AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೋಗೀಶ್ ಹತ್ಯೆ: ಪ್ರಕರಣದಲ್ಲಿ ಇನ್ಸ್​ಪೆಕ್ಟರ್​ ಟಿಂಗರಿಕರ್ ಪಾತ್ರವೇನು? ರೋಚಕ ಕತೆ ಇಲ್ಲಿದೆ

ಜಿ.ಪಂ. ಸದಸ್ಯ ಯೋಗೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳಿಗೆ ಮಹತ್ವದ ಸುಳಿವು ಪ್ರಾಪ್ತಿಯಾಗುವಲ್ಲಿ ರಾಜ್ಯ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಯೇ ಪ್ರಮುಖ ಅಸ್ತ್ರವಾಗಿದೆ! ಚಾರ್ಜ್​ಶೀಟ್​ನಲ್ಲಿ 20 ಕ್ಕೂ ಹೆಚ್ಚು ತಪ್ಪುಗಳು.. ಆರೋಪ ಪಟ್ಟಿಯಿಂದಲೇ ಪೊಲೀಸರು ಮಾಡಿದ ಎಡವಟ್ಟುಗಳ ಸರಮಾಲೆಯೇ ಹೊರ ಬಂದಿದೆ. ಚಾರ್ಜ್ ಶೀಟ್ ಸಲ್ಲಿಸುವಾಗಲೇ ಪೊಲೀಸರು ತಪ್ಪೆಸಗಿರುವುದು ಸ್ಪಷ್ಟವಾಗಿದೆ. ಪೊಲೀಸರು ಆರೋಪ ಪಟ್ಟಿಯಲ್ಲಿ ಎಸಗಿರುವ 20 ಕ್ಕೂ ಹೆಚ್ಚು ತಪ್ಪುಗಳೇ ಸಿಬಿಐ ಅಧಿಕಾರಗಳಿಗೆ ಬಲ ನೀಡಿರುವುದು ಬಹಿರಂಗವಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳ […]

ಯೋಗೀಶ್ ಹತ್ಯೆ: ಪ್ರಕರಣದಲ್ಲಿ ಇನ್ಸ್​ಪೆಕ್ಟರ್​ ಟಿಂಗರಿಕರ್ ಪಾತ್ರವೇನು? ರೋಚಕ ಕತೆ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
ಪೃಥ್ವಿಶಂಕರ
| Updated By: Skanda|

Updated on:Nov 30, 2020 | 5:33 PM

Share

ಜಿ.ಪಂ. ಸದಸ್ಯ ಯೋಗೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳಿಗೆ ಮಹತ್ವದ ಸುಳಿವು ಪ್ರಾಪ್ತಿಯಾಗುವಲ್ಲಿ ರಾಜ್ಯ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಯೇ ಪ್ರಮುಖ ಅಸ್ತ್ರವಾಗಿದೆ!

ಚಾರ್ಜ್​ಶೀಟ್​ನಲ್ಲಿ 20 ಕ್ಕೂ ಹೆಚ್ಚು ತಪ್ಪುಗಳು.. ಆರೋಪ ಪಟ್ಟಿಯಿಂದಲೇ ಪೊಲೀಸರು ಮಾಡಿದ ಎಡವಟ್ಟುಗಳ ಸರಮಾಲೆಯೇ ಹೊರ ಬಂದಿದೆ. ಚಾರ್ಜ್ ಶೀಟ್ ಸಲ್ಲಿಸುವಾಗಲೇ ಪೊಲೀಸರು ತಪ್ಪೆಸಗಿರುವುದು ಸ್ಪಷ್ಟವಾಗಿದೆ. ಪೊಲೀಸರು ಆರೋಪ ಪಟ್ಟಿಯಲ್ಲಿ ಎಸಗಿರುವ 20 ಕ್ಕೂ ಹೆಚ್ಚು ತಪ್ಪುಗಳೇ ಸಿಬಿಐ ಅಧಿಕಾರಗಳಿಗೆ ಬಲ ನೀಡಿರುವುದು ಬಹಿರಂಗವಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳ ಒತ್ತಡ.. ಉಪನಗರ ಠಾಣೆಯ ಪೊಲೀಸರ ಚಾರ್ಜ್ ಶೀಟ್​ನಿಂದಲೇ ಕೊಲೆಗೆ ಸಂಚು ನಡೆಸಿದ್ದು ಸ್ಪಷ್ಟವಾಗಿದೆ. ಉಪನಗರ ಠಾಣೆಯ ಇನ್ಸ್ ಪೆಕ್ಟರ್ ಆಗಿದ್ದ ಹಾಗೂ ಹತ್ಯೆಯ ತನಿಖಾಧಿಕಾರಿಯೂ ಆಗಿದ್ದ ಟಿಂಗರಿಕರ್ ಮೇಲೆ ಹಿರಿಯ ಪೊಲೀಸ್ ಅಧಿಕಾರಿಗಳು ಒತ್ತಡ ಹೇರಿರುವುದು ಕಂಡು ಬಂದಿದೆ. ಚೆನ್ನಕೇಶವ ಟಿಂಗರಿಕರ್ ಅವರು ತಮ್ಮ ಉನ್ನತಾಧಿಕಾರಿಗಳ ಒತ್ತಡದಿಂದಾಗಿ ಹೆದರಿ ಬೆವತಿದ್ದರು. ಟಿಂಗರಿಕರ್ ಮೇಲೆ ಎಸಿಪಿ ವಾಸುದೇವ, ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ, ಡಿಸಿಪಿ ಜಿನೇಂದ್ರ ಖಣಗಾವಿ, ಮಲ್ಲಿಕಾರ್ಜುನ ಬಾಲದಂಡಿ ಒತ್ತಡ ಹೇರಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಚಾರ್ಜ್ ಶೀಟ್​ನಲ್ಲಿ ಘಟನಾ ಸ್ಥಳಕ್ಕೆ ಹೋದ ವೇಳೆ ನಮೂದು.. ಘಟನೆ ನಡೆದ ಒಂದೂವರೆ ಗಂಟೆ ಸುದೀರ್ಘಾವಧಿಯ ಬಳಿಕ ಉಪನಗರ ಠಾಣೆಯ ಇನ್ಸ್ ಪೆಕ್ಟರ್ ಟಿಂಗರಿಕರ್ ಸ್ಥಳಕ್ಕೆ ತೆರಳಿದ್ದಾರೆ. ಆದರೆ ಹತ್ಯೆಯಾದ ಸ್ಥಳ ಠಾಣೆಯಿಂದ ಕೇವಲ ಮೂರು ನಿಮಿಷದ ಹಾದಿಯಲ್ಲಿದೆ ಅಷ್ಟೇ. ಪೊಲೀಸರು ಹೋಗೋ ಹೊತ್ತಿಗೆ ನೂರಾರು ಜನರು ಅಲ್ಲಿ ಓಡಾಡಿದ್ದರು. ಸಾಕ್ಷ್ಯ ನಾಶಪಡಿಸೋ ಉದ್ದೇಶದಿಂದಲೇ ಹೀಗೆ ಮಾಡಿದ್ದರಾ ಅನ್ನೋ ಅನುಮಾನವು, ತನಿಖೆ ಕೈಗೆತ್ತಿಕೊಂಡ ಸಿಬಿಐ ಮೂಗಿಗೆ ಅಂದು ಬಲವಾಗಿ ಬಡಿದಿತ್ತು.

ಆಗಿನ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ, ಜಿ.ಪಂ. ಸದಸ್ಯನ ಕೊಲೆಯಾಗಿ ಗಂಟೆ ಕಳೆದರೂ ಮಾಹಿತಿ ಇಲ್ಲ ಅಂತಾನೂ ಹೇಳಿದ್ದರು. ಕಣ್ಣಿಗೆ ಖಾರದಪುಡಿ ಎರಚಿ ಯೋಗೀಶ್ ಹತ್ಯೆ ಮಾಡಲಾಗಿತ್ತು. ಹೀಗಾಗಿ ಘಟನಾ ಸ್ಥಳದಲ್ಲಿ ಬಿದ್ದಿದ್ದ ಖಾರದಪುಡಿಯನ್ನು ಪೊಲೀಸರು ಎಫ್.ಎಸ್.ಎಲ್. ಗೆ ಕಳಿಸಿರಲಿಲ್ಲ.

ಕೊಲೆಗೆ ಬಳಸಿದ್ದ ಮಾರಕಾಸ್ತ್ರಗಳ ಬದಲಾವಣೆ.. ಇನ್ನು, ಕೊಲೆಗೆ ಬಳಸಿದ್ದ ಮಾರಕಾಸ್ತ್ರಗಳಿಗೆ ಸಂಬಂಧಪಟ್ಟಂತೆ ಪೊಲೀಸರು ಕೊಲೆಗೆ ಬಳಸಿದ್ದ ಅಸ್ತ್ರ ಬಿಟ್ಟು ಬೇರೆ ವೆಪೆನ್ಸ್ ಇಟ್ಟಿದ್ದರು ಎಂಬುದು ತನಿಖೆಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಹೊಸ ಮಾರಕಾಸ್ತ್ರ ತೋರಿಸಿ ಕೊಲೆಗೆ ಬಳಸಿದ್ದ ಮಾರಕಾಸ್ತ್ರಗಳನ್ನೇ ಸೀಜ್ ಮಾಡಿರೋದಾಗಿ ನಮೂದು ಮಾಡಿದ್ದರು. ಆದರೆ ದೇಹದ ಮೇಲಿನ ಮಾರ್ಕ್ ಗಳೇ ಬೇರೆ ಕಥೆ ಹೇಳುತ್ತಿದ್ದವು. ಹೀಗಾಗಿ ಸಿಬಿಐ ಅಧಿಕಾರಿಗಳು ಇದರ ಹಿಂದೆ ಬಿದ್ದರು.

ನಕಲಿ ಆರೋಪಿಗಳ ವಿಚಾರಣೆ.. ಪೊಲೀಸರು ಖೊಟ್ಟಿ ಆರೋಪಿಗಳನ್ನೇ ನಿಜವಾದ ಕೊಲೆಗಾರರು ಅಂದಿದ್ದರು. ಅಲ್ಲದೆ ಆರು ಜನ ಆರೋಪಿಗಳು ಶರಣಾಗಿದ್ದರೂ ಸಹ ಅದನ್ನು ಬಂಧನ ಅಂತಾ ಪೊಲೀಸರು ನಮೂದಿಸಿದ್ದರು. ಹಾಗಾಗಿ ಅನುಮಾನಗೊಂಡ ಸಿಬಿಐ ಅಧಿಕಾರಿಗಳು ಆರೋಪಿಗಳ ಕಾಲ್ ಡಿಟೇಲ್ಸ್ ಪಡೆದಿದ್ದರು.

ಆಯುಕ್ತರ ಫೋನ್ ಕಾಲ್​.. ತನಿಖಾಧಿಕಾರಿ ಟಿಂಗರಿಕರ್​ಗೆ ಹಿಂದಿನ ದಿನ ಆರು ಗಂಟೆಗೆ ಆಯುಕ್ತರ ಫೋನ್ ಬಂದಿತ್ತು. ಬಳಿಕ ಬೆಳಿಗ್ಗೆ ಅದೇ ನಂಬರ್ ನಿಂದ ಮತ್ತೊಂದು ಕಾಲ್ ಬಂದಿತ್ತು. ಹೀಗಾಗಿ ಬೆಳಿಗ್ಗೆ ಬಂದಿದ್ದ ಕರೆಯ ಟೈಮಿಂಗ್ ಸಿಬಿಐ ಅಧಿಕಾರಿಗಳಿಗೆ ಅನುಮಾನ ಹುಟ್ಟಿಸಿತ್ತು. ಅಲ್ಲದೆ ಕೊಲೆಯ ಬಳಿಕ ಈ ಕರೆ ಬಂದಿದ್ದನ್ನು ಸಿಬಿಐ ತೀಕ್ಷಣವಾಗಿ ಗಮನಿಸಿತ್ತು.

ಕೊಲೆಯಾದ ಸ್ಥಳದ ಪಕ್ಕದಲ್ಲಿನ ಸಿಸಿಟಿವಿ ಫೂಟೇಜ್.. ಸಿಸಿಟಿವಿ ಫೂಟೇಜ್​ನಲ್ಲಿ ಹತ್ಯೆ ಘಟನೆಯ ಮೊದಲು ಮತ್ತು ನಂತರದ ವಿಡಿಯೋ ಇರಲೇಇಲ್ಲ. ಪೊಲೀಸರು ಕೇವಲ ಮೂರು ನಿಮಿಷದ ವೀಡಿಯೋ ಬಿಡುಗಡೆ ಮಾಡಿದ್ದರು. ಅಲ್ಲಿಗೆ, ಘಟನೆಯ ಮೊದಲ ಹಾಗೂ ನಂತರ ವಿಡಿಯೋ ಬಗ್ಗೆ ಮಾಹಿತಿಯೇ ಲಭ್ಯ ಇಲ್ಲದಂತಾಗಿತ್ತು.

ಇಬ್ಬರನ್ನು ಫಿಟ್ ಮಾಡಲು ಸಿದ್ಧರಾಗಿದ್ದ ಪೊಲೀಸರು.. ಇಬ್ಬರೂ ಧಾರವಾಡದ ಕುಖ್ಯಾತ ರೌಡಿಗಳನ್ನು ಪೊಲೀಸರು ಅದಾಗಲೇ ವಿಚಾರಣೆಗೆ ಒಳಪಡಿಸಿದ್ದರು. ಜೊತೆಗೆ ಆರು ಜನ ನಕಲಿ ಅರೋಪಿಗಳ ಬಗ್ಗೆ ತನಿಖಾಧಿಕಾರಿ ಟಿಂಗರಿಕರ್ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಟಿಂಗರಿಕರ್ ಮೇಲೆ ಮೇಲಾಧಿಕಾರಿಗಳು ಒತ್ತಡ ಹೇರಿದ್ದರು.

ತನಿಖಾಧಿಕಾರಿ ಟಿಂಗರಿಕರ್ ಕಣ್ಣೀರು.. ಟಿಂಗರಿಕರ್ ಆಕ್ಷೇಪಣೆ ವ್ಯಕ್ತಪಡಿಸುತ್ತಾ ಇದ್ದಂತೆ ಇತರೆ ಸಿಬ್ಬಂದಿಗಳೇ ಕೇಸಿನ ದಾಖಲೆ ಸಿದ್ಧಪಡಿಸಿದ್ದರು. ಇದನ್ನು ಗಮನಿಸಿದ ಟಿಂಗರಿಕರ್ ಅವುಗಳಿಗೆ ಸಹಿ ಮಾಡದೇ, ಸೀದಾ ಮನೆಗೆ ಹೋಗಿ ಕೂತಿದ್ದರು. ಅಲ್ಲೂ ಟಿಂಗರಿಕರ್ ಮೇಲೆ ಒತ್ತಡ ತರಲಾಗಿತ್ತು. ಪೊಲೀಸ್​ ಸಿಬ್ಬಂದಿ ಟಿಂಗರಿಕರ್ ಮನೆಗೇ ಹೋಗಿ ಕೇಸಿನ ದಾಖಲೆಗೆ ಸಹಿ ಮಾಡಿಸಿಕೊಂಡು ಬಂದಿದ್ದರು. ಆ ಸಮಯದಲ್ಲಿ ಟಿಂಗರಿಕರ್ ಅಳುತ್ತಲೇ ಸಹಿ ಮಾಡಿದ್ದರಂತೆ. ಸಹಿಯ ಬಳಿಕ ಟಿಂಗರಿಕರ್​ಗೆ ಸುಮಾರು 16 ಲಕ್ಷ ರೂಪಾಯಿ ಸಂದಾಯವಾಗಿರೋ ಅನುಮಾನವನ್ನೂ ಸಿಬಿಐ ವ್ಯಕ್ತಪಡಿಸಿದೆ.

Published On - 1:04 pm, Sat, 7 November 20