ಉಡುಪಿ: ಬೋರ್‌ವೆಲ್ ಕೊರೆಯುವಾಗ 15 ಅಡಿ ಭೂಮಿ ಕುಸಿದು ಸ್ಥಳದಲ್ಲಿ ನಿಂತಿದ್ದ ಕಾರ್ಮಿಕ ರೋಹಿತ್ ಖಾರ್ವಿ ಎಂಬ ವ್ಯಕ್ತಿ ಮಣ್ಣಿನಲ್ಲಿ ಸಿಲುಕಿರುವ ಘಟನೆ ಬೈಂದೂರು ತಾಲೂಕಿನ ಮರವಂತೆಯಲ್ಲಿ ನಡೆದಿದೆ. ಬೋರ್‌ವೆಲ್ ಕೊರೆಯುವಾಗ ಬೋರ್‌ವೆಲ್ ಪೈಪ್ ಸುತ್ತ 15 ಅಡಿ ಭೂಮಿ ಕುಸಿದಿದೆ. ಈ ವೇಳೆ ಸ್ಥಳದಲ್ಲಿ ನಿಂತಿದ್ದ ರೋಹಿತ್ ಖಾರ್ವಿ ಮಣ್ಣಿನಲ್ಲಿ ಸಿಲುಕಿಕೊಂಡಿದ್ದು, ಆತನನ್ನು ಮೇಲೆತ್ತಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಜೆಸಿಬಿಯ ಮೂಲಕ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಹೊಂಡದ ಸುತ್ತ ಮಣ್ಣು ಕುಸಿಯದಂತೆ ಡ್ರಮ್ ಅಳವಡಿಕೆ ಮಾಡಲಾಗಿದೆ. ಅಗ್ನಿಶಾಮಕ ದಳ, ವೈದ್ಯರು ಮತ್ತು ಸ್ಥಳೀಯರು ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದಾರೆ. ಸದ್ಯ ಸೇಫ್ ಅಗಿರೊ ರೋಹಿತ್ ಖಾರ್ವಿ ಸ್ಥಳದಲ್ಲಿರುವವರ ಜೊತೆ ಮಾತನಾಡುತ್ತಿದ್ದಾರೆ.
6 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ:
ಸತತ 6 ಗಂಟೆಗಳ ಕಾರ್ಯಾಚರಣೆ ಬಳಿಕ ಮಣ್ಣಿನಲ್ಲಿ ಸಿಲುಕಿದ್ದ ಕಾರ್ಮಿಕ ರೋಹಿತ್ ಖಾರ್ವಿಯನ್ನು ರಕ್ಷಣೆ ಮಾಡಲಾಗಿದೆ. ಅದೃಷ್ಟವಶಾತ್ ಯಾವುದೇ ಗಾಯವಿಲ್ಲದೆ ರೋಹಿತ್ ಅಪಾಯದಿಂದ ಪಾರಾಗಿದ್ದಾನೆ. ರೋಹಿತ್‌ಗೆ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Published On - 1:56 pm, Sun, 16 February 20