AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀವೆಡ್ಡಿಂಗ್ ಶೂಟ್ ಅಂತೇಳಿ ಸ್ಕೆಚ್: ಸ್ಫಾಟ್​ಗೆ ಬಂದಾಗ ಖಾರಪುಡಿ ಎರಚಿ ದರೋಡೆ!

ಹಾಸನ: ಪೊಲೀಸ್ರು ಎಂಟ್ರಿ ಕೊಟ್ಟಿದ್ದಾರೆ. ಮೋರಿ ಪಕ್ಕದಲ್ಲೇ ಇಂಚಿಂಚು ಜಾಲಾಡ್ತಿದ್ದಾರೆ. ಜನರು ಕೂಡ ಶಾಕ್ ಆಗಿದ್ದಾರೆ. ಹಾಡಹಗಲೇ ನಡೆದ ಅದೊಂದು ಘಟನೆ ಎಲ್ಲರನ್ನೂ ನಡುಗಿಸಿಬಿಟ್ಟಿದೆ. ನಮ್ಮೂರಲ್ಲಿ ಇಂಥದೊಂದು ಘಟನೆ ನಡೆದೋಯ್ತಾ ಅಂತಾ ಬೆಚ್ಚಿ ಬಿದ್ದಿದ್ದಾರೆ. ಯೆಸ್.. ಮದ್ವೆ ಸೀಜನ್.. ಎಲ್ರೂ ಫೋಟೋಶೂಟ್ ಮಾಡೋದ್ರಲ್ಲಿ ಫುಲ್ ಬ್ಯುಸಿ. ಒಂದು ಆರ್ಡರ್ ಸಿಕ್ರೆ ಸಾಕು ಗುರೂ ಅಂಥಾ ಫೋಟೋಗ್ರಾಫರ್ಸ್ ಕೂಡ ಕಣ್ಣಲ್ಲಿ ಕಣ್ಣಿಟ್ಟು ಕಾಯ್ತಿರ್ತಾರೆ. ಪ್ರೀವೆಡ್ಡಿಂಗ್ ಶೂಟ್ ಮಾಡೋ ಛಾಯಾಗ್ರಾಹಕರಿಗಂತೂ ಡಿಮ್ಯಾಂಡಪ್ಪೋ ಡಿಮ್ಯಾಂಡ್. ಆದ್ರೆ, ಹಾಸನದ ಫೋಟೋಗ್ರಾಫರ್​​​ಗಳನ್ನ ಖತರ್ನಾಕ್ ಕಿಲಾಡಿಗಳು […]

ಪ್ರೀವೆಡ್ಡಿಂಗ್ ಶೂಟ್ ಅಂತೇಳಿ ಸ್ಕೆಚ್: ಸ್ಫಾಟ್​ಗೆ ಬಂದಾಗ ಖಾರಪುಡಿ ಎರಚಿ ದರೋಡೆ!
ಸಾಧು ಶ್ರೀನಾಥ್​
|

Updated on:Feb 17, 2020 | 11:53 AM

Share

ಹಾಸನ: ಪೊಲೀಸ್ರು ಎಂಟ್ರಿ ಕೊಟ್ಟಿದ್ದಾರೆ. ಮೋರಿ ಪಕ್ಕದಲ್ಲೇ ಇಂಚಿಂಚು ಜಾಲಾಡ್ತಿದ್ದಾರೆ. ಜನರು ಕೂಡ ಶಾಕ್ ಆಗಿದ್ದಾರೆ. ಹಾಡಹಗಲೇ ನಡೆದ ಅದೊಂದು ಘಟನೆ ಎಲ್ಲರನ್ನೂ ನಡುಗಿಸಿಬಿಟ್ಟಿದೆ. ನಮ್ಮೂರಲ್ಲಿ ಇಂಥದೊಂದು ಘಟನೆ ನಡೆದೋಯ್ತಾ ಅಂತಾ ಬೆಚ್ಚಿ ಬಿದ್ದಿದ್ದಾರೆ.

ಯೆಸ್.. ಮದ್ವೆ ಸೀಜನ್.. ಎಲ್ರೂ ಫೋಟೋಶೂಟ್ ಮಾಡೋದ್ರಲ್ಲಿ ಫುಲ್ ಬ್ಯುಸಿ. ಒಂದು ಆರ್ಡರ್ ಸಿಕ್ರೆ ಸಾಕು ಗುರೂ ಅಂಥಾ ಫೋಟೋಗ್ರಾಫರ್ಸ್ ಕೂಡ ಕಣ್ಣಲ್ಲಿ ಕಣ್ಣಿಟ್ಟು ಕಾಯ್ತಿರ್ತಾರೆ. ಪ್ರೀವೆಡ್ಡಿಂಗ್ ಶೂಟ್ ಮಾಡೋ ಛಾಯಾಗ್ರಾಹಕರಿಗಂತೂ ಡಿಮ್ಯಾಂಡಪ್ಪೋ ಡಿಮ್ಯಾಂಡ್. ಆದ್ರೆ, ಹಾಸನದ ಫೋಟೋಗ್ರಾಫರ್​​​ಗಳನ್ನ ಖತರ್ನಾಕ್ ಕಿಲಾಡಿಗಳು ಸಿನಿಮಾ ಸ್ಟೈಲ್​​ನಲ್ಲಿ ಬಕ್ರಾ ಮಾಡಿದ್ದಾರೆ.

ಸಿನಿಮೀಯ ರೀತಿಯಲ್ಲಿ ದರೋಡೆ: ಕಳೆದ 1 ವಾರದ ಹಿಂದಷ್ಟೇ ಹಾಸನದಲ್ಲಿರೋ ಪದ್ಮಿನಿ ಸ್ಟುಡಿಯೋಗೆ ಸಾರ್ ನಮಗೆ ಜಸ್ಟ್ ಡಯಲ್ ನಂಬರ್ ಸಿಕ್ತು. ನಮ್ಮ ಮದುವೆ ಮಾರ್ಚ್​​​ನಲ್ಲಿ ಫಿಕ್ಸ್ ಆಗಿದೆ. ಹೀಗಾಗಿ ಹಾಸನದಲ್ಲಿ ಒಳ್ಳೆ ಲೊಕೇಷನ್ ಇದ್ರೆ ಪ್ರೀವೆಡ್ಡಿಂಗ್ ಶೂಟ್ ಮಾಡ್ಕೊಡಿ ಅಂತ ಪುಂಗಿದ್ರಂತೆ. ಕಟ್ಟಾಯ ಸಮೀಪದ ಶೆಟ್ಟಿಹಳ್ಳಿ ಚರ್ಚ್ ಬಳಿಯೇ ಶೂಟ್ ಮಾಡ್ಕೊಡ್ಬೇಕು ಅಂತ ಉಮೇಶ್​​ ಅವರಿಗೆ ಮರುಳು ಮಾಡಿದ್ರಂತೆ. ಅಲ್ದೇ, ಒಂದು ದಿನ ಮುಂಚೆಯೇ 5 ಸಾವಿರ ಅಡ್ವಾನ್ಸ್ ಹಣ ಕೂಡ ಅಕೌಂಟ್​ಗೆ ಹಾಕಿದ್ರಂತೆ.

ಖಾರದ ಪುಡಿ ಎರಚಿ ಹಣ, ಚಿನ್ನ ಕದ್ದು ಎಸ್ಕೇಪ್: ಇದನ್ನೇ ನಂಬ್ಕೊಂಡು ಉಮೇಶ್ ಆರ್ಡರ್ ಬುಕ್ ಮಾಡ್ಕೊಂಡಿದ್ದಾರೆ. ಇದೇ ಫೆಬ್ರವರಿ 15ರಂದು ಬೆಳಗ್ಗೆ 5 ಗಂಟೆಗೆ ಅವರು ಹೇಳಿದ್ದ ಜಾಗಕ್ಕೆ ಉಮೇಶ್ ಹಾಗೂ ವಿಕ್ಕಿ ತೆರಳಿದ್ರಂತೆ. ಬಳಿಕ ಹುಡುಗ-ಹುಡ್ಗಿ ಶೆಟ್ಟಿಹಳ್ಳಿ ಬಳಿ ಇದ್ದಾರೆ ದಾರಿ ತೋರಿಸುವಂತೆ ಉಮೇಶ್ ಬಳಿ ದರೋಡೆಕೋರರು ಕೇಳಿದ್ರಂತೆ. ಅದ್ಯಾವಾಗ  ಶಂಕ್ರಹಳ್ಳಿ ಬಳಿ ಕಾರು ತಲುಪ್ತೋ ಉಮೇಶ್ ಹಾಗೂ ವಿಕ್ಕಿ ಮುಖಕ್ಕೆ ಖಾರದ ಪುಡಿ ಎರಚಿದ್ದಾರೆ. ಅವರ ಬಳಿಯಿದ್ದ ಹಣ, ಚಿನ್ನ, ಕ್ಯಾಮರಾವನ್ನ ಖದ್ದು ಎಸ್ಕೇಪ್ ಆಗಿದ್ದಾರೆ.

ಇನ್ನು, ಕಾರಿನಲ್ಲಿ ಹೋಗ್ತಿರೋವಾಗಲೇ ದುಷ್ಕರ್ಮಿಗಳು ಇಬ್ಬರಿಗೂ ಚಾಕು, ದೊಣ್ಣೆಯಿಂದ ದಾಳಿ ಮಾಡಿದ್ರಂತೆ. ಉಮೇಶ್ ಮತ್ತು ವಿಕ್ಕಿ ಪ್ರಾಣ ಉಳಿಸಿಕೊಳ್ಳೋಕೆ ತಮ್ಮ ಬಳಿ ಇದ್ದ ಹಣವನ್ನ ಕೊಟ್ಟಿದ್ದಾರೆ. ಇಷ್ಟೇ ಅಲ್ಲ ಕ್ಯಾಮರಾ, ಡ್ರೋನ್ ಹಾಗು ಅದರ ಕಿಟ್​​ಗಳನ್ನ ಖದೀಮರು ಕಸಿದ್ಕೊಂಡು ಹೋಗಿದ್ದಾರೆ. ಹಲ್ಲೆಗೊಳಗಾದ ಉಮೇಶ್ ಹಾಗೂ ವಿಕ್ಕಿ ಸ್ನೇಹಿತರಿಗೆ ಕಾಲ್ ಮಾಡಿ ವಿಷಯ ಮುಟ್ಟಿಸಿದ್ರಂತೆ. ಗೊರೂರು ಪೊಲೀಸ್ ಠಾಣೆಗೆ ದೂರು ನೀಡ್ತಿದ್ದಂತೆ, ಪೊಲೀಸರು ಸ್ಥಳಕ್ಕಾಗಮಿಸಿ ಇಂಚಿಂಚು ಜಾಲಾಡಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಒಟ್ನಲ್ಲಿ ಹೊಟ್ಟೆಪಾಡಿಗಾಗಿ ಪ್ರೀವೆಡ್ಡಿಂಗ್ ಆರ್ಡರ್ ನಂಬ್ಕೊಂಡು ಹೋಗಿದ್ದವರು ಕಂಗಾಲಾಗಿದ್ದಾರೆ. ಹಾಡಹಗಲೇ ದರೋಡೆಕೋರರ ಆಟ್ಟಹಾಸ ಕಂಡು ಹಾಸನ ಜಿಲ್ಲೆ ಜನರು ಬೆಚ್ಚಿ ಬಿದ್ದಿದ್ದಂತು ಸತ್ಯ.

Published On - 6:56 pm, Sun, 16 February 20