ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ MD ಕೋಟೆ ಗ್ರಾಮದಲ್ಲಿ ಪತಿಯಿಂದ ಪತ್ನಿಯ ಹತ್ಯೆ ನಡೆದಿದೆ. ಮೃತ ಪತ್ನಿಯನ್ನು 32 ವರ್ಷದ ಜಯಲಕ್ಷ್ಮಿ ಎಂದು ಗುರುತಿಸಲಾಗಿದೆ.
ಕುಡಿದ ಅಮಲಿನಲ್ಲಿ ಜಯಲಕ್ಷ್ಮಿಯನ್ನು ಆಕೆಯ ಗಂಡ ಬಸವರಾಜ್ ಕೋಲಿನಿಂದ ಹೊಡೆದು ಕೊಲೆಗೈದಿದ್ದಾನೆ. ಘಟನೆ ನಡೆದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಪಾಪಿ ಪತಿರಾಯನನ್ನು ಬಂಧಿಸಿದ್ದಾರೆ.
ಜೊತೆಗೆ, ಘಟನಾ ಸ್ಥಳಕ್ಕೆ SP ಜಿ.ರಾಧಿಕಾ ಭೇಟಿಕೊಟ್ಟು ಪರಿಶೀಲನೆ ನಡೆಸಿದರು. ಐಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.