ಮೈಸೂರು: ಕಡಿಮೆ ಬೆಲೆಗೆ ಗೋಡಂಬಿ ಕೊಡಿಸುವುದಾಗಿ ₹10 ಲಕ್ಷ ವಂಚನೆ ಮಾಡಿದ್ದ ತಮಿಳುನಾಡಿನ ಆರೋಪಿ ಪಳನಿಮಲೈಯನ್ನು ಮೈಸೂರಿನ ಉದಯಗಿರಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಪಳನಿಮಲೈ 4 ವರ್ಷಗಳ ಹಿಂದೆ ರೋಹನ್ ಖಾನ್ ಎಂಬುವವರಿಗೆ ಕಡಿಮೆ ಬೆಲೆಗೆ ಗೋಡಂಬಿ ಕೊಡಿಸುವುದಾಗಿ ಹೇಳಿ RTGS ಮೂಲಕ 10 ಲಕ್ಷ ಪಡೆದಿದ್ದ. ಬಳಿಕ ಗೋಡಂಬಿ ಕೊಡದೆ ಹಣ ನೀಡದೆ ತಲೆ ತಲೆಮರೆಸಿಕೊಂಡಿದ್ದ. ರೋಹನ್ ಖಾನ್ ಆಮದು, ರಫ್ತು ವ್ಯವಹಾರ ಮಾಡುತ್ತಿರುವ ವ್ಯಕ್ತಿ. ಲಾಭವಾಗುತ್ತೆ ಎಂದು ನಂಬಿ ಹಣ ಕಳೆದುಕೊಂಡಿದ್ದಾರೆ. ಈ ಸಂಬಂಧ ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಉದಯಗಿರಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.