ತಮಿಳುನಾಡಿಗೆ ಮತ್ತೊಂದು ಆಘಾತ; ಸದ್ಯದಲ್ಲೇ ಅಬ್ಬರಿಸಲಿರುವ ಅರ್ನಬ್..ಅರ್ನಬ್ ಎಂದರೆ ಏನು ಗೊತ್ತಾ?
ಹಿಂದೂಮಹಾಸಾಗರದಲ್ಲಿ ವಾಯುಭಾರ ಕುಸಿತದಿಂದ ಈ ಅರ್ನಬ್ ಚಂಡಮಾರುತ ಏಳಲಿದ್ದು, ಇದೂ ಕೂಡ ತಮಿಳುನಾಡು, ಕೇರಳಕ್ಕೆ ಅಪ್ಪಳಿಸಲಿದೆ.
ಚೆನ್ನೈ: ನಿವಾರ್ ಹಾಗೂ ಬುರೇವಿ ಚಂಡಮಾರುತಗಳು ಒಂದರ ಬೆನ್ನಿಗೆ ಮತ್ತೊಂದು ಅಪ್ಪಳಿಸಿ, ಸಾಕಷ್ಟು ಹಾನಿ ಮಾಡಿ ಹೋದ ಬೆನ್ನಲ್ಲೇ ಇನ್ನೊಂದು ಚಂಡಮಾರುತ ಅಪ್ಪಳಿಸಲು ಸಿದ್ಧವಾಗಿದೆ. ಇದರ ಹೆಸರು ‘ಅರ್ನಬ್’..
ಅರ್ನಬ್ ಎಂಬುವುದು ಸಂಸ್ಕೃತದ ಅರ್ಣವ ಪದದಿಂದ ಹುಟ್ಟಿರುವುದು. ಅರ್ಣವ ಎಂದರೆ ಸಮುದ್ರ, ಎಂದರೆ ಸಮುದ್ರ ಸೀಮೋಲ್ಲಂಘನ ಮಾಡಿದ್ದ ಆಂಜನೇಯನ ಹೆಸರು. ಹೀಗಾಗಿ ಈಗ ಸಮುದ್ರಗಳಲ್ಲಿ ಅಲೆಯೇಳುವ ಚಂಡಮಾರುತಕ್ಕೆ ಅರ್ನಬ್ ಎಂದು ಹೆಸರಿಟ್ಟಿದ್ದಾರೆ.
ಹಿಂದೂಮಹಾಸಾಗರದಲ್ಲಿ ವಾಯುಭಾರ ಕುಸಿತದಿಂದ ಈ ಅರ್ನಬ್ ಚಂಡಮಾರುತ ಏಳಲಿದ್ದು, ಇದೂ ಕೂಡ ತಮಿಳುನಾಡು, ಕೇರಳಕ್ಕೆ ಅಪ್ಪಳಿಸಲಿದೆ. ಎರಡು ವಾರದೊಳಗೆ ನಿವಾರ್ ಮತ್ತು ಬುರೇವಿ ಅಬ್ಬರಕ್ಕೆ ತತ್ತರಿಸಿದ್ದ ತಮಿಳುನಾಡು, ಕೇರಳಕ್ಕೆ ಇದು ಇನ್ನೊಂದು ಆಘಾತವಾಗಲಿದೆ. ಎರಡೂ ರಾಜ್ಯಗಳಲ್ಲಿ ಮತ್ತೆ ವಿಪರೀತ ಮಳೆಯುಂಟಾಗುವ ಸಾಧ್ಯತೆ ಇದೆ.
ಅರ್ನಬ್ ಹೆಸರು ನಮ್ಮ ದೇಶದಲ್ಲಿ ತುಸು ಪ್ರಸಿದ್ಧವೇ.. ಕಾರಣ ಟಿವಿ ನ್ಯೂಸ್ ಆಂಕರ್ ಅರ್ನಬ್ ಗೋಸ್ವಾಮಿ. ಆದರೆ ಈಗ ಏಳಲಿರುವ ಚಂಡಮಾರುತಕ್ಕೆ ಹೆಸರು ಕೊಟ್ಟಿದ್ದು ಭಾರತವೂ ಅಲ್ಲ, ಅರ್ನಬ್ ಗೋಸ್ವಾಮಿ ಮತ್ತು ಅರ್ನಬ್ ಚಂಡಮಾರುತಕ್ಕೆ ಯಾವುದೇ ಸಂಬಂಧವೂ ಇಲ್ಲ.
ಹಿಂದೂ ಮಹಾಸಾಗಾರ ಮತ್ತು ಬಂಗಾಳಕೊಲ್ಲಿಯಲ್ಲಿ ಹುಟ್ಟುವ ಚಂಡಮಾರುತಗಳಿಗೆ ಹೆಸರು ಸೂಚಿಸುವ ಪ್ಯಾನಲ್ನಲ್ಲಿರುವ 13 ದೇಶಗಳು ಈಗಾಗಲೇ 169 ಚಂಡಮಾರುತಗಳನ್ನು ಪಟ್ಟಿ ಮಾಡಿಟ್ಟಿವೆ. ಅದರಲ್ಲಿ ಬಾಂಗ್ಲಾದೇಶ ಸೂಚಿಸಿದ್ದ ಅರ್ನಬ್ ಎಂಬ ಹೆಸರಿನ ಚಂಡಮಾರುತ ಶೀಘ್ರದಲ್ಲೇ ತಮಿಳುನಾಡು, ಕೇರಳಕ್ಕೆ ಅಪ್ಪಳಿಸಲಿದೆ. ಹಾಗೇ ಬಾಂಗ್ಲಾದೇಶ ಅರ್ನಬ್ ಹೆಸರನ್ನು ಸಾಗರ ಎಂಬರ್ಥದಲ್ಲಿಯೇ ಸೂಚಿಸಿದೆ.
‘ಚೆಂದ ಚೆಂದದ’ ಹೆಸರು ಇಟ್ಕೊಂಡು ಅಪ್ಪಳಿಸುತ್ತವಲ್ಲ ಈ ಚಂಡಮಾರುತಗಳು! ಇವಕ್ಕೆ ಹೆಸರು ಇಡೋರು ಯಾರು?
Published On - 10:47 am, Mon, 7 December 20