ಪಾರ್ಕ್​ಗೆ ಬಂದ ವ್ಯಕ್ತಿ ಅಲ್ಲೇ ಬಿದ್ದು ಸಾವು.. ಜನರಲ್ಲಿ ಆತಂಕ

ಪಾರ್ಕ್​ಗೆ ಬಂದ ವ್ಯಕ್ತಿ ಅಲ್ಲೇ ಬಿದ್ದು ಸಾವು.. ಜನರಲ್ಲಿ ಆತಂಕ

ಬೆಂಗಳೂರು: ನಗರದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಜನ ಹೇಗೆ ಸಾಯ್ತಾರೆ ಅಂತ ಊಹೆ ಮಾಡೋಕು ಕಷ್ಟವಾಗ್ತಿದೆ. ಪಾರ್ಕ್​ಗೆ ವಾಕಿಂಗ್ ಬಂದ ವ್ಯಕ್ತಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಆರ್ .ಟಿ.ನಗರದಲ್ಲಿ ನಡೆದಿದೆ. ಪಾರ್ಕ್​ಗೆ ಬಂದಾಗ ಅಲ್ಲೇ ಬಿದ್ದು ವ್ಯಕ್ತಿ ಮೃತಪಟಟ್ಟಿದ್ದು, ಶವವನ್ನು ಬಿಬಿಎಂಪಿ ಸಿಬ್ಬಂದಿ ಕೊಂಡೊಯ್ದಿದ್ದಾರೆ. ಪಾರ್ಕ್​ಗೆ ಬಂದ ವ್ಯಕ್ತಿ ಹೇಗೆ ಮೃತಪಟ್ರು ಅನ್ನೋದೆ ಗೊತ್ತಾಗ್ತಿಲ್ಲ. ನಗರದಲ್ಲಿ ಕೊರೊನಾ ಹಾವಳಿ ಹೆಚ್ಚಿರುವುದರಿಂದ ವ್ಯಕ್ತಿಯ ಸಾವಿನ ಸುತ್ತ ಅನುಮಾನ ಬೆಳೆದುಕೊಂಡಿದೆ. ಸಾಕಷ್ಟು ಕೇಸ್​ಗಳಲ್ಲಿ ಮೃತಪಟ್ಟ ಬಳಿಕ ಕೊರೊನಾ […]

Ayesha Banu

| Edited By:

Jul 27, 2020 | 9:26 PM

ಬೆಂಗಳೂರು: ನಗರದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಜನ ಹೇಗೆ ಸಾಯ್ತಾರೆ ಅಂತ ಊಹೆ ಮಾಡೋಕು ಕಷ್ಟವಾಗ್ತಿದೆ. ಪಾರ್ಕ್​ಗೆ ವಾಕಿಂಗ್ ಬಂದ ವ್ಯಕ್ತಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಆರ್ .ಟಿ.ನಗರದಲ್ಲಿ ನಡೆದಿದೆ. ಪಾರ್ಕ್​ಗೆ ಬಂದಾಗ ಅಲ್ಲೇ ಬಿದ್ದು ವ್ಯಕ್ತಿ ಮೃತಪಟಟ್ಟಿದ್ದು, ಶವವನ್ನು ಬಿಬಿಎಂಪಿ ಸಿಬ್ಬಂದಿ ಕೊಂಡೊಯ್ದಿದ್ದಾರೆ.

ಪಾರ್ಕ್​ಗೆ ಬಂದ ವ್ಯಕ್ತಿ ಹೇಗೆ ಮೃತಪಟ್ರು ಅನ್ನೋದೆ ಗೊತ್ತಾಗ್ತಿಲ್ಲ. ನಗರದಲ್ಲಿ ಕೊರೊನಾ ಹಾವಳಿ ಹೆಚ್ಚಿರುವುದರಿಂದ ವ್ಯಕ್ತಿಯ ಸಾವಿನ ಸುತ್ತ ಅನುಮಾನ ಬೆಳೆದುಕೊಂಡಿದೆ. ಸಾಕಷ್ಟು ಕೇಸ್​ಗಳಲ್ಲಿ ಮೃತಪಟ್ಟ ಬಳಿಕ ಕೊರೊನಾ ಪಾಸಿಟಿವ್ ವರದಿ ಬಂದಿರೋದು ಪತ್ತೆಯಾಗಿದೆ.

ಮನೆಯಲ್ಲಿ ಮೃತಪಟ್ಟವರಿಗೂ ಕೋವಿಡ್ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಪತ್ತೆ ಆಗ್ತಿದೆ. ಬೆಂಗಳೂರಲ್ಲಿ ಸಾಕಷ್ಟು ಕೇಸ್​ಗಳಲ್ಲಿ ಇದೇ ರೀತಿ ಆಗ್ತಿದೆ. ಪಾರ್ಕ್​​ನಲ್ಲಾದ ಘಟನೆಯಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಬಿಬಿಎಂಪಿಗೂ ಶಾಕಿಂಗ್ ಸಾವುಗಳನ್ನ ಕಡಿಮೆ ಮಾಡುವುದು ಚಾಲೆಂಜ್ ಆಗಿದೆ.

Follow us on

Related Stories

Most Read Stories

Click on your DTH Provider to Add TV9 Kannada