಮ ಸಂಪಾದನೆಯೇ ಪತಿರಾಯನ ಚಿತ್ರ ನಿರ್ಮಾಣಕ್ಕೆ ‘ಬಂಡವಾಳ’! ವಿಚಾರಣೆಯ ವೇಳೆ ಸುಧಾ ಅವರ ಪತಿಯ ಬೃಹತ್​ ಅಕ್ರಮಗಳು ಒಂದೊಂದಾಗಿ ಹೊರಬರುತ್ತಿವೆ. ಸ್ಟ್ರೊನಿ ಫಾಯಿಸ್ ಸ್ಯಾಂಡಲ್ವುಡ್ […]

ಸುಧಾ ಗೋಲ್ಡ್​ ಪ್ಯಾಲೆಸ್: ಪತಿರಾಯ ಸಿನಿ ನಿರ್ಮಾಪಕ! ACB ತನಿಖೆಯಿಂದ ಹೊರಬಂದ ಸತ್ಯವೇನು?
ಪೃಥ್ವಿಶಂಕರ
| Updated By: ಸಾಧು ಶ್ರೀನಾಥ್​|

Updated on:Nov 07, 2020 | 11:53 AM

Share

ಬೆಂಗಳೂರು: KAS ಅಧಿಕಾರಿ ಡಾ. ಸುಧಾ ನಿವಾಸದ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಬಗೆದಷ್ಟೂ ದಾಖಲೆಗಳು ಸಿಗುತ್ತಿವೆ. ಡಾ. ಸುಧಾ ಆಸ್ತಿಗಳ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ಅಧಿಕಾರಿಯ ಸ್ನೇಹಿತರ ಮನೆಗಳ ಮೇಲೂ ದಾಳಿ ಮಾಡಿರುವುದಲ್ಲದೆ ಸುಧಾ ಅವರ ಪತಿರಾಯ ಸ್ಟ್ರೊನಿ ಫಾಯಿಸ್​ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಹೆಂಡತಿಯ ಅಕ್ರಮ ಸಂಪಾದನೆಯೇ ಪತಿರಾಯನ ಚಿತ್ರ ನಿರ್ಮಾಣಕ್ಕೆ ‘ಬಂಡವಾಳ’! ವಿಚಾರಣೆಯ ವೇಳೆ ಸುಧಾ ಅವರ ಪತಿಯ ಬೃಹತ್​ ಅಕ್ರಮಗಳು ಒಂದೊಂದಾಗಿ ಹೊರಬರುತ್ತಿವೆ. ಸ್ಟ್ರೊನಿ ಫಾಯಿಸ್ ಸ್ಯಾಂಡಲ್ವುಡ್ ನಿರ್ಮಾಪಕನಾಗಿದ್ದು ಸುಧಾ ಕ್ರಿಯೇಷನ್ ಬ್ಯಾನರ್ ಅಡಿ ಚಿತ್ರ ನಿರ್ಮಾಣ ಮಾಡುತ್ತಿದ್ದ. ನಿರ್ಮಾಣದ ಜೊತೆಗೆ ರಿಯಲ್ ಎಸ್ಟೇಟ್ ಹಾಗೂ ಫೈನಾನ್ಸ್ ವ್ಯವಹಾರ ನಡೆಸುತ್ತಿದ ಸುಧಾ ಪತಿರಾಯ, ಹೆಂಡತಿ ಅಕ್ರಮವಾಗಿ ಸಂಪಾದಿಸಿದ್ದ ಆಸ್ತಿಯನ್ನೇ ಬಂಡವಾಳ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಹೆಂಡತಿಯ ನೌಕರಿ ಸಹಾಯಕ್ಕೆ ಬಂದಿತ್ತು.. ಬೆಂಗಳೂರು ಅಂತರಾಷ್ಟೀಯ ವಿಮಾನ ನಿಲ್ದಾಣ ತಲೆಯೆತ್ತುತ್ತಿದ್ದಂತೆ ಅಲ್ಲಿನ ಭೂಮಿಯ ಬೆಲೆ ವಿಮಾನದಂತೆ ಆಗಸಕ್ಕೆ ಚಿಮ್ಮಿತು. ಸುತ್ತಮುತ್ತಲಿನ ಜಾಗಕ್ಕೆ ಬಂಗಾರದ ಬೆಲೆ ಬಂದಿತು. ಇನ್ನು ಭೂಸ್ವಾಧೀನಾಧಿಕಾರಿಯಾಗಿ ಅಲ್ಲಿ ಅಧಿಕಾರ ಪ್ರತಿಷ್ಠಾಪಿಸಿಬಿಟ್ಟರೆ ಅದು ಸಂಪದ್ಭರಿತ ಜಾಗವೇ ಆಗಿಬಿಡುತ್ತದೆ. ಅದನ್ನೇ ಬಂಡವಾಳ ಮಾಡಿಕೊಂಡು ಹೆಂಡತಿ ಅಕ್ರಮ ಸಂಪತ್ತು ಗುಡ್ಡೆ ಹಾಕತೊಡಗಿದ್ದರು. ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದ ಸ್ಟ್ರೊನಿ ಫಾಯಿಸ್ ರಿಯಲ್ ಎಸ್ಟೇಟ್ ದಂಧೆಗೆ ಇಳಿದಿದ್ದ. ರಿಯಲ್ ಎಸ್ಟೇಟ್ ದಂಧೆಯಲ್ಲಿ ಕೋಟಿ ಕೋಟಿ ಬಾಚುತ್ತಿದ್ದ ಸ್ಟ್ರೊನಿ ಫಾಯಿಸ್​ಗೆ ಹೆಂಡತಿಯ ನೌಕರಿ ಸಹಾಯಕ್ಕೆ ಬಂದಿತ್ತು.

ಯಲಹಂಕ ಭೂಸ್ವಾಧೀನಾಧಿಕಾರಿಯಾಗಿದ್ದ ಡಾ. ಸುಧಾ ಮನೆ ACB ರೇಡ್; ಮನೆಯಲ್ಲಿ ‘ಚಿನ್ನದ ಗಣಿ’

Published On - 11:33 am, Sat, 7 November 20