ಕೊರೊನಾ ವಿಚಾರ ಫೇಸ್​ಬುಕ್​ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ವ್ಯಕ್ತಿ ಪೊಲೀಸ್ ವಶಕ್ಕೆ

|

Updated on: Jun 15, 2020 | 11:24 AM

ಮೈಸೂರು: ಕೊರೊನಾ ಪಾಸಿಟಿವ್ ವಿಚಾರದಲ್ಲಿ ಫೇಸ್​ಬುಕ್​ನಲ್ಲಿ ಸುಳ್ಳು ಸುದ್ದಿ ಹಬ್ಬಿದ್ದ ಕಿಡಿಗೇಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂಜನಗೂಡಿನ ಎಕ್ಸ್‌ಟೆನ್ಶನ್ ಬಡಾವಣೆಯ ಪ್ರಜ್ವಲ್ ಕಶ್ಯಪ್ ಬಂಧಿತ ವ್ಯಕ್ತಿ. ಈತ ನಂಜನಗೂಡು ಸಮಾಚಾರ ಎಂಬ ಹೆಸರಲ್ಲಿ ತಪ್ಪು ಮಾಹಿತಿ ರವಾನಿಸುತ್ತಿದ್ದ. ನಂಜನಗೂಡಿನ ಐವರಿಗೆ ಕೊರೊನಾ ಸೋಂಕು ಇದೆ ಎಂದು ಸುಳ್ಳು ಮಾಹಿತಿ ನೀಡುವ ಪೋಸ್ಟ್​ನ್ನು ಫೇಸ್​ಬುಕ್​ನಲ್ಲಿ ಹಾಕಿಕೊಂಡಿದ್ದ. ಮಹಾರಾಷ್ಟ್ರದಿಂದ ಬಂದ 19 ಮಂದಿ ಪೈಕಿ ಐವರಿಗೆ ಕೊರೊನಾ ಸೋಂಕು ಧೃಢವಾಗಿತ್ತು. ಐವರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಯಾರು ನಂಜನಗೂಡಿಗೆ […]

ಕೊರೊನಾ ವಿಚಾರ ಫೇಸ್​ಬುಕ್​ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ವ್ಯಕ್ತಿ ಪೊಲೀಸ್ ವಶಕ್ಕೆ
Follow us on

ಮೈಸೂರು: ಕೊರೊನಾ ಪಾಸಿಟಿವ್ ವಿಚಾರದಲ್ಲಿ ಫೇಸ್​ಬುಕ್​ನಲ್ಲಿ ಸುಳ್ಳು ಸುದ್ದಿ ಹಬ್ಬಿದ್ದ ಕಿಡಿಗೇಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂಜನಗೂಡಿನ ಎಕ್ಸ್‌ಟೆನ್ಶನ್ ಬಡಾವಣೆಯ ಪ್ರಜ್ವಲ್ ಕಶ್ಯಪ್ ಬಂಧಿತ ವ್ಯಕ್ತಿ. ಈತ ನಂಜನಗೂಡು ಸಮಾಚಾರ ಎಂಬ ಹೆಸರಲ್ಲಿ ತಪ್ಪು ಮಾಹಿತಿ ರವಾನಿಸುತ್ತಿದ್ದ. ನಂಜನಗೂಡಿನ ಐವರಿಗೆ ಕೊರೊನಾ ಸೋಂಕು ಇದೆ ಎಂದು ಸುಳ್ಳು ಮಾಹಿತಿ ನೀಡುವ ಪೋಸ್ಟ್​ನ್ನು ಫೇಸ್​ಬುಕ್​ನಲ್ಲಿ ಹಾಕಿಕೊಂಡಿದ್ದ.

ಮಹಾರಾಷ್ಟ್ರದಿಂದ ಬಂದ 19 ಮಂದಿ ಪೈಕಿ ಐವರಿಗೆ ಕೊರೊನಾ ಸೋಂಕು ಧೃಢವಾಗಿತ್ತು. ಐವರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಯಾರು ನಂಜನಗೂಡಿಗೆ ಬಂದಿರಲಿಲ್ಲ. ಆದರೂ ನಂಜನಗೂಡಿನ ನಾಲ್ಕು ಬಡಾವಣೆಗಳ ಹೆಸರನ್ನ ಉಲ್ಲೇಖಿಸಿ ಪಾಸಿಟಿವ್ ಪತ್ತೆ ಎಂದು ಪೋಸ್ಟ್ ಮಾಡಿದ್ದಾನೆ. ತಪ್ಪು ಮಾಹಿತಿ ನೀಡಿ ನಾಲ್ಕು ಬಡಾವಣೆ ನಿವಾಸಿಗಳ ಆತಂಕಕ್ಕೆ ಕಾರಣವಾಗಿದ್ದ ಪ್ರಜ್ವಲ್ ಕಶ್ಯಪ್​ನ ವಿರುದ್ಧ ಅಲ್ಲಿನ ನಿವಾಸಿಗಳು ನಂಜನಗೂಡಿನ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಪೊಲೀಸರು ಪ್ರಜ್ವಲ್​ನನ್ನು ವಶಕ್ಕೆ ಪಡೆದಿದ್ದಾರೆ.

Published On - 10:41 am, Mon, 15 June 20