ರಾಜ್ಯ ಬಿಜೆಪಿ ಐಟಿ ಸೆಲ್ ಗುರುತಿನ ಚೀಟಿ ನಕಲು: ಆರೋಪಿ ಅಬ್ದುಲ್ ಅರೆಸ್ಟ್

ಬೆಂಗಳೂರು: ಬಿಜೆಪಿ ಪಕ್ಷದ IT ಸೆಲ್ ವಿಭಾಗದ ಗುರುತಿನ ಚೀಟಿಯನ್ನ ನಕಲು ಮಾಡಿ ವಂಚಿಸಿದ್ದ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಬ್ದುಲ್ ಸಲಾಂ ಗೈಮಾ ಬಂಧಿತ ಆರೋಪಿ. ನಕಲಿ ಸಹಿ ಬಳಸಿ ಬಿಜೆಪಿ ಐಟಿ ಸೆಲ್ ಐಡಿ ಕಾರ್ಡ್ ಮಾಡಿಕೊಂಡಿದ್ದ ಆರೋಪಿ, ಅದನ್ನು ಬಳಸಿ ಸಾಕಷ್ಟು ಮಂದಿಗೆ ಟೋಪಿ ಹಾಕಿದ್ದ ಎಂದು ತಿಳಿದುಬಂದಿದೆ. ರಾಜಕೀಯ ಮುಖಂಡರ ಮೂಲಕ ಸಂತ್ರಸ್ಥರ ಕೆಲಸ ಮಾಡಿಸಿಕೊಡುವುದಗಿ ನಂಬಿಸಿ ಅವರನ್ನ ಅಬ್ದುಲ್ ಸಲಾಂ ವಂಚಿಸುತಿದ್ದನು. ಈ ಹಿನ್ನಲೆಯಲ್ಲಿ ಸಂತ್ರಸ್ಥ ಲೋಕೇಶ್ ಅಂಬೇಕಲ್ಲು ಡಿಜೆ […]

ರಾಜ್ಯ ಬಿಜೆಪಿ ಐಟಿ ಸೆಲ್ ಗುರುತಿನ ಚೀಟಿ ನಕಲು: ಆರೋಪಿ ಅಬ್ದುಲ್ ಅರೆಸ್ಟ್
Edited By:

Updated on: Jul 18, 2020 | 12:42 PM

ಬೆಂಗಳೂರು: ಬಿಜೆಪಿ ಪಕ್ಷದ IT ಸೆಲ್ ವಿಭಾಗದ ಗುರುತಿನ ಚೀಟಿಯನ್ನ ನಕಲು ಮಾಡಿ ವಂಚಿಸಿದ್ದ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಬ್ದುಲ್ ಸಲಾಂ ಗೈಮಾ ಬಂಧಿತ ಆರೋಪಿ.

ನಕಲಿ ಸಹಿ ಬಳಸಿ ಬಿಜೆಪಿ ಐಟಿ ಸೆಲ್ ಐಡಿ ಕಾರ್ಡ್ ಮಾಡಿಕೊಂಡಿದ್ದ ಆರೋಪಿ, ಅದನ್ನು ಬಳಸಿ ಸಾಕಷ್ಟು ಮಂದಿಗೆ ಟೋಪಿ ಹಾಕಿದ್ದ ಎಂದು ತಿಳಿದುಬಂದಿದೆ. ರಾಜಕೀಯ ಮುಖಂಡರ ಮೂಲಕ ಸಂತ್ರಸ್ಥರ ಕೆಲಸ ಮಾಡಿಸಿಕೊಡುವುದಗಿ ನಂಬಿಸಿ ಅವರನ್ನ ಅಬ್ದುಲ್ ಸಲಾಂ ವಂಚಿಸುತಿದ್ದನು. ಈ ಹಿನ್ನಲೆಯಲ್ಲಿ ಸಂತ್ರಸ್ಥ ಲೋಕೇಶ್ ಅಂಬೇಕಲ್ಲು ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಲೋಕೇಶ್ ನೀಡಿದ ದೂರಿನನ್ವಯ ಅಬ್ದುಲ್ ಸಲಾಂ ಗೈಮಾನನ್ನ ಪೊಲೀಸರು ಬಂಧಿಸಿದ್ದಾರೆ.

Published On - 12:07 pm, Sat, 18 July 20