ವಿಧಾನಮಂಡಲ ಅಧಿವೇಶನ ಆರಂಭ, ಕಲಾಪ ಕದನ ಶುರು!
ಬೆಂಗಳೂರು: ಇಂದಿನಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಶುರುವಾಗುತ್ತಿದೆ. 15ನೇ ವಿಧಾನಸಭೆಯ 6ನೇ ಅಧಿವೇಶನಕ್ಕೆ ವಿಧಾನಸಭೆ ಮತ್ತು ವಿಧಾನಪರಿಷತ್ತು ಸಿದ್ಧಗೊಂಡಿದೆ. ಬೆಳಗ್ಗೆ 11 ಗಂಟೆಗೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಜೂಭಾಯ್ ವಾಲಾ ಭಾಷಣ ಮಾಡಲಿದ್ದು, ಈ ಮೂಲಕ ಸರ್ಕಾರದ ಮುಂದಿನ ಒಂದು ವರ್ಷದ ದಿಕ್ಸೂಚಿಯನ್ನು ಹೇಳಿಸಲು ಬಿಎಸ್ವೈ ನೇತೃತ್ವದ ಬಿಜೆಪಿ ಸರ್ಕಾರ ಪ್ಲ್ಯಾನ್ ಮಾಡಿದೆ. ಇದೇ ಭಾಷಣವನ್ನು ಚರ್ಚೆಗೆ ಇಟ್ಟುಕೊಂಡು ಬಿಜೆಪಿ ಸರ್ಕಾರವನ್ನ ಕಟ್ಟಿ ಹಾಕಲು ವಿಪಕ್ಷ ನಾಯಕರು ತಂತ್ರ ರೆಡಿ ಮಾಡ್ಕೊಂಡು ಕಾಯುತ್ತಿದ್ದಾರೆ.. ‘ಕಲಾಪ’ ಕದನ: […]
ಬೆಂಗಳೂರು: ಇಂದಿನಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಶುರುವಾಗುತ್ತಿದೆ. 15ನೇ ವಿಧಾನಸಭೆಯ 6ನೇ ಅಧಿವೇಶನಕ್ಕೆ ವಿಧಾನಸಭೆ ಮತ್ತು ವಿಧಾನಪರಿಷತ್ತು ಸಿದ್ಧಗೊಂಡಿದೆ. ಬೆಳಗ್ಗೆ 11 ಗಂಟೆಗೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಜೂಭಾಯ್ ವಾಲಾ ಭಾಷಣ ಮಾಡಲಿದ್ದು, ಈ ಮೂಲಕ ಸರ್ಕಾರದ ಮುಂದಿನ ಒಂದು ವರ್ಷದ ದಿಕ್ಸೂಚಿಯನ್ನು ಹೇಳಿಸಲು ಬಿಎಸ್ವೈ ನೇತೃತ್ವದ ಬಿಜೆಪಿ ಸರ್ಕಾರ ಪ್ಲ್ಯಾನ್ ಮಾಡಿದೆ. ಇದೇ ಭಾಷಣವನ್ನು ಚರ್ಚೆಗೆ ಇಟ್ಟುಕೊಂಡು ಬಿಜೆಪಿ ಸರ್ಕಾರವನ್ನ ಕಟ್ಟಿ ಹಾಕಲು ವಿಪಕ್ಷ ನಾಯಕರು ತಂತ್ರ ರೆಡಿ ಮಾಡ್ಕೊಂಡು ಕಾಯುತ್ತಿದ್ದಾರೆ..
‘ಕಲಾಪ’ ಕದನ: ಇಂದಿನಿಂದ ಫೆಬ್ರವರಿ 20ರ ತನಕ ರಾಜ್ಯಪಾಲರ ಭಾಷಣದ ಮೇಲೆ ಉಭಯ ಸದನಗಳಲ್ಲಿ ಚರ್ಚೆ ನಡೆಯಲಿದೆ. ಮುಂದುವರಿದ ಸದನ ಮತ್ತೆ ಮಾರ್ಚ್ 2ರಂದು ಆರಂಭಗೊಂಡು ಮಾರ್ಚ್ 31ಕ್ಕೆ ಮುಕ್ತಾಯ ಆಗಲಿದೆ. ಮಾರ್ಚ್ 2 ಮತ್ತು 3ರಂದು ಸಂವಿಧಾನದ ಮೇಲೆ ವಿಶೇಷ ಚರ್ಚೆಗೆ ಸಮಯ ನಿಗದಿ ಆಗಿದ್ರೆ, ಮಾರ್ಚ್ 5ರಂದು ಹಣಕಾಸು ಸಚಿವರೂ ಆಗಿರುವ ಸಿಎಂ ಯಡಿಯೂರಪ್ಪ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಮಧ್ಯೆ ಅಧಿವೇಶನದಲ್ಲಿ ಪ್ರಮುಖ 6 ವಿಧೇಯಕಗಳು ಮಂಡನೆ ಆಗಲಿವೆ.
ವಿಧೇಯಕಗಳ ಮಂಡನೆ: ಅಧಿವೇಶನದಲ್ಲಿ ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ) ಕಾಯ್ದೆ ಹಾಗೂ ಕರ್ನಾಟಕ ನಾವಿನ್ಯತಾ ಪ್ರಾಧಿಕಾರ ವಿಧೇಯಕ ಮಂಡನೆ ಆಗಲಿದೆ.. ಜತೆಗೆ ಭಾರತ ರಾಷ್ಟ್ರೀಯ ಕಾನೂನು ವಿದ್ಯಾಲಯ (ತಿದ್ದುಪಡಿ) ವಿಧೇಯಕ ಮತ್ತು ಕರ್ನಾಟಕ ರಾಜ್ಯಭಾಷಾ (ತಿದ್ದುಪಡಿ) ವಿಧೇಯಕವೂ ಮಂಡನೆ ಆಗಲಿದೆ. ಇದಲ್ಲದೇ, ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ ಮತ್ತು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ವಿಧೇಯಕಕ್ಕೆ ಮಂಡನೆ ಆಗೋ ಸಾಧ್ಯತೆ ಇದೆ.
ಈ ಅಧಿವೇಶನದಲ್ಲಿ ಸಾಕಷ್ಟು ಸವಾಲುಗಳೂ ಯಡಿಯೂರಪ್ಪ ಸರ್ಕಾರಕ್ಕೆ ಎದುರಾಗೋ ಸಾಧ್ಯತೆ ಇದೆ. ವಿಪಕ್ಷ ನಾಯಕರು ಕೆಲವೊಂದಿಷ್ಟು ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ತಯಾರಿ ನಡೆಸಿದ್ದಾರೆ.. ಆ ಅಸ್ತ್ರಗಳೇನು ಅಂತಾ ನೋಡೋದಾದ್ರೆ,
ಸರ್ಕಾರಕ್ಕೆ ‘ಸವಾಲು’..? ನೆರೆ ಮತ್ತು ಬರ ಪರಿಹಾರ ಕಾರ್ಯದಲ್ಲಿ ಆಗಿರುವ ವಿಳಂಬವನ್ನು ಚರ್ಚೆಗೆ ತೆಗೆದುಕೊಳ್ಳಲು ವಿಪಕ್ಷಗಳು ತಯಾರಾಗಿವೆ. ಕೇಂದ್ರದಿಂದ ಬಾಕಿ ಇರುವ ಮತ್ತು ಕಡಿತ ಆಗಿರುವ ಅನುದಾನ ವಿಚಾರವಾಗಿ ಗುಡುಗಲು ವಿಪಕ್ಷಗಳು ತುದಿಗಾಲಲ್ಲಿ ನಿಂತಿವೆ. ಅಲ್ದೆ, ಹದಗೆಟ್ಟ ಆರ್ಥಿಕ ಸ್ಥಿತಿ ಮತ್ತು ಅರಣ್ಯ ಕಾಯ್ದೆ ಅಡಿ ತನಿಖೆ ಎದುರಿಸುತ್ತಿರುವ ಆನಂದ್ ಸಿಂಗ್ ಅವರಿಗೇ ಅರಣ್ಯ ಖಾತೆ ನೀಡಿರುವುದು ಸರ್ಕಾರಕ್ಕೆ ಸವಾಲಾಗೋ ಸಾಧ್ಯತೆ ಇದೆ.
ಇದ್ರ ಜತೆಗೆ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ದಾಖಲಾಗಿರುವ ಪ್ರಕರಣಗಳು ಅಂದ್ರೆ, ಮಂಗಳೂರು ಗೋಲಿಬಾರ್ ಪ್ರಕರಣ ಸೇರಿದಂತೆ ರಾಜ್ಯದ ವಿವಿಧೆಡೆ ದಾಖಲಾದ ಪ್ರಕರಣಗಳ ಮೇಲೂ ಬಿಸಿಬಿಸಿ ಕಾವೇರೋ ಸಾಧ್ಯತೆ ಇದೆ. ಇದಿಷ್ಟೇ ಅಲ್ದೆ, ಎಲೆಕ್ಟ್ರಾನಿಕ್ ಮಾಧ್ಯಮಗಳ ಕ್ಯಾಮರಾಗಳನ್ನು ಅಧಿವೇಶನಕ್ಕೆ ನಿಷೇಧ ಮಾಡಿರುವುದು ಕೂಡ ವಿಪಕ್ಷ ನಾಯಕರಿಗೆ ಅಸ್ತ್ರವಾಗಲಿದೆ. ಹೀಗೆ ಸಾಕಷ್ಟು ವಿಚಾರಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್, ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ತಳ್ಳಲು ಸಾಕಷ್ಟು ಬಾಣಗಳನ್ನು ಬತ್ತಳಿಕೆಯಲ್ಲಿ ಇರಿಸಿಕೊಂಡಿವೆ.
ಒಟ್ನಲ್ಲಿ, ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭಗೊಳ್ಳಲಿದ್ದು, ಸರ್ಕಾರ ಮತ್ತು ವಿಪಕ್ಷಗಳ ಬಡಿದಾಟ ತಾರಕಕ್ಕೇರೋ ಸಾಧ್ಯತೆ ಇದೆ.. ಹೀಗಾಗಿ, 25 ದಿನಗಳ ಅಧಿವೇಶನ ನಡೆಸುವುದು ಸರ್ಕಾರಕ್ಕೆ ಸುಲಭವೇನೂ ಇಲ್ಲ. ಈ ಅಡೆ ತಡೆಗಳನ್ನು ಆಡಳಿತ ಪಕ್ಷ ಹೇಗೆ ನಿಭಾಯಿಸುತ್ತದೆ? ವಿಪಕ್ಷಗಳು ಸರ್ಕಾರವನ್ನು ಹೇಗೆ ಅಡಕತ್ತರಿಗೆ ಸಿಲುಕಿಸುತ್ತವೆ?
Published On - 6:17 am, Mon, 17 February 20