ಮೈಸೂರು: ಕೊರೊನಾ ಲಾಕ್ಡೌನ್ ನಡುವೆಯೂ ಅಕ್ರಮವಾಗಿ ಸಾಗಿಸ್ತಿದ್ದ 500 ಮೂಟೆ ಪಡಿತರ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೇರಳ ಮೂಲದ ಲಾರಿಯಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ರೈಸ್ ಮಿಲ್‌ನಿಂದ ನಂಜನಗೂಡು ಮಾರ್ಗವಾಗಿ ಕೇರಳಕ್ಕೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸಲಾಗುತ್ತಿತ್ತು.
ಈ ವೇಳೆ ಕಾರ್ಯಾಚರಣೆಗೆ ಇಳಿದಿದ್ದ ನಂಜನಗೂಡಿನ ಆಹಾರ ಇಲಾಖೆ ಮತ್ತು ಪೊಲೀಸರು ನಂಜನಗೂಡು ಪಟ್ಟಣದ ಹೆಜ್ಜಿಗೆ ಸೇತುವೆಯ ಬಳಿ ಸುಮಾರು 500 ಅಕ್ಕಿ ಮೂಟೆ ಸಾಗಿಸುತ್ತಿದ್ದ ಲಾರಿ ಹಾಗೂ ಕೇರಳ ಮೂಲದ ನಿಜಾಮುದ್ದೀನ್ನನ್ನು ವಶಕ್ಕೆ ಪಡೆದಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 9:19 am, Wed, 13 May 20