ಬೈಕ್​ಗೆ ಲಾರಿ ಡಿಕ್ಕಿ, ಛಿದ್ರ ಛಿದ್ರವಾಯ್ತು ಸವಾರನ ರುಂಡ..

ಬೈಕ್​ಗೆ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಕರುಳು ಹಿಂಡುವ ಭೀಕರ ಅಪಘಾತ ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಸೋಸಲೆ ಗ್ರಾಮದ ಬಳಿ ನಡೆದಿದೆ.

ಬೈಕ್​ಗೆ ಲಾರಿ ಡಿಕ್ಕಿ, ಛಿದ್ರ ಛಿದ್ರವಾಯ್ತು ಸವಾರನ ರುಂಡ..
ರಾಜು ಮೃತ ದುರ್ದೈವಿ

Updated on: Dec 07, 2020 | 10:28 AM

ಮೈಸೂರು: ಬೈಕ್​ಗೆ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಕರುಳು ಹಿಂಡುವ ಭೀಕರ ಅಪಘಾತ ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಸೋಸಲೆ ಗ್ರಾಮದ ಬಳಿ ನಡೆದಿದೆ. ಬೆಂಗಳೂರು ಮೂಲದ ರಾಜು (19) ಮೃತ ದುರ್ದೈವಿ.

ನಿನ್ನೆ ರಾತ್ರಿ ರಾಜು ಮತ್ತು ಸ್ನೇಹಿತ ತರುಣ್ ಒಂದೇ ಬೈಕ್​ನಲ್ಲಿ ಸ್ನೇಹಿತನ ಮನೆಗೆ ಹೋಗುತ್ತಿದ್ದರು. ಈ ವೇಳೆ ಯಮನಂತೆ ಬಂದ ಲಾರಿ ಬೈಕ್​ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸವಾರ ರಾಜುವಿನ ರುಂಡ ಛಿದ್ರ ಛಿದ್ರವಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಇನ್ನು ಹಿಂಬದಿ ಕುಳಿತಿದ್ದ ತರುಣ್​ಗೆ ತೀವ್ರ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಟಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತವೆಸಗಿ ಲಾರಿ ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ. ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಣ್ಣೆನಗರಿಯಲ್ಲಿ ಹಾಲಿನ ಲಾರಿಗೆ ಕಾರ್​ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

Published On - 9:27 am, Mon, 7 December 20