ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪೆಟ್ರೋಲ್ ಇದ್ದಾಗಲೇ ಟ್ಯಾಂಕ್ ವೆಲ್ಡಿಂಗ್: ಒಬ್ಬನ ಸಾವು

ಬೆಂಗಳೂರು: ಪೆಟ್ರೋಲ್ ಟ್ಯಾಂಕ್ ವೆಲ್ಡಿಂಗ್ ಮಾಡುವ ಸಂದರ್ಭದಲ್ಲಿ ಭಾರಿ ಅವಘಡವೊಂದು ಸಂಭವಿಸಿ ವ್ಯಕ್ತಿ ಮೃತಪಟ್ಟಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ವಿಟ್ಟಸಂದ್ರದಲ್ಲಿ ನಡೆದಿದೆ. ಗೌರಿ ಶಂಕರ್ ಮೃತ‌ ವ್ಯಕ್ತಿ. ಟ್ಯಾಂಕ್​ನ ತಳದಲ್ಲಿ ಐದಾರು ಲೀಟರ್​ ಪೆಟ್ರೋಲ್​ ಉಳಿದಿತ್ತು. ಸರಿಯಾಗಿ ಗಮನಿಸದೆ ವೆಲ್ಡಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಪೆಟ್ರೋಲ್​ ಟ್ಯಾಂಕರ್​ಗೆ ಬೆಂಕಿ ತಗುಲಿ ಬ್ಲಾಸ್ಟ್ ಆಗಿದೆ. ಈ ವೇಳೆ ಆ ಸ್ಥಳದಲ್ಲಿ ಒಟ್ಟು ಮೂವರು ಕೆಲಸ ಮಾಡುತ್ತಿದ್ದರು. ಅದರಲ್ಲಿ ಓರ್ವ ಮೃತಪಟ್ಟಿದ್ದು, ಇನ್ನುಳಿದ ಇಬ್ಬರಿಗೆ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ […]

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪೆಟ್ರೋಲ್ ಇದ್ದಾಗಲೇ ಟ್ಯಾಂಕ್ ವೆಲ್ಡಿಂಗ್: ಒಬ್ಬನ ಸಾವು

Updated on: Sep 26, 2020 | 1:12 PM

ಬೆಂಗಳೂರು: ಪೆಟ್ರೋಲ್ ಟ್ಯಾಂಕ್ ವೆಲ್ಡಿಂಗ್ ಮಾಡುವ ಸಂದರ್ಭದಲ್ಲಿ ಭಾರಿ ಅವಘಡವೊಂದು ಸಂಭವಿಸಿ ವ್ಯಕ್ತಿ ಮೃತಪಟ್ಟಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ವಿಟ್ಟಸಂದ್ರದಲ್ಲಿ ನಡೆದಿದೆ. ಗೌರಿ ಶಂಕರ್ ಮೃತ‌ ವ್ಯಕ್ತಿ.

ಟ್ಯಾಂಕ್​ನ ತಳದಲ್ಲಿ ಐದಾರು ಲೀಟರ್​ ಪೆಟ್ರೋಲ್​ ಉಳಿದಿತ್ತು. ಸರಿಯಾಗಿ ಗಮನಿಸದೆ ವೆಲ್ಡಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಪೆಟ್ರೋಲ್​ ಟ್ಯಾಂಕರ್​ಗೆ ಬೆಂಕಿ ತಗುಲಿ ಬ್ಲಾಸ್ಟ್ ಆಗಿದೆ. ಈ ವೇಳೆ ಆ ಸ್ಥಳದಲ್ಲಿ ಒಟ್ಟು ಮೂವರು ಕೆಲಸ ಮಾಡುತ್ತಿದ್ದರು. ಅದರಲ್ಲಿ ಓರ್ವ ಮೃತಪಟ್ಟಿದ್ದು, ಇನ್ನುಳಿದ ಇಬ್ಬರಿಗೆ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published On - 1:03 pm, Sat, 26 September 20