ಖಾಸಗಿ ಬಸ್-ಬೈಕ್ ಮುಖಾಮುಖಿ: ದಂಪತಿ, ಪುತ್ರ ಸ್ಥಳದಲ್ಲೇ ದುರ್ಮರಣ
ಶಿವಮೊಗ್ಗ: ಖಾಸಗಿ ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ದಂಪತಿ ಹಾಗೂ ಮಗ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಭದ್ರಾವತಿ ತಾಲೂಕಿನ ಮೂಡಲವಿಠಲಾಪುರ ಗ್ರಾಮದ ಬಳಿ ಸಂಭವಿಸಿದೆ. ಬೈಕ್‌ನಲ್ಲಿದ್ದ ವೀರಪ್ಪ, ಪತ್ನಿ ಆಶಾ, ಪುತ್ರ ಹೇಮಂತ್ ಮೃತ ದುರ್ದೈವಿಗಳು. ಶಿವಮೊಗ್ಗದಿಂದ ಹನುಮಂತಾಪುರಕ್ಕೆ ಖಾಸಗಿ ಬಸ್ ಪ್ರಯಾಣಿಸುತ್ತಿತ್ತು. ಈ ವೇಳೆ ಮೂಡಲವಿಠಲಾಪುರ ಗ್ರಾಮದ ಬಳಿ ಎದುರಿನಿಂದ ಬಂದ ಬೈಕ್ಗೆ ಬಸ್ ಡಿಕ್ಕಿಯೊಡೆದಿದೆ. ಬೈಕ್‌ನಲ್ಲಿದ್ದ ದಂಪತಿ ಮತ್ತು 12 ವರ್ಷದ ಪುತ್ರ ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ […]
ಶಿವಮೊಗ್ಗ: ಖಾಸಗಿ ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ದಂಪತಿ ಹಾಗೂ ಮಗ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಭದ್ರಾವತಿ ತಾಲೂಕಿನ ಮೂಡಲವಿಠಲಾಪುರ ಗ್ರಾಮದ ಬಳಿ ಸಂಭವಿಸಿದೆ. ಬೈಕ್‌ನಲ್ಲಿದ್ದ ವೀರಪ್ಪ, ಪತ್ನಿ ಆಶಾ, ಪುತ್ರ ಹೇಮಂತ್ ಮೃತ ದುರ್ದೈವಿಗಳು.
ಶಿವಮೊಗ್ಗದಿಂದ ಹನುಮಂತಾಪುರಕ್ಕೆ ಖಾಸಗಿ ಬಸ್ ಪ್ರಯಾಣಿಸುತ್ತಿತ್ತು. ಈ ವೇಳೆ ಮೂಡಲವಿಠಲಾಪುರ ಗ್ರಾಮದ ಬಳಿ ಎದುರಿನಿಂದ ಬಂದ ಬೈಕ್ಗೆ ಬಸ್ ಡಿಕ್ಕಿಯೊಡೆದಿದೆ. ಬೈಕ್‌ನಲ್ಲಿದ್ದ ದಂಪತಿ ಮತ್ತು 12 ವರ್ಷದ ಪುತ್ರ ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಮೃತರು ಹನುಮಂತಾಪುರ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಅಪಘಾತ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.