ನೀಲಕಂಠನಿಗೆ ಎದುರಾಯ್ತು ಜಲಗಂಡಾಂತರ: ಶಿವನ ದೇಗುಲ ಜಲಾವೃತ
ಕಲಬುರಗಿ: ಇಷ್ಟು ದಿನ ಬಿಸಿಲಿನ ಬೇಗೆಯಲ್ಲಿ ಬಳಲಿದ್ದ ಜಿಲ್ಲೆಯ ಜನರಿಗೆ ಇದೀಗ ಮಳೆರಾಯನ ಕಾಟ ಶುರುವಾಗಿದೆ. ಜಿಲ್ಲೆಯಾದ್ಯಂತ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಯಿಂದ ರೌದ್ರಾವತಿ ನದಿ ತುಂಬಿ ಹರಿಯುತ್ತಿದೆ. ಇದರಿಂದ ನದಿ ದಡದಲ್ಲಿದ್ದ ನೀಲಕಂಠ ಕಾಳೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ಜಿಲ್ಲೆಯ ಕಾಳಗಿ ಪಟ್ಟಣದಲ್ಲಿರುವ ನೀಲಕಂಠ ಕಾಳೇಶ್ವರ ದೇವಸ್ಥಾನ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಇದಲ್ಲದೆ, ಕಾಳಗಿ-ಕೊಡದೂರು ನಡುವಿನ ರಸ್ತೆ ಸಂಪರ್ಕ ಸಹ ಕಡಿತವಾಗಿದೆ. ಜೊತೆಗೆ, ನಗರದ ಪೂಜಾ ಕಾಲೋನಿ ಮತ್ತು ಪ್ರಶಾಂತ್ ನಗರದ ನೂರಾರು ಮನೆಗಳಿಗೆ ಮಳೆ ನೀರು ನುಗ್ಗಿದ್ದು […]

ಕಲಬುರಗಿ: ಇಷ್ಟು ದಿನ ಬಿಸಿಲಿನ ಬೇಗೆಯಲ್ಲಿ ಬಳಲಿದ್ದ ಜಿಲ್ಲೆಯ ಜನರಿಗೆ ಇದೀಗ ಮಳೆರಾಯನ ಕಾಟ ಶುರುವಾಗಿದೆ. ಜಿಲ್ಲೆಯಾದ್ಯಂತ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಯಿಂದ ರೌದ್ರಾವತಿ ನದಿ ತುಂಬಿ ಹರಿಯುತ್ತಿದೆ. ಇದರಿಂದ ನದಿ ದಡದಲ್ಲಿದ್ದ ನೀಲಕಂಠ ಕಾಳೇಶ್ವರ ದೇವಸ್ಥಾನ ಜಲಾವೃತಗೊಂಡಿದೆ.
ಜಿಲ್ಲೆಯ ಕಾಳಗಿ ಪಟ್ಟಣದಲ್ಲಿರುವ ನೀಲಕಂಠ ಕಾಳೇಶ್ವರ ದೇವಸ್ಥಾನ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಇದಲ್ಲದೆ, ಕಾಳಗಿ-ಕೊಡದೂರು ನಡುವಿನ ರಸ್ತೆ ಸಂಪರ್ಕ ಸಹ ಕಡಿತವಾಗಿದೆ. ಜೊತೆಗೆ, ನಗರದ ಪೂಜಾ ಕಾಲೋನಿ ಮತ್ತು ಪ್ರಶಾಂತ್ ನಗರದ ನೂರಾರು ಮನೆಗಳಿಗೆ ಮಳೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.